ಹೈಟಿಯಲ್ಲಿ ಭಾರಿ ಭೂಕಂಪ: ಸಾವಿನ ಸಂಖ್ಯೆ 304ಕ್ಕೆ ಏರಿಕೆ

ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯ ಸೇಂಟ್ ಲೂಯಿಸ್ ಪಟ್ಟಣದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 
ಭೂಕಂಪದ ತೀವ್ರತೆಗೆ ಉರುಳಿಬಿದ್ದಿರುವ ಮನೆ
ಭೂಕಂಪದ ತೀವ್ರತೆಗೆ ಉರುಳಿಬಿದ್ದಿರುವ ಮನೆ

ಪೋರ್ಟ್ ಒ ಪ್ರಿನ್ಸ್: ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯ ಸೇಂಟ್ ಲೂಯಿಸ್ ಪಟ್ಟಣದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

2010ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಚೇತರಿಸಿಕೊಳ್ಳಲು ಹರಸಾಹಸ ಪಟ್ಟಿದ್ದ ಹೈಟಿಯಲ್ಲಿ ಶನಿವಾರ ಬೆಳಿಗ್ಗೆ  ಶಕ್ತಿಶಾಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2 ದಾಖಲಾಗಿದೆ. ಭೂಕಂಪಕ್ಕೆ ಗಗನಚುಂಬಿ ಕಟ್ಟಡಗಳು, ಚರ್ಚುಗಳು, ಹೋಟೆಲುಗಳು ನೆಲಸಮವಾಗಿವೆ ಎಂದು ತಿಳಿದುಬಂದಿದೆ. 

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಸೇಂಟ್ ಲೂಯಿಸ್ ಪಟ್ಟಣದಿಂದ 125 ಕಿ.ಮೀ ದೂರದ ರಾಜಧಾನಿ ಪೋರ್ಟ್ ಒ ಪ್ರಿನ್ಸ್ ನಲ್ಲೂ ಭೂಮಿ ಅದುರಿದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದ್ದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಹೈಟಿಗೆ ನೆರವಿನ ಹಸ್ತ ಚಾಚಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com