ಕೋವಿಡ್-19 ಹಾಟ್ ಸ್ಪಾಟ್ ದೇಶವೆಂದು ಭಾರತದಿಂದ ಬರುವ ಪ್ರಯಾಣಿಕರಿಗೆ ನ್ಯೂಜಿಲ್ಯಾಂಡ್ ನಿರ್ಬಂಧ

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತನ್ನ ಪ್ರಜೆಗಳೂ ಸೇರಿದಂತೆ ಭಾರತದಿಂದ ಪ್ರಯಾಣಿಸುವವರಿಗೆ ನ್ಯೂಜಿಲ್ಯಾಂಡ್ ಸರ್ಕಾರ ನಿರ್ಬಂಧ ವಿಧಿಸಿದೆ. 

Published: 08th April 2021 12:17 PM  |   Last Updated: 08th April 2021 12:18 PM   |  A+A-


COVID-19

ಕೋವಿಡ್-19

Posted By : Srinivas Rao BV
Source : The New Indian Express

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತನ್ನ ಪ್ರಜೆಗಳೂ ಸೇರಿದಂತೆ ಭಾರತದಿಂದ ಪ್ರಯಾಣಿಸುವವರಿಗೆ ನ್ಯೂಜಿಲ್ಯಾಂಡ್ ಸರ್ಕಾರ ನಿರ್ಬಂಧ ವಿಧಿಸಿದೆ. 

ಪ್ರಧಾನಿ ಜಸಿಂಡಾ ಅರ್ಡೆರ್ನ್ ಈ ಬಗ್ಗೆ ಆದೇಶ ಹೊರಡಿಸಿದ್ದು ಏ.11 ರಿಂದ ಎರಡು ವಾರಗ (ಏ.28 ರವರೆಗೂ) ಈ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ. 

ಭಾರತದಲ್ಲಿ ಈಗ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಿಂದ ಬರುವ ನ್ಯೂಜಿಲ್ಯಾಂಡ್ ಪ್ರಜೆಗಳು ಹಾಗೂ ಇನ್ನಿತರ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ಪ್ರಕಟಿಸಿದೆ. 
 
23 ಮಂದಿಯಲ್ಲಿ ಹೊಸದಾಗಿ ಕೊರೋನಾ ಪಾಸಿಟಿವ್ ಕಾಣಿಸಿದ್ದು, ಐಸೊಲೇಷನ್ ನಲ್ಲಿ ಇರಿಸಲಾಗಿದೆ ಈ ಪೈಕಿ 17 ಮಂದಿ ಭಾರತದಿಂದ ಬಂದವರಾಗಿರುವುದರಿಂದ ನ್ಯೂಜಿಲ್ಯಾಂಡ್ ಈ ಕ್ರಮಕ್ಕೆ ಮುಂದಾಗಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp