ಕೋವಿಡ್ ಸಾಂಕ್ರಾಮಿಕ: ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ- ಅಮೆರಿಕಾ
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಭಾರತ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷರ ಅತ್ಯುನ್ನತ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫಾಸ್ಸಿ ಹೇಳಿದ್ದಾರೆ.
Published: 24th April 2021 03:49 PM | Last Updated: 24th April 2021 06:08 PM | A+A A-

ಡಾ. ಅಂಥೋನಿ ಫಾಸ್ಸಿ
ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಭಾರತ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷರ ಅತ್ಯುನ್ನತ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫಾಸ್ಸಿ ಹೇಳಿದ್ದಾರೆ.
ಪ್ರಸ್ತುತ ಭಾರತ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.ಬೇರೆ ಯಾವುದೇ ದೇಶದಲ್ಲಿ ದಾಖಲಾಗದಷ್ಟು ಭಾರಿ ಸಂಖ್ಯೆಯ ಕೋವಿಡ್ ಪ್ರಕರಣಗಳು ಭಾರತದಲ್ಲಿ ವರದಿಯಾಗುತ್ತಿವೆ. ಭಾರತದಲ್ಲಿನ ಕೊರೋನಾ ವೈರಸ್ ಸ್ವರೂಪದ ಲಕ್ಷಣಗಳು ಇನ್ನೂ ಸ್ಪಷ್ಟವಾಗಿಲ್ಲ. ಲಸಿಕೆಗಳಿಗೆ ಈ ರೂಪಾಂತರಿ ವೈರಸ್ ನಿಂದ ರಕ್ಷಿಸುವ ಸಾಮರ್ಥ್ಯವಿದೆಯೇ? ಎಂಬುದು ಇನ್ನೂ ಪೂರ್ಣವಾಗಿ ತಿಳಿದುಬಂದಿಲ್ಲ ಎಂದಿದ್ದಾರೆ.
ಭಾರತಕ್ಕೆ ಈಗ ಲಸಿಕೆಗಳು ಬೇಕು ಎಂಬುದು ಸ್ಪಷ್ಟವಾಗುತ್ತಿದೆ.ಅಮೆರಿಕದ ಸೆಂಟರ್ ಫಾರ್ ಡೀಸಿಸ್ ಕಂಟ್ರೋಲ್ ಅಂಡ್
ಪ್ರಿವೆನ್ಷನ್ ಭಾರತದ ಆರೋಗ್ಯ ವ್ಯವಸ್ಥೆಯೊಂದಿಗೆ ನಿಕಟ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ವಿವರಗಳ ಪ್ರಕಾರ ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 3,46,786 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಕಂಡುಬಂದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.