ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರ ಬಂಧನ: ಪಾಕ್ ಅಧಿಕಾರಿಗಳು
ನಿಷೇಧಿಕ ಉಗ್ರ ಸಂಘಟನೆಗೆ ಸೇರಿದ್ದ ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರನ್ನು ಮಸೀದಿಯಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.
Published: 06th April 2021 05:59 PM | Last Updated: 06th April 2021 05:59 PM | A+A A-

ಬಂಧನ (ಸಾಂದರ್ಭಿಕ ಚಿತ್ರ)
ಲಾಹೋರ್: ನಿಷೇಧಿಕ ಉಗ್ರ ಸಂಘಟನೆಗೆ ಸೇರಿದ್ದ ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರನ್ನು ಮಸೀದಿಯಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರನ್ನು ಬಂಧಿಸಲಾಗಿದ್ದು ಜನರ ನಡುವೆ ದ್ವೇಷದ ಅಂಶಗಳಿರುವ ವಸ್ತುಗಳನ್ನು ಪ್ರಚಾರ ಮಾಡಿ ದೇಣಿಗೆ ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಲಾಹೋರ್ ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ (ಡಿಹೆಚ್ಎ) ಬಳಿ ಐಎಸ್ಐಎಸ್ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ದೊರೆತಿತ್ತು. ಸಿಟಿಡಿ ದಾಳಿ ನಡೆಸಿ ಐವರು ಉಗ್ರರನ್ನು ಬಂಧಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತ ಉಗ್ರರನ್ನು ನಜೀಫ್ ಉಲ್ಲಾ, ಜಿಯಾ ಉರ್ ರೆಹಮಾನ್, ಮುಹಮ್ಮದ್ ಇಸ್ತಿಯಾಕ್, ಅಬ್ದುಲ್ ರೆಹೆಮಾನ್ ಭಟ್, ಮಲೀಕ್ ಕಾಸಿಫ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ, ನಿಷೇಧಗೊಂಡ 40 ಪುಸ್ತಕಗಳು, ಹಣ, ದಾಶ್ (ಇಸ್ಲಾಮಿಕ್ ಭಯೋತ್ಪಾದನೆಗೆ ಸಂಬಂಧಿಸಿದ ಬರಹಗಳು) ನ್ನು ವಶಕ್ಕೆ ಪಡೆಯಲಾಗಿದೆ.