ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನ'ದಲ್ಲಿ ಇರಿಸಿ, ದೀರ್ಘಾವಧಿಯ ಸಂಬಂಧಗಳತ್ತ ಗಮನ ಹರಿಸಿ: ಭಾರತಕ್ಕೆ ಚೀನಾ

ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದ್ದು ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನದಲ್ಲಿ' ಇರಿಸಿ ಮತ್ತು ದೀರ್ಘಾವಧಿಯ ಅಭಿವೃದ್ಧಿಗೆ ಭಾರತ ಮುಂದಾಗಬೇಕು ಎಂದು ಹೇಳಿದೆ.

Published: 21st April 2021 11:35 PM  |   Last Updated: 21st April 2021 11:35 PM   |  A+A-


Representation purpose only

ಸಂಗ್ರಹ ಚಿತ್ರ

Posted By : Vishwanath S
Source : PTI

ಬೀಜಿಂಗ್: ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದ್ದು ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನದಲ್ಲಿ' ಇರಿಸಿ ಮತ್ತು ದೀರ್ಘಾವಧಿಯ ಅಭಿವೃದ್ಧಿಗೆ ಭಾರತ ಮುಂದಾಗಬೇಕು ಎಂದು ಹೇಳಿದೆ.

ಎಲ್‌ಎಸಿ ಉದ್ದಕ್ಕೂ ಶಾಂತಿ ಕಾಪಾಡಲು ಉಭಯ ದೇಶಗಳ ನಾಯಕರ ನಡುವೆ ಒಮ್ಮತದ ಮಾತುಕತೆ ನಡೆದಿದ್ದರೂ ಚೀನಾ ಮಾತ್ರ ಕಾರ್ಪೆಟ್ ಕೆಳಗೆ ನುಗ್ಗುವ ಪ್ರಯತ್ನ ಮಾಡುತ್ತಿದೆ ಎಂದು ಚೀನಾ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಪ್ರಶ್ನಿಸಿದ್ದರು. 

ಈ ಸಂಬಂಧ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಭಾರತ ದ್ವಿಪಕ್ಷೀಯ ಮಾತುಕತೆ ಸಂಬಂಧ ದೀರ್ಘಾವಧಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. 

'ಚೀನಾ-ಭಾರತದ ಗಡಿ ಪರಿಸ್ಥಿತಿಯ ವಿಷಯದಲ್ಲಿ, ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸುರಕ್ಷತೆಯನ್ನು ಕಾಪಾಡಲು ನಾವು ದೃಢವಾಗಿ ನಿರ್ಧರಿಸಿದ್ದೇವೆ' ಎಂದು ವಾಂಗ್ ಹೇಳಿದರು.

ಜಾಗತಿಕ ವ್ಯವಹಾರಗಳ ಭಾರತೀಯ ಮಂಡಳಿಯ ವರ್ಚುವಲ್ ಶೃಂಗದಲ್ಲಿ ಮಾತನಾಡಿದ್ದ ವಿಕ್ರಮ್ ಮಿಸ್ರಿ, ಉಭಯ ರಾಷ್ಟ್ರಗಳ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಬಹು ಧ್ರುವೀಯ ಜಗತ್ತಿನಲ್ಲಿ ಒಪ್ಪಂದ ಮತ್ತು ಸಮಾಲೋಚನೆಗೊ ಮುನ್ನ ಯಾವ ರಾಷ್ಟ್ರವೂ ತನ್ನದೇ ಅಜೆಂಡಾ ಆಧಾರಿತ ನಿರ್ಣಯಕ್ಕೆ ಬರಬಾರದು. ಇತರರ ಅಭಿಪ್ರಾಯ ಅಲಕ್ಷಿಸಿ, ಸ್ವಹಿತಾಸಕ್ತಿ ಸ್ಥಾಪಿಸಲು ಯತ್ನಿಸಬಾರುದ ಎಂದು ಹೇಳಿದ್ದರು. 


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp