ಕೋವಿಡ್-19 ಹೆಚ್ಚಳ ನಡುವೆ ಭಾರತೀಯ ಪ್ರವಾಸಿಗರಿಗೆ ಪ್ರವಾಸ ನಿರ್ಬಂಧ ಪ್ರಕಟಿಸಿದ ಮಾಲ್ಡೀವ್ಸ್!

ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣದಿಂದ ಬಾಲಿವುಡ್ ಸೆಲೆಬ್ರಿಟಿಗಳ ಮೋಜು, ಮಸ್ತಿಯ ತಾಣ ಮಾಲ್ಡೀವ್ಸ್, ದ್ವೀಪ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಭಾರತೀಯ ಪ್ರವಾಸಿಗರು ವಾಸ್ತವ್ಯ ಹೂಡದಂತೆ ನಿರ್ಬಂಧಿಸಿದೆ. 
ಮಾಲ್ಡೀವ್ಸ್
ಮಾಲ್ಡೀವ್ಸ್

ಮಾಲ್ಡೀವ್ಸ್: ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣದಿಂದ ಬಾಲಿವುಡ್ ಸೆಲೆಬ್ರಿಟಿಗಳ ಮೋಜು, ಮಸ್ತಿಯ ತಾಣ ಮಾಲ್ಡೀವ್ಸ್, ದ್ವೀಪ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಭಾರತೀಯ ಪ್ರವಾಸಿಗರು ವಾಸ್ತವ್ಯ ಹೂಡದಂತೆ ನಿರ್ಬಂಧಿಸಿದೆ. 

ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಪ್ರಯಾಣ ಕುರಿತು ಕುವೈತ್, ಓಮನ್, ಫ್ರಾನ್ಸ್, ಪಾಕಿಸ್ತಾನ, ಹಾಂಗ್ ಕಾಂಗ್, ನ್ಯೂಜಿಲೆಂಡ್, ಕೆನಡಾ, ಇಂಗ್ಲೆಂಡ್, ಯುಎಇ, ದುಬೈ ನಿರ್ಬಂಧ ವಿಧಿಸಿರುವಂತೆಯೇ ಭಾರತೀಯ ಪ್ರವಾಸಿಗರಿಗೆ ಮಾಲ್ಡೀವ್ಸ್ ನಿರ್ಬಂಧ ವಿಧಿಸಿದೆ. 

ಈ ಮಧ್ಯೆ, ಭಾರತದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅಲ್ಲಿಗೆ ಪ್ರಯಾಣಿಸದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

ಈ ಕುರಿತು ಮಾಲ್ಡೀವ್ಸ್ ನ ಪ್ರವಾಸೋದ್ಯಮ ಸಚಿವಾಲಯ ಟ್ವೀಟ್ ಮಾಡಿದ್ದು, ಏಪ್ರಿಲ್ 27 ರಿಂದ ಭಾರತದಿಂದ ಮಾಲ್ಡೀವ್ಸ್ ಗೆ ಪ್ರವಾಸಿಗರ ಪ್ರವಾಸವನ್ನು ನಿರ್ಬಂಧಿಸಲಾಗಿದೆ. ಕನಿಷ್ಠ ಅನಾನುಕೂಲತೆಯೊಂದಿಗೆ ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಲಾಗಿದೆ. 

ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಮಾಲ್ಡೀವ್ಸ್ ಬಾಲಿವುಡ್ ಯುವ ನಟ, ನಟಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಇತ್ತೀಚಿಗೆ ಆಲಿಯಾ ಭಟ್, ರಣಬೀರ್ ಕಫೂರ್ ಭೇಟಿ ನೀಡಿದ್ದರು. ಕೊರೋನಾವೈರಸ್ ನಿಂದ ಚೇತರಿಸಿಕೊಂಡ ಸ್ವಲ್ಪ ಸಮಯದ ನಂತರ ಮಾಲ್ಡೀವ್ಸ್ ಪ್ರವಾಸವನ್ನು ಕೈಗೊಂಡಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಇವರು ಅಪಹಾಸ್ಯಕ್ಕೊಳಗಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com