ಕೋವಿಡ್-19 ಏರಿಕೆ: ಭಾರತದಿಂದ ವಾಪಸ್ಸಾಗುವಂತೆ ತನ್ನ ನಾಗರಿಕರಿಗೆ ಅಮೆರಿಕಾ ಕರೆ

ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಶೀಘ್ರವೇ ವಾಪಸ್ಸಾಗುವಂತೆ ಸೂಚನೆ ನೀಡಿದೆ. 
ಕೋವಿಡ್-19 ಪರೀಕ್ಷೆ
ಕೋವಿಡ್-19 ಪರೀಕ್ಷೆ

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಕಾರಣ ಅಮೆರಿಕದ ನಾಗರಿಕರು ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಕೂಡಲೇ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ಕೊರೊನಾದಿಂದಾಗಿ ದೇಶದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಕಡಿಮೆಯಾಗಿ ಜೀವನ ಬಹಳ ದುಸ್ತರವಾಗುತ್ತಿದೆ, ಹೀಗಾಗಿ ಅಮೆರಿಕದ ನಾಗರಿಕರು ಬೇಗ ಮರಳುವುದು ಬಹಳ ಒಳ್ಳೆಯದು ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಆರೋಗ್ಯ ಇಲಾಖೆ, ಭಾರತವನ್ನು ಬಿಟ್ಟು ಬರಲು ಇಚ್ಛಿಸುವ ನಾಗರಿಕರು ಈಗಿರುವ ವಾಣಿಜ್ಯ ಸಾರಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಭಾರತದಿಂದ ಅಮೆರಿಕಕ್ಕೆ ದಿನನಿತ್ಯ ನೇರ ವಿಮಾನ ಸೌಲಭ್ಯವಿದೆ. ಹಾಗೂ ಫ್ರಾಂಕ್ಫರ್ಟ್ನಿಂದ ಆಗಮಿಸುವ ವಿಮಾನಗಳೂ ಲಭ್ಯವಿವೆ ಎಂದು ಹೇಳಿದೆ. ಕೊರೋನ ಹೆಚ್ಚಳದ ಕಾರಣ ಹಲವು ರಾಷ್ಟ್ರಗಳು ಈಗಾಗಲೇ ಭಾರತದಿಂದ ಬರುವ ವಿಮಾನ ಸಂಚಾರ ರದ್ದುಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com