ಅಮೆರಿಕಾದಲ್ಲಿ ಭಾರತೀಯ ದಂಪತಿ ಶವಪತ್ತೆ: ಬಾಲ್ಕನಿಯಲ್ಲಿ ನಿಂತು ಅಳುತ್ತಿದ್ದ 4 ವರ್ಷದ ಮಗುವಿನಿಂದ ಪ್ರಕರಣ ಬೆಳಕಿಗೆ

ಭಾರತೀಯ ಮೂಲದ ದಂಪತಿ ಅಮೆರಿಕಾದಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿದ್ದುದ್ದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಭಾರತೀಯ ಮೂಲದ ದಂಪತಿ ಅಮೆರಿಕಾದಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿದ್ದುದ್ದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಅಮೆರಿಕಾದ ಉತ್ತರ ಅರ್ಲಿಂಗ್ಟನ್ ನನ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಪತ್ನಿಯ ಹೊಟ್ಟೆಗೆ ಪತಿಯೇ ಇರಿದು ಕೊಂದಿದ್ದಾನೆ ಎಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ. ಬಾಲಾಜಿ ಭರತ್ ರುದ್ರಾವರ್ ಮತ್ತು ಆರತಿ ಸಾವನ್ನಪ್ಪಿದ್ದಾರೆ.

ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರುವುದನ್ನು ನೋಡಿದ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಬಾಗಿಲು ಮುರಿದು ಒಳಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಬಾಲಾಜಿ ತಂದೆ ಭರತ್ ರುದ್ರಾವರ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ತಂಡ ತನಿಖೆ ನಡೆಸಲು ಮುಂದಾಗಿದೆ. ಇಬ್ಬರನ್ನು ಇರಿದು ಸಾಯಿಸಲಾಗಿದೆ. ಪೊಲೀಸರು ಕುಟುಂಬಕ್ಕೆ ತಿಳಿಸಿದ್ದಾರೆ.

ನನ್ನ ಸೊಸೆ 7 ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿಸಿದ್ದಾರೆ. ದುರಂತಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ದಂಪತಿ ಚೆನ್ನಾಗಿಯೇ ಇದ್ದರು, ನೆರೆಹೊರೆಯವರ ಜೊತೆಯೂ ಚೆನ್ನಾಗಿದ್ದರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com