ಕೋವಿಡ್-19 ವಿರುದ್ಧದ ಹೋರಾಟ: ಭಾರತಕ್ಕೆ ಬ್ರಿಟನ್ ನೆರವಿನ ಹಸ್ತ, ಆಕ್ಸಿಜನ್; ವೆಂಟಿಲೇಟರ್ ಗಳ ರವಾನೆ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬ್ರಿಟನ್ ನೆರವಿಹ ಹಸ್ತ ಚಾಚಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಹಾಗೂ ವೆಂಟಿಲೇಟರ್ ಗಳನ್ನು ರವಾನೆ ಮಾಡುತ್ತಿರುವುದಾಗಿ ತಿಳಿಸಿದೆ. 
ಬೊರಿಸ್ ಜಾನ್ಸನ್
ಬೊರಿಸ್ ಜಾನ್ಸನ್

ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬ್ರಿಟನ್ ನೆರವಿಹ ಹಸ್ತ ಚಾಚಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಹಾಗೂ ವೆಂಟಿಲೇಟರ್ ಗಳನ್ನು ರವಾನೆ ಮಾಡುತ್ತಿರುವುದಾಗಿ ತಿಳಿಸಿದೆ. 

ಭಾರತ ಕೋವಿಡ್-19 ನ ಎರಡನೇ ಅಲೆಯನ್ನು ಎದುರಿಸುತ್ತಿದ್ದು, ವೆಂಟಿಲೇಟರ್ ಗಳು, ಆಕ್ಸಿಜನ್ ಕಾನ್ಸಂಟ್ರೇಟರ್ ಉಪಕರಣಗಳು ಸೇರಿದಂತೆ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಭಾನುವಾರ ಕಳಿಸಿದ್ದಾಗಿ ಹೇಳಿದೆ. ಭಾನುವಾರದಂದು ಬ್ರಿಟನ್ ನಿಂದ ನಿರ್ಗಮಿಸಿರುವ ಉಪಕರಣಗಳು ಮಂಗಳವಾರದಂದು ಭಾರತಕ್ಕೆ ತಲುಪಲಿದೆ. 

"ಪ್ರಮುಖವಾದ 600  ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳಿಸಲಾಗಿದೆ. ಮೊದಲ ಸರಕು ಮಂಗಳವಾರದಂದು ಭಾರತಕ್ಕೆ ತಲುಪಿದರೆ ಉಳಿದದ್ದು ವಾರಾಂತ್ಯದಲ್ಲಿ ತಲುಪಲಿದೆ" ಎಂದು ಬ್ರಿಟನ್ ಹೈ ಕಮಿಷನ್ ಮಾಹಿತಿ ನೀಡಿದೆ. 

"ಭಾರತದ ಸ್ನೇಹಿತ, ಪಾಲುದಾರನಾಗಿ ಬ್ರಿಟನ್ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಹೆಗಲಿಗೆ ಹೆಗಲು ನೀಡಿ ನಿಲ್ಲುತ್ತೇವೆ" ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ನೆರವಿನ ಸರಕುಗಳಿಗೆ ವಿದೇಶಿ, ಕಾಮನ್ ವೆಲ್ತ್ ಹಾಗೂ ಅಭಿವೃದ್ಧಿ ಕಚೇರಿಗಳಿಂದ ಆರ್ಥಿಕ ಸಹಾಯ ದೊರೆತಿದೆ ಎಂದು ಬ್ರಿಟನ್ ಮಾಹಿತಿ ನೀಡಿದೆ. ಈ ಸರಕುಗಳನ್ನು ಭಾರತ ಸರ್ಕಾರ ಕೋವಿಡ್-19 ನಿಂದ ಬಳಲುತ್ತಿರುವವರಿಗೆ ನೀಡಲಿದೆ ಎಂದು ಬ್ರಿಟನ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com