ಹರಡುತ್ತಿರುವ ಡೆಲ್ಟಾ ರೂಪಾಂತರದಿಂದ ಚೀನಾದಲ್ಲಿ ಹೆಚ್ಚಿದ ಆತಂಕ!
ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಭಾನುವಾರ ಹೊಸ ಪ್ರಕರಣಗಳು ಕಾಣಿಸಿಕೊಳ್ಳುವುದರೊಂದಿಗೆ 18 ಪ್ರಾಂತ್ಯಗಳಲ್ಲಿ ಡೆಲ್ಟಾ ರೂಪಾಂತರ ಹರಡುತ್ತಿರುವುದರಿಂದ ಚೀನಾದಲ್ಲಿ ಆತಂಕ ಹೆಚ್ಚಾಗುತ್ತಿದೆ.
Published: 02nd August 2021 12:46 AM | Last Updated: 02nd August 2021 12:53 AM | A+A A-

ಚೀನಾ ಜನರು
ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಭಾನುವಾರ ಹೊಸ ಪ್ರಕರಣಗಳು ಕಾಣಿಸಿಕೊಳ್ಳುವುದರೊಂದಿಗೆ 18 ಪ್ರಾಂತ್ಯಗಳಲ್ಲಿ ಡೆಲ್ಟಾ ರೂಪಾಂತರ ಹರಡುತ್ತಿರುವುದರಿಂದ ಚೀನಾದಲ್ಲಿ ಆತಂಕ ಹೆಚ್ಚಾಗುತ್ತಿದೆ.
ಕಳೆದ ಹತ್ತು ದಿನಗಳಲ್ಲಿ ಸುಮಾರು 300 ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಕ್ಷೀಪ್ರಗತಿಯಲ್ಲಿ ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿದೆ ಎಂಬುದು ಹೆಚ್ಚಿನ ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀಜಿಂಗ್, ಜಿಯಾಂಗ್ಸು ಮತ್ತು ಸಿಯಾಚಿನ್ ಸೇರಿದಂತೆ 18 ಪ್ರಾಂತ್ಯಗಳ ಕನಿಷ್ಠ 27 ನಗರಗಳಲ್ಲಿ ಇತ್ತೀಚಿಗೆ 300 ಕ್ಕೂ ಅಧಿಕ ಕೇಸ್ ಗಳು ಖಚಿತಗೊಂಡಿವೆ ಎಂದು ಸರ್ಕಾರದಿಂದ ನಡೆಯಲ್ಪಡುವ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ. ರಾಜಧಾನಿ ಬೀಜಿಂಗ್ ನಗರದಲ್ಲಿ ಭಾನುವಾರ ಎರಡು ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ, ಒಂದು ಲಕ್ಷಣರಹಿತ ಪ್ರಕರಣವಾಗಿದೆ ಎಂದು ವಕ್ತಾರರೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಝಾಂಗಿಯಾಜೆ ನಗರಕ್ಕೆ ಶನಿವಾರ 11 ಸಾವಿರ ಪ್ರಯಾಣಿಕರು ಬಂದಿರುವುದು ಪತ್ತೆಯಾಗಿದೆ. ಸಾಂಕ್ರಾಮಿಕದ ನಂತರ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದ್ದು, ಅಲ್ಲಿಂದ ತೆರಳುವ ಮುನ್ನ ಎಲ್ಲರೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಎಲ್ಲ ಪ್ರವಾಸಿಗರಿಗೂ ಹೇಳಲಾಗಿದೆ.