ವೇದಿಕೆಯಲ್ಲೇ ಹೈಡ್ರಾಮ: ಮಿಸಸ್ ಶ್ರೀಲಂಕಾ ಬ್ಯೂಟಿ ವಿಜೇತೆಯ ಮುಕುಟ ಕಳಚಿದ ಮಿಸಸ್ ವರ್ಲ್ಡ್ ವಿಜೇತೆ!

ಮಿಸಸ್ ಶ್ರೀಲಂಕಾ ಬ್ಯೂಟಿ ಸ್ಪರ್ಧೆಯ ವಿಜೇತೆ ಪುಷ್ಪಿಕ ಡೇ ಸಿಲ್ವಾ ಅವರ ಮುಕುಟವನ್ನು, ಮಾಜಿ ವಿಜೇತೆ, 2020 ರ ಮಿಸಸ್ ವರ್ಲ್ಡ್ ವಿಜೇತೆ ವೇದಿಕೆಯಲ್ಲೇ ಕಳಚಿದ ಘಟನೆ ನಡೆದಿದೆ. 

Published: 07th April 2021 06:43 PM  |   Last Updated: 07th April 2021 06:54 PM   |  A+A-


WATCH | Newly crowned Mrs Sri Lanka injured in on-stage brawl over marriage status

ವೇದಿಕೆಯಲ್ಲೇ ಹೈಡ್ರಾಮ: ಮಿಸಸ್ ಶ್ರೀಲಂಕಾ ಬ್ಯೂಟಿ ವಿಜೇತೆಯ ಮುಕುಟ ಕಳಚಿದ ಮಿಸಸ್ ವರ್ಲ್ಡ್ ವಿಜೇತೆ!

Posted By : Srinivas Rao BV
Source : Online Desk

ಮಿಸಸ್ ಶ್ರೀಲಂಕಾ ಬ್ಯೂಟಿ ಸ್ಪರ್ಧೆಯ ವಿಜೇತೆ ಪುಷ್ಪಿಕ ಡೇ ಸಿಲ್ವಾ ಅವರ ಮುಕುಟವನ್ನು, ಮಾಜಿ ವಿಜೇತೆ, 2020 ರ ಮಿಸಸ್ ವರ್ಲ್ಡ್ ವಿಜೇತೆ ವೇದಿಕೆಯಲ್ಲೇ ಕಳಚಿದ ಘಟನೆ ನಡೆದಿದೆ. 

2019 ರಲ್ಲಿ ಮಿಸಸ್ ಶ್ರೀಲಂಕಾ ಸ್ಪರ್ಧೆಯ ವಿಜೇತೆಯಾಗಿದ್ದ ಕ್ಯಾರೋಲಿನ್ ಜೂರಿ, ಡೇ ಸಿಲ್ವಾ ಅವರು ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದ್ದರಿಂದ ಈಕೆಯನ್ನು ಮಿಸಸ್ ಶ್ರೀಲಂಕಾ ಬ್ಯೂಟಿ ಸ್ಪರ್ಧೆಯ ವಿಜೇತೆ ಎಂದು ಘೋಷಿಸಿರುವುದು ತಪ್ಪು ಎಂದು ವೇದಿಕೆಯಲ್ಲೇ ಡೇ ಸಿಲ್ವಾ ಅವರ ಮುಕುಟವನ್ನು ತೆಲೆಯಿಂದ ಕಿತ್ತು ತೆಗೆದು, ಅದನ್ನು ರನ್ನರ್ ಅಪ್ ಗೆ ತೊಡಿಸಿದ್ದಾರೆ. 

ವೇದಿಕೆಯಲ್ಲೇ ನಡೆದ ಈ ಹೈಡ್ರಾಮಾದ ವಿಡಿಯೋ ವೈರಲ್ ಆಗತೊಡಗಿದೆ. "ಪತಿಯಿಂದ ವಿಚ್ಛೇದನ ಪಡೆದ ಮಹಿಳೆಯರು ಈ ಶೋ ನಲ್ಲಿ ಭಾಗವಹಿಸಕೂಡದು, ವಿಜೇತರನ್ನಾಗಿ ಅಂತಹವರನ್ನು ಆಯ್ಕೆ ಮಾಡಬಾರದು, ಆದ ಕಾರಣ ನಾನು ಈ ರೀತಿ ಮಾಡಿದೆ" ಎಂದು ಕ್ಯಾರೋಲಿನ್ ಜೂರಿ ಹೇಳಿದ್ದಾರೆ.
 
ಈ ಬಗ್ಗೆ ಮರುದಿನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವ ಪುಷ್ಪಿಕ ಡೇ ಸಿಲ್ವಾ ಮುಕುಟ ಕಿತ್ತು ತೆಗೆದ ಪರಿಣಾಮ ತಮ್ಮ ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿರುವುದಾಗಿ ಹೇಳಿದ್ದಾರೆ. 

ಇನ್ನು ಕಾರ್ಯಕ್ರಮದ ಆಯೋಜಕರೂ ಸಹ ಡೇ ಸಿಲ್ವಾ ಅವರ ಬಳಿ ಕ್ಷಮೆ ಕೋರಿದ್ದು, ಆಕೆ ಪತಿಯಿಂದ ದೂರವಾಗಿದ್ದಾರೆಯೇ ಹೊರತು ವಿಚ್ಛೇದನ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿ ಡೇ ಸಿಲ್ವಾ ಅವರೇ 2021 ನೇ ಸಾಲಿನ ವಿಜೇತೆ ಎಂಬುದನ್ನು ಖಚಿತಪಡಿಸಿದ್ದಾರೆ. 

"2020 ರ ಬ್ಯೂಟಿ ಸ್ಪರ್ಧೆಯ ವಿಜೇತೆ ಕ್ಯಾರೋಲಿನ್ ಜೂರಿ ವೇದಿಕೆಯಲ್ಲಿ ನಡೆದುಕೊಂಡ ರೀತಿಗೆ ನಾವು ವಿಷಾದಿಸುತ್ತೆವೆ. ಆಕೆಯ ನಡೆ ಶ್ರೀಲಂಕಾದ ಸೌಂದರ್ಯ ಸ್ಪರ್ಧೆಯ ನೀತಿ ಸಂಹಿತೆಯ ವಿರುದ್ಧವಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಇನ್ನು ತಾನು ವಿಚ್ಛೇದನ ಪಡೆದಿದ್ದರೆ, ಸ್ಪರ್ಧೆಯಲ್ಲಿ ಈ ಹಂತಕ್ಕೆ ಬರುತ್ತಲೇ ಇರಲಿಲ್ಲ ಎಂದೂ ಡೇ ಸಿಲ್ವಾ ಸ್ಪಷ್ಟನೆ ನೀಡಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp