ಅಮೆರಿಕ ಸರ್ಕಾರದ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯರು ನೇಮಕ

ಅಮೆರಿಕ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ಬುಧವಾರ ಪ್ರಕಟಿಸಿದ್ದಾರೆ.
ಜೋ ಬೈಡೆನ್
ಜೋ ಬೈಡೆನ್

ವಾಷಿಂಗ್ಟನ್: ಅಮೆರಿಕ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ಬುಧವಾರ ಪ್ರಕಟಿಸಿದ್ದಾರೆ.

ಅಟಾರ್ನಿ ಜನರಲ್ ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಾಮಕರಣಗೊಳಿಸಿದ್ದೇವೆ ಎಂದು ಬೈಡೆನ್ ಬುಧವಾರ ಹೇಳಿದ್ದಾರೆ. 

ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರ ಆಡಳಿತ ವರ್ಗಕ್ಕೆ ಸೇರಿದ್ದ ಮೀರಾ ಜೋಶಿ ಹಾಗೂ ರಾಧಿಕಾ ಫಾಕ್ಸ್ ನಾಮಕರಣಗೊಳಿಸುವ ಮೂಲಕ ಬಡ್ತಿ ನೀಡಲಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ. 

ಶ್ವೇತಭವನ, ಮೀರಾ ಜೋಶಿ ಅವರನ್ನು ಸಾರಿಗೆ ಇಲಾಖೆಯ ವಾಹನ ನಿಯಂತ್ರಣ ಹಾಗೂ ಸುರಕ್ಷತಾ ಕಾರ್ಯನಿರ್ವಾಹಕರನ್ನಾಗಿ ನೇಮಿಸಿದೆ. ಜಲ, ಹಾಗೂ ಎನ್ವಿರಾನ್ಮೆಂಟಲ್ ರಕ್ಷಣಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ ರಾಧಿಕಾ ಫಾಕ್ಸ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ)ಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಪೈಸಲ್ ಅಮೀನ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com