ಕೋವಿಡ್-19 ಸೋಂಕು ಹೆಚ್ಚಳ ಹಿನ್ನಲೆ: ಭಾರತಕ್ಕೆ ತೆರಳದಂತೆ ನಾಗರಿಕರಿಗೆ ಅಮೆರಿಕ ಸೂಚನೆ

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ, ಭಾರತಕ್ಕೆ ತೆರಳದಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. 

Published: 20th April 2021 08:22 AM  |   Last Updated: 20th April 2021 08:22 AM   |  A+A-


US Citizens in India

ಸಂಗ್ರಹ ಚಿತ್ರ

Posted By : Srinivasamurthy VN
Source : ANI

ವಾಷಿಂಗ್ಟನ್: ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ, ಭಾರತಕ್ಕೆ ತೆರಳದಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. 

ಈ ಬಗ್ಗೆ ಅಮೆರಿಕದ ಸಿಡಿಸಿ (Centers for Disease Control and Prevention) ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭ ಹೊರತು ಪಡಿಸಿ ಭಾರತಕ್ಕೆ ಪ್ರಯಾಣ ಕೈಗೊಳ್ಳದಂತೆ ಸೂಚನೆ ನೀಡಿದೆ. 

'ಭಾರತದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಅಮೆರಿಕ ನಾಗರಿಕರು ಭಾರತ ಪ್ರವಾಸ ಅಥವಾ ಪ್ರಯಾಣ ಕೈಗೊಳ್ಳಬಾರದು. ನೀವು ಸಂಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡಿದ್ದರೂ ಕೂಡ ಭಾರತದ ಡಬಲ್ ರೂಪಾಂತರ ವೈರಸ್ ಸೋಂಕು ನಿಮ್ಮನ್ನು ಭಾದಿಸಬಹುದು. ಹೀಗಾಗಿ ತುರ್ತು ಸಂದರ್ಭ  ಹೊರತು ಪಡಿಸಿ ಭಾರತ ಪ್ರವಾಸ ಅಥವಾ ಪ್ರಯಾಣವನ್ನು ತಡೆ ಹಿಡಿಯಿರಿ. ಒಂದು ವೇಳೆ ನೀವು ಭಾರತಕ್ಕೆ ತೆರಳಲೇ ಬೇಕು ಎಂದಾದರೆ ಪ್ರವಾಸಕ್ಕೂ ಮೊದಲು ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು ಸಂಪೂರ್ಣ ಸಮರ್ಥರಾಗಿ ತೆರಳಿ ಎಂದು ಸಲಹೆ ನೀಡಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
India-China

ಕೋವಿಡ್ ವಿರುದ್ಧ ಹೋರಾಡಲು ಭಾರತವು ಚೀನಾದ ಸಹಾಯವನ್ನು ತೆಗೆದುಕೊಳ್ಳಬೇಕೇ?


Result
ಹೌದು, ಇದು ತುರ್ತು ಪರಿಸ್ಥಿತಿ
ಇಲ್ಲ, ಎಂದಿಗೂ ಬೇಡ
flipboard facebook twitter whatsapp