ವರ್ಷದ ಬಳಿಕ ಕೋವಿಡ್ ತವರು ಚೀನಾದ ವುಹಾನ್ ನಲ್ಲಿ ಸೋಂಕು ಸ್ಫೋಟ, ಸಾಮೂಹಿಕ ಕೋವಿಡ್ ಪರೀಕ್ಷೆಗೆ ಸರ್ಕಾರ ಆದೇಶ

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ವರ್ಷದ ಬಳಿಕ ಮತ್ತೆ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.
ಚೀನಾ ಜನರು
ಚೀನಾ ಜನರು

ವುಹಾನ್: ಕೊರೋನಾ ವೈರಸ್ ತವರು ವುಹಾನ್ ನಲ್ಲಿ ವರ್ಷದ ಬಳಿಕ ಮತ್ತೆ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ವುಹಾನ್ ನ ಏಳು ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಇನ್ನೂ ಸಾಕಷ್ಟು ಮಂದಿಯಲ್ಲಿ ಸೋಂಕು ಇರುವ ಕುರಿತು ಶಂಕೆ ವ್ಯಕ್ತಲಾಗಿದೆ. ಹೀಗಾಗಿ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವುಹಾನ್‌ನ ಸ್ಥಳೀಯ ಆಡಳಿತಾಧಿಕಾರಿ ಲಿ ಟಾವೊ, ಎಲ್ಲರಿಗೂ ಕೊರೊನಾ ಪರೀಕ್ಷೆ ಶೀಘ್ರದಲ್ಲೇ ಶುರುವಾಗಲಿದೆ ಎಂದಿದ್ದಾರೆ. ಚೀನಾದ ವುಹಾನ್ ನಗರದ ಜನಸಂಖ್ಯೆ 1 ಕೋಟಿಗೂ ಹೆಚ್ಚಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಂಗಳವಾರ ಚೀನಾದಲ್ಲಿ 61 ಕೊರೊನಾ ಪ್ರಕರಣ ದಾಖಲಾಗಿದೆ. ಚೀನಾದ ನಾನ್ಜಿಂಗ್‌ನ ವಿಮಾನ ನಿಲ್ದಾಣ ಕ್ಲೀನರ್‌ಗಳಿಗೆ ಸೋಂಕು ತಗುಲಿದೆ. ಕೊರೊನಾದ ಡೆಲ್ಟಾ ರೂಪಾಂತರವು ಅನೇಕ ನಗರಗಳಿಗೆ ಹರಡುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com