ಭಾರತದ ಕೋವಿಡ್-19 ಪರೀಕ್ಷೆ ವರದಿಗಳು ವಿಶ್ವಾಸಾರ್ಹವಲ್ಲ ಅಥವಾ ನಿಖರವಲ್ಲ: ಪಶ್ಚಿಮ ಆಸ್ಟ್ರೇಲಿಯಾ ಪ್ರೀಮಿಯರ್

ಭಾರತ ನಡೆಸುತ್ತಿರುವ ಕೋವಿಡ್-19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಅಥವಾ ನಿಖರವಾಗಿಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್ ಕಳವಳ ವ್ಯಕ್ತಪಡಿಸಿದ್ದಾರೆ. 
ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್
ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್

ಮೆಲ್ಬೋರ್ನ್: ಭಾರತ ನಡೆಸುತ್ತಿರುವ ಕೋವಿಡ್-19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಅಥವಾ ನಿಖರವಾಗಿಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್ ಕಳವಳ ವ್ಯಕ್ತಪಡಿಸಿದ್ದಾರೆ. 

ಭಾರತದಿಂದ ಆಸ್ಟ್ರೇಲಿಯಾಗೆ ಬಂದು ಪರ್ತ್ ನಲ್ಲಿ ಹೊಟೇಲ್ ಕ್ವಾರಂಟೈನ್ ನಲ್ಲಿರುವ ಮಂದಿಯ ಪೈಕಿ ನಾಲ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್, "ಭಾರತದಲ್ಲಿ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಅಲ್ಲಿಂದ ಇಲ್ಲಿಗೆ ಬರುತ್ತಿರುವವರ ಪೈಕಿ ಹಲವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವಿಮಾನ ಪ್ರಯಾಣಕ್ಕೂ ಮುನ್ನ ಭಾರತದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗಳು ಒಂದೋ ನಿಖರವಾಗಿಲ್ಲ ಅಥವಾ ವಿಶ್ವಾಸಾರ್ಹವಾದದ್ದು ಅಲ್ಲ ಎಂದು ಹೇಳಿದ್ದಾರೆ.

ಭಾರತದಿಂದ ಬರುತ್ತಿರುವವರಿಂದ ಇಲ್ಲಿನ ವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ. ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ದೊರೆತ ಮಾಹಿತಿಯ ಪ್ರಕಾರ ವಿಮಾನದಲ್ಲಿ ಬಂದ 79 ಪ್ರಯಾಣಿಕರ ಪೈಕಿ 78 ಮಂದಿ ಭಾರತದಿಂದ ಇತ್ತೀಚೆಗೆ ಬಂದಿದ್ದಾರೆ.

ನಮಗೆ ಭಾರತದ ವಿಷಯದಲ್ಲಿ ಸಮಸ್ಯೆ ಇದೆ. ಆದ್ದರಿಂದ ತುರ್ತು ಅಗತ್ಯವಿಲ್ಲದೇ ಇದ್ದಲ್ಲಿ ಭಾರತಕ್ಕೆ ತೆರಳದಂತೆ ಮನವಿ ಮಾಡುತ್ತೇನೆ ಎಂದು ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com