ಆದೇಶಗಳನ್ನು ಪಾಲಿಸುವುದಿಲ್ಲ: ಗೃಹಬಂಧನ ಕುರಿತು ಧಿಕ್ಕಾರದ ಧ್ವನಿಯೆತ್ತಿದ ಜೋರ್ಡಾನ್‌ ರಾಜಕುಮಾರ ಹಮ್ಜಾ!

ಮಲಸಹೋದರ ರಾಜ ಅಬ್ದುಲ್ಲಾ-2ರ ವಿರುದ್ಧ ಸಂಚು ಆರೋಪಕ್ಕೆ ಗುರಿಯಾಗಿ ಗೃಹ ಬಂಧನದಲ್ಲಿರುವ ಜೋರ್ಡಾನ್‌ನ ರಾಜಕುಮಾರ ಹಮ್ಜಾ ತಾನು ಗೃಹ ಬಂಧನದ ಆದೇಶವನ್ನು ಪಾಲಿಸುವುದಿಲ್ಲ ಎಂದಿದ್ದಾರೆ.

Published: 05th April 2021 04:15 PM  |   Last Updated: 05th April 2021 05:08 PM   |  A+A-


Jorden_Prince1

ಜೋರ್ಡಾನ್ ದೊರೆ

Posted By : Nagaraja AB
Source : The New Indian Express

ಅಮ್ಮಾನ್: ಮಲಸಹೋದರ ರಾಜ ಅಬ್ದುಲ್ಲಾ-2ರ ವಿರುದ್ಧ ಸಂಚು ಆರೋಪಕ್ಕೆ ಗುರಿಯಾಗಿ ಗೃಹ ಬಂಧನದಲ್ಲಿರುವ ಜೋರ್ಡಾನ್‌ನ ರಾಜಕುಮಾರ ಹಮ್ಜಾ ತಾನು ಗೃಹ ಬಂಧನದ ಆದೇಶವನ್ನು ಪಾಲಿಸುವುದಿಲ್ಲ ಎಂದಿದ್ದಾರೆ.  ಸಾಮ್ರಾಜ್ಯದ ಭದ್ರತೆಯನ್ನು ಅಸ್ಥಿರಗೊಳಿಸುವ  ದೇಶದ್ರೋಹದ ಪಿತೂರಿಯಲ್ಲಿ ಹಮ್ಜಾ ಭಾಗಿಯಾಗಿರುವುದಾಗಿ ಎಂದು ಸರ್ಕಾರ ಆರೋಪಿಸಿದ್ದು,  ಅವರನ್ನು ಗೃಹ ಬಂಧನದಲ್ಲಿರಿಸಿದೆ. 16 ಜನರನ್ನು  ಬಂಧಿಸಲಾಗಿದೆ. 

ಆದರೆ ತನನ್ನು ಅಮ್ಮನ್ ಅರಮನೆಯೊಳಗೆ ಇರಲು ಆದೇಶಿಸಲಾಗಿದೆ ಎಂದು ಹೇಳುವ 41 ವರ್ಷದ ಹಮ್ಜಾ, ಓಡಾಟವನ್ನು ಸೀಮಿತಗೊಳಿಸುವ ಆದೇಶವನ್ನು ಧಕ್ಕಿರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.  ನಾನು ಇದೀಗ ಓಡಾಡುವಂತಿಲ್ಲ, ಆದರೆ, ನೀನು ಹೊರಗೆ ಹೋಗುವಂತಿಲ್ಲ, ಟ್ವೀಟ್ ಮಾಡುವಂತಿಲ್ಲ, ಜನರೊದಿಗೆ ಸಂಪರ್ಕಿಸುವಿಲ್ಲ, ಕುಟುಂಬದವರನ್ನು ನೋಡುವಂತಿಲ್ಲ ಎಂಬಂತಹ ಆದೇಶವನ್ನು ಪಾಲಿಸುವುದಿಲ್ಲ ಎಂದು ಭಾನುವಾರ ತಡ ರಾತ್ರಿ ಅವರು ಆಡಿಯೋವೊಂದನ್ನು
ಟ್ವಿಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

 ಅಬ್ದುಲ್ಲಾ, 2004ರಲ್ಲಿ ಮಾಜಿ ರಾಜಕುಮಾರ್ ಹಮ್ಜಾನಿಂದ ಕಿರೀಟವನ್ನು ಕಿತ್ತುಕೊಂಡಿದ್ದ. ಶನಿವಾರ ಬಿಬಿಸಿಗೆ ವಿಡಿಯೋವೊಂದನ್ನು ಕಳುಹಿಸಿರುವ ಹಮ್ಜಾ, ಜೋರ್ಡಾನ್ ನ ಹಿರಿಯ ಮಿಲಿಟರಿ ಅಧಿಕಾರಿಗಳಿಂದ ತಾನು ಗೃಹ ಬಂಧನದಲ್ಲಿ ಇರುವುದಾಗಿ ತಿಳಿಸಿದ್ದಾರೆ.  ಮತ್ತೊಂದು ವಿಡಿಯೋ  ಬಿಡುಗಡೆ ಮಾಡಿರುವ ಹಮ್ಜಾ,  ಅರಮನೆಯಲ್ಲಿನ  ಪ್ರಕ್ಷುಬ್ಧತೆಯು ಜೋರ್ಡಾನ್‌ನಲ್ಲಿ ಬಿರುಕು ಮೂಡಿಸಿದೆ ಎಂದಿದ್ದಾರೆ. ಇದನ್ನು ಸಾಮಾನ್ಯವಾಗಿ ಮಧ್ಯಪ್ರಾಚ್ಯದಲ್ಲಿ ಸ್ಥಿರತೆಯ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ.

ಅಮೆರಿಕಾ ಮತ್ತು ಪ್ರಮುಖ ಗಲ್ಫ್ ರಾಷ್ಟ್ರಗಳು ದೊರೆ ಅಬ್ದುಲ್ಲಾಗೆ ಬೆಂಬಲವನ್ನು ವ್ಯಕ್ತಪಡಿಸಿದೆ. ವಿಫಲವಾದ ದಂಗೆ ವರದಿಗಳ ಮಧ್ಯೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಬೇಕಾದ ಕ್ರಮಗಳನ್ನು ತಿಳಿಸಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp