ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಿಲ್ಲ; ಸಿಇಓ ಸುಂದರ್‌ ಪಿಚ್ಚೈಗೆ ಸಾವಿರಾರು ಉದ್ಯೋಗಿಗಳಿಂದ ಬಹಿರಂಗ ಪತ್ರ!

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ಆಲ್ಫಾಬೆಟ್ ಉದ್ಯೋಗಿಗಳು ಸಿಇಓ ಸುಂದರ್ ಪಿಚ್ಚೈ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಸುಂದರ್ ಪಿಚೈ
ಸುಂದರ್ ಪಿಚೈ

ನವದೆಹಲಿ: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ಆಲ್ಫಾಬೆಟ್ ಉದ್ಯೋಗಿಗಳು ಸಿಇಓ ಸುಂದರ್ ಪಿಚ್ಚೈ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. 

ಕೆಲಸ ಮಾಡಲು ಪೂರಕವಾದ ಸುರಕ್ಷಿತ ವಾತಾವರಣ ಸೃಷ್ಟಿಸುವಂತೆ ಅವರು ಕೋರಿದ್ದಾರೆ. ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಅನುಭವಿಸಿದ ಕಿರುಕುಳ  ಕುರಿತು ಪತ್ರಿಕೆಯೊಂದರಲ್ಲಿ ಪ್ರಕಟಣೆಗೊಂಡ ಸುದ್ದಿಯನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಸುಮಾರು 1,300 ಉದ್ಯೋಗಿಗಳು ಈ ಬಹಿರಂಗ ಪತ್ರವನ್ನು 'ಮೀಡಿಯಾ' ಎಂಬ ಆನ್‌ಲೈನ್ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉದ್ಯೋಗಿಗಳ ಹೆಸರನ್ನು ಸಹ ಅದರಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕಿರುಕುಳದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳನ್ನು ಟೀಮ್ ಲೀಡರ್‌ ಸ್ಥಾನಮಾನದಿಂದ ತೆಗೆದುಹಾಕಬೇಕು, ಅಪರಾಧಿಗಳಿಗೆ ರಕ್ಷಣೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿದವರೊಂದಿಗೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ತಂಡಗಳನ್ನು ಬದಲಾಯಿಸುವಂತೆ ಕೋರಿದ್ದಾರೆ.

ಕಿರುಕುಳಗಳಿಗೆ ಒಳಗಾದವರನ್ನು ರಕ್ಷಿಸುವ ಬದಲು ಕಿರುಕುಳ ನೀಡಿದವರ ರಕ್ಷಣೆಗೆ ಆಲ್ಫಾಬೆಟ್‌ ಮುಂದಾಗುತ್ತಿರುವುದು ಹೊಸತೇನು ಅಲ್ಲ. ಇದು ಬಹಳ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ ಎಂದು ಆರೋಪಿಸಲಾಗಿದೆ. ತನಗೆ ಕಿರುಕುಳ ನೀಡಿದವರ ವಿರುದ್ದ ದೂರು ನೀಡಿದ ವ್ಯಕ್ತಿ ಆಲ್ಫಾಬೆಟ್‌ ಸಂಸ್ಥೆ ತೊರೆಯುವಂತೆ ಮಾಡಲಾಗುತ್ತಿದೆ. ಹಿಂಸೆ ನೀಡಿದವರು ಆಲ್ಫಾಬೆಟ್‌ ನಲ್ಲಿಯೇ ಮುಂದುವರಿಯುತ್ತಾರೆ. ಅವರಿಗೆ ರಿವಾರ್ಡ್‌ ಸಹ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com