
ಜೋರ್ಡಾನ್ನ ದೊರೆ ಹಮ್ಜಾ ಬಿನ್ ಹುಸೇನ್ ಗೃಹಬಂಧನ
ಅಮ್ಮಾನ್: ಸರ್ಕಾರದ ನೀತಿ ಕುರಿತ ಟೀಕೆಯ ಕಾರಣ ಜೋರ್ಡಾನ್ ಮಾಜಿ ದೊರೆ ಹಮ್ಜಾ ಬಿನ್ ಹುಸೇನ್ ನನ್ನು ಗೃಹಬಂಧನದಲ್ಲಿರಿಸಲಾಗಿದೆ.
ರಾಜಕುಮಾರನ ವಿಡಿಯೋವನ್ನು ಬಿಬಿಸಿ ಬಿಡುಗಡೆ ಮಾಡಲಾಗಿದೆ. ಇದನ್ನು ರಾಜಕುಮಾರರ ವಕೀಲ ಹಾಗೂ ಹಮ್ಜಾ ಬಿನ್ ಹುಸೇನ್, ರಾಜ ಅಬ್ದುಲ್ಲಾ, ದೇಶದ ನಾಯಕರು ಭ್ರಷ್ಟಾಚಾರ, ಅಸಮರ್ಥತೆ ಮತ್ತು ಕಿರುಕುಳದ ಭಾಗ ಎಂದು ಗಂಭೀರ ಆರೋಪಮಾಡಿದ್ದಾರೆ.
ಜೋರ್ಡಾನ್ ನಲ್ಲಿ ಅಪರೂಪದ ವಿದ್ಯಮಾನವಾಗಿ ಹಲವು ಉನ್ನತ ಮಟ್ಟದ ಜನರನ್ನು ಬಂಧಿಸಿದ ನಂತರ ಮಾಜಿ ದೊರೆಯ ಬಂಧನವಾಗಿದೆ. ಆದರೆ, ಮಾಜಿ ದೊರೆ ಹಮ್ಜಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬುದನ್ನು ಸೇನೆ ನಿರಾಕರಿಸಿದೆ. ಆದರೆ ಅದೇ ಸಮಯದಲ್ಲಿ ದೇಶದ ಭದ್ರತೆ ಮತ್ತು ಸ್ಥಿರತೆ ಕುರಿತು ಯಾವುದೆ ಹೇಳಿಕೆ ನೀಡುವುದನ್ನು ಕೂಡಲೆ ನಿಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಸೇನೆ ಹೇಳಿದೆ.
ರಾಜಕುಮಾರ ಬುಡಕಟ್ಟು ಮುಖಂಡರನ್ನು ಭೇಟಿ ಮಾಡಿ ಜನ ಬೆಂಬಲ ಗಳಿಸದ ನಂತರ ಈ ಕ್ರಮಕೈಗೊಳ್ಳಲಾಗಿದೆ ಆದರೆ ಈ ಆರೋಪವನ್ನು ವೀಡಿಯೊದ ಮೂಲಕ ಪ್ರಿನ್ಸ್ ಹಮ್ಜಾ ನಿರಾಕರಿಸಿ, ಯಾವುದೇ ತಪ್ಪು ಮಾಡಿಲ್ಲ ಪಿತೂರಿ ಮಾಡಿಲ್ಲ ಎಂದು ಹೇಳಿದರು. ಈಜಿಪ್ಟ್, ಅಮೆರಿಕ ಸೌದಿ ಅರೇಬಿಯಾದಂತಹ ದೇಶಗಳು ದೊರೆ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿವೆ.