ಇಳಿದ ಕೊರೋನಾ: ಇಸ್ರೇಲ್‍ ನಲ್ಲಿ ಇನ್ನು ಮುಂದೆ ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!

ಕೊರೋನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೆಲ್ಅವಿವ್: ಕೊರೋನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.

‘ದೇಶಾದ್ಯಂತ ಕೋವಿಡ್‍ ಸೋಂಕಿನ ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಪ್ರೊ. ಹೆಜಿ ಲೆವಿ ಅವರು ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ. ಇದರಿಂದಾಗಿ ತೆರೆದ ಪ್ರದೇಶದಲ್ಲಿ ಮುಖವಾಡ ಧರಿಸುವುದು ಅಗತ್ಯವಿರುವುದಿಲ್ಲ.’ ಇದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ.

ಆದರೂ, ದೊಡ್ಡ ಹೊರಾಂಗಣದಲ್ಲಿ ನಡೆಯುವ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮುಖಗವಸು ಧರಿಸಬೇಕೆಂದು ಸಚಿವಾಲಯ ಸಲಹೆ ನೀಡಿದೆ. ಒಳಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com