ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್
ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್

ಕೋವಿಡ್ ಪರಿಸ್ಥಿತಿ ನಿಭಾಯಿಸಲು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ, ಭಾರತಕ್ಕೂ ಮುಕ್ತ ಅವಕಾಶ: ಚೀನಾ

ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಕೆಲ ದಕ್ಷಿಣ ಏಷ್ಯಾ ವಿದೇಶಾಂಗ ಸಚಿವರೊಂದಿಗೆ  ಚೀನಾ ಸಭೆಯನ್ನು ಆಯೋಜಿಸುತ್ತಿದ್ದು, ಭಾರತ ಸೇರಿದಂತೆ ಈ ವಲಯದ ಎಲ್ಲಾ ರಾಷ್ಟ್ರಗಳಿಗೂ ವರ್ಚುಯಲ್ ಕಾನ್ಫರೆನ್ಸ್ ಮುಕ್ತವಾಗಿರುತ್ತದೆ ಎಂದು ಚೀನಾ ಹೇಳಿದೆ. 

ಬೀಜಿಂಗ್: ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಕೆಲ ದಕ್ಷಿಣ ಏಷ್ಯಾ ವಿದೇಶಾಂಗ ಸಚಿವರೊಂದಿಗೆ  ಚೀನಾ ಸಭೆಯನ್ನು ಆಯೋಜಿಸುತ್ತಿದ್ದು, ಭಾರತ ಸೇರಿದಂತೆ ಈ ವಲಯದ ಎಲ್ಲಾ ರಾಷ್ಟ್ರಗಳಿಗೂ ವರ್ಚುಯಲ್ ಕಾನ್ಫರೆನ್ಸ್ ಮುಕ್ತವಾಗಿರುತ್ತದೆ ಎಂದು ಚೀನಾ ಹೇಳಿದೆ. 

ಈ ಸಂಬಂಧ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮಂಗಳವಾರ ಆಯೋಜಿಸಿದ್ದ ವಿದೇಶಾಂಗ ಸಚಿವರ ವರ್ಚುಯಲ್ ಸಭೆಯಲ್ಲಿ ಪಾಕಿಸ್ತಾನ,ಅಪ್ಘಾನಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಆಹ್ವಾನಿಸಲಾಗಿತ್ತು. ಭಾರತ, ಮಾಲ್ಡೀವ್ಸ್, ಮತ್ತು ಭೂತಾನ್,  ಸಭೆಗೆ ಗೈರಾಗಿದ್ದವು.

ಸಭೆಗೆ ಭಾರತವನ್ನು ಏಕೆ ಆಹ್ವಾನಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್ ವೆನ್ಬಿನ್, ಚೀನಾ ಮುಕ್ತತೆಯ ಮನೋಭಾವವನ್ನು ಅನುಸರಿಸುತ್ತದೆ. ಈ ಸಭೆ ಭಾರತ ಸೇರಿದಂತೆ ಎಲ್ಲಾ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಮುಕ್ತವಾಗಿದೆ.  ಎಲ್ಲಾ ರಾಷ್ಟ್ರಗಳನ್ನು ಪಾಲ್ಗೊಳ್ಳುವುದನ್ನು ಸ್ವಾಗತಿಸುವುದಾಗಿ ಹೇಳಿದರು.

ಈ ಸಭೆ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಚೀನಾದ ಸಹಕಾರದ ಭಾಗವಾಗಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡಲು ಪ್ರಾದೇಶಿಕ ಮತ್ತು  ಅಂತರ್ ರಾಷ್ಟ್ರೀಯ ಸಹಕಾರವಿದೆ ಎಂದು ಅವರು ಹೇಳಿದರು.

ಕೋವಿಡ್-19 ಎರಡನೇ ಅಲೆಯಿಂದ ನಲುಗಿರುವ ಭಾರತಕ್ಕೆ ನೆರವು ನೀಡುವುದಾಗಿ ಈಗಾಗಲೇ ಹೇಳಿರುವುದಾಗಿ ತಿಳಿಸಿದ ವಾಂಗ್ ವೆನ್ಬಿನ್,  ಭಾರತಕ್ಕೆ ಬೇಕಾಗಿರುವ ಆಕ್ಸಿಜನ್ ಸಾಂದ್ರಕಗಳು ಮತ್ತಿತರ ಕೋವಿಡ್ - 19 ವಿರುದ್ದದ ಸಲಕರಣೆಗಳನ್ನು ಪೂರೈಸುವಂತೆ ಚೀನಾ ಕಂಪನಿಗಳನ್ನು ಉತ್ತೇಜಿಸುತ್ತಿದ್ದೇವೆ. ನೆರವು ನೀಡುವ ಮೂಲಕ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧ, ಭಾರತ ಸೋಂಕಿನ ವಿರುದ್ಧ ಯಶಸ್ವಿ ಹೋರಾಟ ನಡೆಸಲಿದೆ ಎಂಬ ವಿಶ್ವಾಸವಿದೆ ಎಂದರು.

ಸಭೆ ಮುಕ್ತತೆ, ಅಂತರ್ಗತತೆ ಮತ್ತು ಗೆಲುವಿನ ತತ್ವಗಳ ಅಡಿಯಲ್ಲಿ ನಡೆಯಲಿದೆ ಇತರ ಆಸಕ್ತ  ರಾಷ್ಟ್ರಗಳು ಭಾಗವಹಿಸಿದರೆ ಸ್ವಾಗತಿಸುವುದಾಗಿ ಅವರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com