ರೋವರ್ ಹೊಟ್ಟೆಯಿಂದ ಮಂಗಳನ ಅಂಗಳದಲ್ಲಿ ಇಳಿದ ನಾಸಾದ ಮಿನಿ ಹೆಲಿಕಾಪ್ಟರ್
ನಾಸಾದ ಮಿನಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿದೆ. ಫೆಬ್ರವರಿ 18 ರಂದು ಮಂಗಳ ಗ್ರಹಕ್ಕೆ ಬಂದಿಳಿದ ಪರ್ಸವೆರೆನ್ಸ್ ರೋವರ್ನ ಕೆಳಭಾಗದಲ್ಲಿ ಈ ಮಿನಿ-ಹೆಲಿಕಾಪ್ಟರ್ ಅನ್ನು ಅಳವಡಿಸಿದ್ದರು.
Published: 04th April 2021 03:36 PM | Last Updated: 04th April 2021 03:36 PM | A+A A-

ಹೆಲಿಕಾಫ್ಟರ್
ಹೂಸ್ಟನ್: ನಾಸಾದ ಮಿನಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿದೆ. ಫೆಬ್ರವರಿ 18 ರಂದು ಮಂಗಳ ಗ್ರಹಕ್ಕೆ ಬಂದಿಳಿದ ಪರ್ಸವೆರೆನ್ಸ್ ರೋವರ್ನ ಕೆಳಭಾಗದಲ್ಲಿ ಈ ಮಿನಿ-ಹೆಲಿಕಾಪ್ಟರ್ ಅನ್ನು ಅಳವಡಿಸಿದ್ದರು.
47 ಕೋಟಿ ಕಿಲೋಮೀಟರ್ ದೂರವನ್ನು ನಾಸಾದ ಪರ್ಸವೆರೆನ್ಸ್ ರೋವರ್ನೊಂದಿಗೆ ಪ್ರಯಾಣ ಮಾಡಿದ್ದ ಈ ಮಿನಿ ಹೆಲಿಕಾಪ್ಟರ್ ಇಂದು ರೋವರ್ ಹೊಟ್ಟೆಯಿಂದ ಮಂಗಳ ಗ್ರಹದ ಮೇಲ್ಮೈಗೆ ಬಂದಿಳಿದಿದೆ. ಅದು ಈ ರಾತ್ರಿ ಯಾವ ರೀತಿ ಮುಂದಡಿ ಇರಿಸಲಿದೆ ಎಂಬುದು ಮುಂದಿನ ಗುರಿ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಭಾನುವಾರ ಟ್ವೀಟ್ ಮಾಡಿದೆ.
ಮಿನಿ ಹೆಲಿಕಾಪ್ಟರ್ ಮಂಗಳದ ಮೇಲೆ ಇಳಿಯುವ ಚಿತ್ರವನ್ನು ಪರ್ಸಿವರೆನ್ಸ್ ತೆಗೆದಿದೆ. ಇಷ್ಟು ಕಾಲ ಪರ್ಸವರೆನ್ಸ್ ವಿದ್ಯುತ್ ವ್ಯವಸ್ಥೆಯನ್ನು ಬಳಸುತ್ತಿದ್ದ ಈ ಹೆಲಿಕಾಪ್ಟರ್ ಈಗ ತನ್ನದೇ ಆದ ಬ್ಯಾಟರಿ ನೆರವಿನಿಂದ ಬದುಕುಳಿಯಬೇಕಾಗುತ್ತದೆ. ಮಂಗಳ ಗ್ರಹದ ತಾಪಮಾನ ರಾತ್ರಿ ಸಮಯದಲ್ಲಿ ಮೈನಸ್ 90 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಲಿದೆ. ಅಂತಹ ವಾತಾವರಣದಲ್ಲಿ ಹೆಲಿಕಾಪ್ಟರ್ ಚಲಿಸುವುದು ಅಷ್ಟು ಸುಲಭವಲ್ಲ. ಇದರಲ್ಲಿರುವ ಹೀಟರ್ ಹೆಲಿಕಾಪ್ಟರ್ಗೆ 7 ಡಿಗ್ರಿಗಳಷ್ಟು ತಾಪಮಾನವನ್ನು ಒದಗಿಸುತ್ತದೆ.
ಮುಂದಿನ ಎರಡು ದಿನಗಳಲ್ಲಿ, ಇಂಜನ್ಯೂಯಟಿ ತಂಡ ಹೆಲಿಕಾಪ್ಟರ್ ನ ಸೌರ ಫಲಕಗಳನ್ನು ಪರಿಶೀಲಿಸುತ್ತದೆ. ಅ ನಂತರ ಬ್ಯಾಟರಿಯನ್ನು ರೀಚಾರ್ಜ್ ಮಾಡಿ, ಮೊದಲ ಬಾರಿಗೆ ಹಾರುವ ಮೊದಲು ಮೋಟಾರ್ ಹಾಗೂ ಸಂವೇದಕಗಳನ್ನು ಪರಿಶೀಲಿಸುತ್ತದೆ. ಹೆಲಿಕಾಪ್ಟರ್ ಈ ತಿಂಗಳ 11 ರಂದು ತನ್ನ ಮೊದಲ ಹಾರಾಟ ನಡೆಸಲಿದೆ.
ಭೂಮಿಯ ಸಾಂದ್ರತೆಯ ಕೇವಲ ಶೇಕಡ ಒಂದರಷ್ಟು ಮಾತ್ರ ಹೊಂದಿರುವ ಮಂಗಳ ಗ್ರಹದ ಮೇಲೆ ಹಾರಾಟ ನಡೆಸುವುದು ಅಷ್ಟು ಸುಲಭವಲ್ಲ. ಅದೇ ಸಮಯದಲ್ಲಿ, ಮಂಗಳ ಗ್ರಹಲ್ಲಿ ಭೂಮಿಯ ಗುರುತ್ವಾಕರ್ಷಣೆಯ ಮೂರನೇ ಒಂದು ಭಾಗದಷ್ಟು ಮಾತ್ರ ಎಳೆಯುವಿಕೆಗೆ ಸಹಾಯ ಮಾಡಲಿದೆ. ಮೊದಲ ಪ್ರಯತ್ನದ ಭಾಗವಾಗಿ, ಅದು ಹತ್ತು ಅಡಿಗಳಷ್ಟು ಮೇಲಕ್ಕೆ ಹಾರಿ, 30 ಸೆಕೆಂಡುಗಳ ಕಾಲ ಅಲ್ಲಿಯೇ ಇದ್ದು ನಂತರ ಮತ್ತೆ ಕೆಳಕ್ಕೆ ಇಳಿಯುತ್ತದೆ.