27 ವರ್ಷಗಳ ದಾಂಪತ್ಯ ಜೀವನ ಅಂತ್ಯ: ಅಧಿಕೃತವಾಗಿ ಬೇರ್ಪಟ್ಟ ಬಿಲ್ ಗೇಟ್ಸ್ ದಂಪತಿ!
27 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ಪ್ರಕಟಿಸಿದ ಮೂರು ತಿಂಗಳ ಬಳಿಕ, ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.
Published: 03rd August 2021 12:29 PM | Last Updated: 03rd August 2021 12:29 PM | A+A A-

ಬಿಲ್ ಗೇಟ್ಸ್ ದಂಪತಿ
ವಾಷಿಂಗ್ಟನ್: 27 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ಪ್ರಕಟಿಸಿದ ಮೂರು ತಿಂಗಳ ಬಳಿಕ, ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.
ಅವರ ವಿಚ್ಛೇದನವನ್ನು ವಾಷಿಂಗ್ಟನ್‌ನ ಕಿಂಗ್ ಕೌಂಟಿಯ ನ್ಯಾಯಾಧೀಶರೊಬ್ಬರು ಸೋಮವಾರ ಅಂತಿಮಗೊಳಿಸಿದರು. ಕೋರ್ಟ್ ದಾಖಲೆಗಳ ಪ್ರಕಾರ ಇಬ್ಬರೂ ತಮ್ಮ ಹಿಂದಿನ ದಾಂಪತ್ಯಕ್ಕೆ ಅನುಗುಣವಾದ ಆರ್ಥಿಕ ನೆರವು ಪಡೆಯುವುದಿಲ್ಲ ಹಾಗೂ ತಮ್ಮ ಹೆಸರುಗಳನ್ನು ಕೂಡ ಬದಲಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.
ವಿಚ್ಛೇದನ ಒಪ್ಪಂದದನಿಯಮಗಳಿಗೆ ತಕ್ಕಂತೆ, ಇಬ್ಬರೂ ತಮ್ಮ ಆಸ್ತಿಗಳನ್ನು ವಿಭಜಿಸಿಕೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಆದರೆ ವಿಚ್ಛೇದನದ ನಿಯಮಗಳಿಗೆ ಅನುಗುಣವಾಗಿ ಇದನ್ನು ಗೌಪ್ಯವಾಗಿ ಇರಿಸಲಾಗುತ್ತದೆ.
ವಿಚ್ಛೇದನ ದಾಖಲಿಸಿ ಅಂತಿಮಗೊಳಿಸಿದ ಬಳಿಕ 90 ದಿನಗಳ ಕಾಯುವಿಕೆ ಅವಧಿಯನ್ನು ನೀಡುವಂತೆ ವಾಷಿಂಗ್ಟನ್ ಕಾನೂನು ಹೇಳುತ್ತದೆ. ಮೇ ತಿಂಗಳಲ್ಲಿ ವಿಚ್ಚೇದನವನ್ನು ಬಹಿರಂಗಪಡಿಸಿದ ಬಳಿಕ, ಬಿಲ್ ಗೇಟ್ಸ್ ಅವರ ಕಾಸ್ಕೇಡ್ ಇನ್ವೆಸ್ಟ್‌ಮೆಂಟ್‌ನಿಂದ 3 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಷೇರುಗಳನ್ನುಮೆಲಿಂಡಾ ಗೇಟ್ಸ್ ಅವರ ಹೆಸರಿಗೆ ವರ್ಗಾಯಿಸಲಾಗಿದೆ.