ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ದಯನೀಯ; ವಿಶ್ವಸಂಸ್ಥೆ ಕಳವಳ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿದೆ. ತಾಲಿಬಾನ್‌ ಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಸಂಪೂರ್ಣ ಕುಸಿದಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. 
ಆಫ್ಘಾನಿಸ್ತಾನ-ತಾಲಿಬಾನ್
ಆಫ್ಘಾನಿಸ್ತಾನ-ತಾಲಿಬಾನ್

ಜಿನೀವಾ: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿದೆ. ತಾಲಿಬಾನ್‌ ಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಸಂಪೂರ್ಣ ಕುಸಿದಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. 


ತಾಲಿಬಾನ್‌  ಗಳು ಕೂಡಲೇ ದಾಳಿಗಳನ್ನು ನಿಲ್ಲಿಸಬೇಕು , ಬಲ ಪ್ರಯೋಗ ಸುದೀರ್ಘ ನಾಗರಿಕಯುದ್ದಕ್ಕೆ ಕಾರಣವಾಗಲಿದ್ದು, ದೇಶವನ್ನು ಏಕಾಂಗಿಯಾಗಿಸುತ್ತದೆ. ಅಫ್ಘಾನಿಸ್ತಾನ ನಿಯಂತ್ರಣ ಕಳೆದುಕೊಂಡಿದೆ. ಈಗಾಗಲೇ ಇಂತಹ ಘರ್ಷಣೆಗಳನ್ನು ಅನುಭವಿಸಿದ ದೇಶ ಮತ್ತೊಮ್ಮೆ ಸಂಕೀರ್ಣ ಪರಿಸ್ಥಿತಿಗೆ ಸಿಲುಕಿದೆ. ಇದು ಅಲ್ಲಿನ ಜನರಿಗೆ ಇನ್ನಿಲ್ಲದ ಹತಾಶೆಯ ಸ್ಥಿತಿಯನ್ನು ಮೂಡಿಸಿದೆ. ಅಫ್ಘನ್‌ ಜನರ ಒಳಿತಿಗಾಗಿ ತಾಲಿಬಾನ್‌ ಗಳು ಕೂಡಲೇ ತಮ್ಮ ದಾಳಿಗಳನ್ನು  ನಿಲ್ಲಿಸಬೇಕಾಗಿದೆ. ವಿಶ್ವಾಸದಿಂದ ಮಾತುಕತೆ ನಡೆಸಬೇಕು. ಬಲ ಪ್ರಯೋಗದಿಂದ ಅಧಿಕಾರ ದಕ್ಕಿಸಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಇದು ದೀರ್ಘಕಾಲದ ನಾಗರೀಕ ಯುದ್ಧಕ್ಕೆ ಕಾರಣವಾಗಿ ದೇಶವನ್ನು ಏಕಾಂಗಿಯಾಗಿಸಲಿದೆ. ಅಧಿಕಾರಕ್ಕಾಗಿ ಯುದ್ದಮಾರ್ಗ ಅನುಸರಿಸುವವರ ವಿರುದ್ದ ಅಂತರರಾಷ್ಟ್ರೀಯ  ಸಮುದಾಯ ಸ್ಪಷ್ಟ ಸಂದೇಶ ರವಾನಿಸಬೇಕುಎಂದು ಗುಟರೆಸ್‌ ಕರೆ ನೀಡಿದ್ದಾರೆ.

ತಕ್ಷಣವೇ ಆಕ್ರಮಣ
ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ಅಫ್ಘಾನಿಸ್ತಾನ ಮತ್ತು ತಾಲಿಬಾನ್‌ ನಡುವೆ ಉಂಟಾಗಿರುವ ಸಂಘರ್ಷದ ಬಗ್ಗೆ ಕೊನೆಗೂ ಮೌನ ಮುರಿದಿರುವ ವಿಶ್ವಸಂಸ್ಥೆ ತಕ್ಷಣವೇ ಆಕ್ರಮಣವನ್ನು ನಿಲ್ಲಿಸಿ ಎಂದು ತಾಲಿಬಾನ್‌ಗೆ ನಿರ್ದೇಶನ ನೀಡಿದೆ. ಮಿಲಿಟರಿ ಬಲದ ಮೂಲಕ ಅಧಿಕಾರವನ್ನು  ವಶಪಡಿಸಿಕೊಳ್ಳುವುದು. ಕಳೆದುಕೊಳ್ಳುವ ಪ್ರತಿಪಾದನೆಯಾಗಿದೆ ಮತ್ತು ಇದು ಸುದೀರ್ಘ ಅಂತರ್ಯುದ್ಧಕ್ಕೆ ಕಾರಣವಾಗಬಹುದು ಹಾಗೂ ಯುದ್ಧದಿಂದ ಹಾನಿಗೊಳಗಾದ ರಾಷ್ಟ್ರ ಸಂಪೂರ್ಣವಾಗಿ ಪ್ರತ್ಯೇಕವಾಗಬಹುದು. ಅಫ್ಘಾನಿಸ್ತಾನವು ದಿನದಿಂದ ದಿನಕ್ಕೆ ನಿಯಂತ್ರಣ ತಪ್ಪುತ್ತಿದೆ. ತಲೆಮಾರುಗಳ ಸಂಘರ್ಷವನ್ನು  ಹೊಂದಿರುವ ದೇಶವಾಗಿದ್ದರೂ, ಅಫ್ಘಾನಿಸ್ತಾನವು ಮತ್ತೊಂದು ಅಸ್ತವ್ಯಸ್ತ ಮತ್ತು ಹತಾಶ ಅಧ್ಯಾಯದ ಸುಳಿಯಲ್ಲಿ ಸಿಲುಕಿಕೊಂಡಿದೆ, ಅದು ತನ್ನ ದೀರ್ಘ ಕಾಲದ ಜನರಿಗೆ ನಂಬಲಾಗದ ದುರಂತವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಒಳ್ಳೆಯ ನಂಬಿಕೆಯಲ್ಲಿ ಮಾತುಕತೆ ನಡೆಸಿ
ತಕ್ಷಣವೇ ಅಕ್ರಮಣ ನಿಲ್ಲಿಸುವಂತೆ ಕರೆ ನೀಡಿರುವ ವಿಶ್ವಸಂಸ್ಥೆ, ಅಫ್ಘಾನಿಸ್ತಾನ ಮತ್ತು ಅಲ್ಲಿನ ಜನರ ಸ್ವಹಿತಾಶಕ್ತಿಯಿಂದ ಒಳ್ಳೆಯ ನಂಬಿಕೆಯಲ್ಲಿ ಮಾತುಕತೆ ನಡೆಸುವಂತೆ ಹೇಳಿದೆ. ಮಿಲಿಟರಿ ಬಲದ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಕಳೆದುಕೊಳ್ಳುವ ಪ್ರತಿಪಾದನೆಯಾಗಿದೆ ಎಂದು ಸ್ಪಷ್ಟಪಡಿಸಿರುವ  ಅಂತಾರಾಷ್ಟ್ರೀಯ ಸಮುದಾಯ, ಈ ನಡೆ ನಾಗರಿಕ ಯುದ್ಧಕ್ಕೆಮತ್ತು ಅಫ್ಘಾನಿಸ್ತಾನದ ಸಂಪೂರ್ಣ ಪ್ರತ್ಯೇಕತೆಗೆ ದೂಡುತ್ತದೆ ಎಂದಿದೆ. ನಾಗರಿಕರ ಮೇಲಿನ ದಾಳಿ ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ನಿರ್ದೇಶನ ನೀಡಿರುವ ವಿಶ್ವಸಂಸ್ಥೆ ಮುಖ್ಯಸ್ಥ, ಯುದ್ಧವು ಅಪರಾಧಕ್ಕೆ  ಸಮನಾಗಿರುತ್ತದೆ ಎನ್ನುವ ಮೂಲಕ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕರೆ ನೀಡಿದೆ. ದೋಹಾದಲ್ಲಿನ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವಿನ ಚರ್ಚೆಗಳು ಸಂಘರ್ಷದ ಸಂಧಾನದ ಇತ್ಯರ್ಥಕ್ಕೆ ಮಾರ್ಗವನ್ನು ಪುನಃಸ್ಥಾಪಿಸಲಿ ಎಂದು ಆಶಿಸಿವುದಾಗಿ ವಿಶ್ವಸಂಸ್ಥೆಯ ಮುಖ್ಯಸ್ಥರು  ತಿಳಿಸಿದರು. ಸಂಧಾನದಿಂದ ಮಾತ್ರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದಿರುವ ಗುಟೆರಸ್ ಶಾಂತಿ ನೆಲೆಸುವಂತೆ ಕರೆ ನೀಡಿದ್ದಾರೆ.

ಮಾನವ ಹಕ್ಕುಗಳ ಮೇಲೆ ತಾಲಿಬಾನ್ ನಿರ್ಬಂಧ
ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಮೇಲೆ ತಾಲಿಬಾನ್ ಅನೇಕ ನಿರ್ಬಂಧಗಳನ್ನು ಹೇರಿರುವುದು ತಿಳಿದುಬಂದಿದೆ. ಅದರಲ್ಲೂ ಪತ್ರಕರ್ತರು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಕಳೆದ ತಿಂಗಳಲ್ಲಿ 1,000 ಕ್ಕೂ ಹೆಚ್ಚು ಜನರು,  ಅನಿಯಂತ್ರಿತ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಗುಟೆರಸ್‌ ಹೇಳಿದರು, ವಿಶೇಷವಾಗಿ ಹೆಲ್ಮಾಂಡ್, ಕಂದಹಾರ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ದಾಳಿಯ ತೀವ್ರತೆ ಹೆಚ್ಚಾಗಿದೆ ಎಂದರು. ಇನ್ನು ನಗರ ಪರಿಸರದಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಭದ್ರತಾ ಪಡೆಗಳ ನಡುವಿನ ಸಂಘರ್ಷವು ಭಾರೀ  ಹಾನಿಯನ್ನುಂಟುಮಾಡುತ್ತಿದೆ. ಕನಿಷ್ಠ 241,000 ಜನರು ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದು, ಅಮಾನವೀಯ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಆಫ್ಘಾನ್‌ನ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಸರಬರಾಜು ಕಡಿಮೆಯಾಗುತ್ತಿವೆ. ರಸ್ತೆಗಳು, ಸೇತುವೆಗಳು, ಶಾಲೆಗಳು, ಕ್ಲಿನಿಕ್‌ಗಳು ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳು ದಾಳಿಗೆ ನಾಶವಾಗುತ್ತಿವೆ. ಪ್ರತಿ ದಿನದ ಸಂಘರ್ಷವು ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚಿನ ಹಾನಿ ಉಂಟುಮಾಡುತ್ತಿದೆ ಎಂದು ಗುಟೆರಸ್‌ ವಾಸ್ತವಾಂಶವನ್ನು
ಬಿಚ್ಚಿಟ್ಟರು.

ದೊಡ್ಡ ನಗರಗಳು ತಾಲಿಬಾನ್ ತೆಕ್ಕೆಗೆ
ಇನ್ನು ತಾಲಿಬಾನ್ ಈಗಾಗಲೇ ಆಫ್ಘಾನ್‌ನ ಎರಡು ಮತ್ತು ಮೂರನೇ ಬಹುದೊಡ್ಡ ನಗರಗಳಾದ ಹೆರಾತ್ ಮತ್ತು ಕಂದಹಾರ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅಫ್ಘಾನ್‌ನಲ್ಲಿ ತಾಲಿಬಾನ್ ದಂಗೆಕೋರರು ಹೆಚ್ಚೆಚ್ಚು ನೆಲೆಯನ್ನು ಆಕ್ರಮಿಸಿಕೊಳ್ಳುತ್ತಿದ್ದು, ದೇಶದ ಶೇ.60 ರಷ್ಟು ಭಾಗ ಅದರ  ನಿಯಂತ್ರಣದಲ್ಲಿ ಇದೀಗ ರಾಜಧಾನಿ ಕಾಬೂಲ್ ಕೂಡ ಆದಷ್ಟು ಬೇಗ ತಾಲಿಬಾನ್ ದಂಗೆಕೋರರ ಕಪಿಮುಷ್ಟಿಯಲ್ಲಿ ಸಿಲುಕುವ ಭಯ ಕಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com