ತಕ್ಷಣದಿಂದ ತಾಳೆ ಎಣ್ಣೆಯ ಆಮದಿಗೆ ಶ್ರೀಲಂಕಾ ನಿಷೇಧ

ತಕ್ಷಣದಿಂದ ಜಾರಿಗೆ ಬರುವಂತೆ ಶ್ರೀಲಂಕಾ ಸರ್ಕಾರ ತಾಳೆ ಎಣ್ಣೆಯನ್ನು ನಿಷೇಧಿಸಿದೆ. 

Published: 06th April 2021 06:00 PM  |   Last Updated: 07th April 2021 01:28 PM   |  A+A-


Sri Lanka bans palm oil imports with immediate effect; asks plantations to uproot trees

ತಾಳೆ ಎಣ್ಣೆಯ ಆಮದನ್ನು ತಕ್ಷಣದಿಂದ ನಿಷೇಧಿಸಿದ ಶ್ರೀಲಂಕಾ: ಮರಗಳನ್ನು ಕಿತ್ತೆಸೆಯುವಂತೆ ಆದೇಶ

Posted By : Srinivas Rao BV
Source : The New Indian Express

ಕೊಲಂಬೋ: ತಕ್ಷಣದಿಂದ ಜಾರಿಗೆ ಬರುವಂತೆ ಶ್ರೀಲಂಕಾ ಸರ್ಕಾರ ತಾಳೆ ಎಣ್ಣೆಯ ಆಮದನ್ನು ನಿಷೇಧಿಸಿದೆ. 

ಲಂಕಾ ಅಧ್ಯಕ್ಷ ಗೋಟಾಬಾಯ ರಾಜಪಕ್ಸೆ ಆದೇಶ ಹೊರಡಿಸಿದ್ದು, ಇದೇ ವೇಳೆ ಸ್ಥಳೀಯ ಪ್ಲಾಂಟೇಷನ್ ತೆರವುಗೊಳಿಸಿ ರಬ್ಬರ್ ಮರಗಳನ್ನು ಅಥವಾ ಪರಿಸರ ಸ್ನೇಹಿ ಬೆಳೆಗಳನ್ನು ಬೆಳೆಸುವಂತೆ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ. 

ಸ್ಥಳೀಯ ತೆಂಗಿನ ಎಣ್ಣೆ ಉದ್ಯಮಕ್ಕೆ ಶ್ರೀಲಂಕಾ ಸರ್ಕಾರದ ಈ ಕ್ರಮ ಉಪಯೋಗವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶ್ರೀಲಂಕಾ ಸರ್ಕಾರದಲ್ಲಿ ತಾಳೆ ಎಣ್ಣೆ (ಪಾಮ್ ಆಯಿಲ್) ತಕ್ಷಣದಿಂದಲೇ ನಿಷೇಧವಾಗಲಿದೆ.

ಕಸ್ಟಮ್ಸ್ ಡಿಜಿಗೂ ಈ ಆದೇಶದ ಪ್ರತಿಯನ್ನು ಕಳಿಸಲಾಗಿದೆ. ತಾಳೆ ಎಣ್ಣೆಯ ನಿಷೇಧಕ್ಕೆ ಪೂರ್ವಭಾವಿಯಾಗಿ ಲಂಕಾದ ಅಧ್ಯಕ್ಷರು ತಾಳೆ ಎಣ್ಣೆ ಮರಗಳನ್ನು ಬೆಳೆಸುವುದನ್ನು ಕ್ರಮೇಣ ಕಡಿಮೆ ಮಾಡಬೇಕೆಂದು ಕರೆ ನೀಡಿದ್ದರು.
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp