ನೆರವಿಗಾಗಿ ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಹಿಳಾ ಫುಟ್ ಬಾಲ್ ಆಟಗಾರ್ತಿ!

ಎರಡು ದಶಕಗಳ ನಂತರ ಅಫ್ಘಾನಿಸ್ತಾನ ತಾಲಿಬಾನ್ ಹಿಡಿತಕ್ಕೆ ಒಳಪಟ್ಟ ನಂತರ ಅಲ್ಲಿನ ಮಹಿಳಾ ಫುಟ್ ಬಾಲ್ ತಂಡದ ಆಟಗಾರ್ತಿ ಖಾಲಿದ ಪೋಪಲ್ ನೆರವಿಗಾಗಿ ಕಣ್ಣೀರು ಹಾಕಿದ್ದು, ಇದೀಗ ಅಲ್ಲಿರುವ ಜನರ ಬಗ್ಗೆ ಭೀತಿಗೊಂಡಿದ್ದಾರೆ.
ಖಲೀದಾ ಫೋಪಲ್
ಖಲೀದಾ ಫೋಪಲ್

ಲಂಡನ್: ಎರಡು ದಶಕಗಳ ನಂತರ ಅಫ್ಘಾನಿಸ್ತಾನ ತಾಲಿಬಾನ್ ಹಿಡಿತಕ್ಕೆ ಒಳಪಟ್ಟ ನಂತರ ಅಲ್ಲಿನ ಮಹಿಳಾ ಫುಟ್ ಬಾಲ್ ತಂಡದ ಆಟಗಾರ್ತಿ ಖಾಲಿದ ಪೋಪಲ್ ನೆರವಿಗಾಗಿ  ಕಣ್ಣೀರು ಹಾಕಿದ್ದು, ಇದೀಗ ಅಲ್ಲಿರುವ ಜನರ ಬಗ್ಗೆ ಭೀತಿಗೊಂಡಿದ್ದಾರೆ.

ಮನೆಯನ್ನು ತೊರೆದು ನೆರೆಹೊರೆಯ ರಾಷ್ಟ್ರಗಳಿಗೆ ತೆರಳುವಂತೆ ಮುಂಚೂಣಿ ಆಟಗಾರ್ತಿಯಾಗಿ ಹೆಸರಾಗಿದ್ದ ಫೋಪಲ್  ಸಲಹೆ ನೀಡುತ್ತಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಜೊತೆಗೆ ದೂರವಾಣಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವಂತೆ, ಫೋಟೋಗಳನ್ನು ತೆಗೆದುಕೊಳ್ಳುವಂತೆ, ಅಲ್ಲಿಂದ ತೆರಳುವಂತೆ ಜನರಿಗೆ ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅಪ್ಘಾನ್ ಸರ್ಕಾರ ಕ್ಷಿಪ್ರಗತಿಯಲ್ಲಿ ಪತನಗೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿರುವ 34 ವರ್ಷದ ಫೋಪಲ್, ಈ ಎಲ್ಲಾ ವರ್ಷಗಳಲ್ಲಿ ಮಹಿಳೆಯರು ಎದ್ದು ನಿಲ್ಲುವ ಕೆಲಸ ಮಾಡಿದ್ದರಿಂದ ಹೃದಯ ಒಡೆಯುತ್ತಿದೆ. ಇದೀಗ ಅಫ್ಘಾನಿಸ್ತಾನ ತೊರೆಯುವಂತೆ ಅಲ್ಲಿನ ಮಹಿಳೆಯರಿಗೆ ಹೇಳುತ್ತಿದ್ದೇನೆ. ಅವರ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. 1996 ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತನ್ನ ಕುಟುಂಬದೊಂದಿಗೆ ಪಲಾಯನ ಮಾಡಿದ ಫೋಪಲ್ ಪಾಕಿಸ್ತಾನದ ನಿರಾಶ್ರಿತರ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದರು. ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನಕ್ಕೆ ತೆರಳಿದ್ದರು. 

ನನ್ನ ಪೀಳಿಗೆಗೆ ದೇಶವನ್ನು ನಿರ್ಮಿಸುವ ಮತ್ತು  ಮುಂದಿನ ಪೀಳಿಗೆಯ ಮಹಿಳೆಯರು ಮತ್ತು ಪುರುಷರಿಗೆ ಪರಿಸ್ಥಿತಿ ಅಭಿವೃದ್ಧಿಪಡಿಸುವ ಆಶಯವಿತ್ತು. ಮಹಿಳೆಯರು ಮತ್ತು ಯುವತಿಯರ ಸಬಲೀಕರಣಕ್ಕಾಗಿ ಫುಟ್ ಬಾಲ್ ನ್ನು ಸಾಧನವನ್ನಾಗಿ ಬಳಸಿಕೊಂಡಿದ್ದೆ. 2007ರ ವೇಳೆಗೆ ಅಫ್ಘಾನಿಸ್ತಾನದ ಮೊದಲ ಮಹಿಳಾ ರಾಷ್ಟ್ರೀಯ ತಂಡಕ್ಕೆ ಬೇಕಾಗುವಷ್ಟು ಆಟಗಾರ್ತಿಯರಿದ್ದರು. ನಾವು ಜರ್ಸಿಯನ್ನು ಧರಿಸಿದ್ದಕ್ಕೆ ತುಂಬಾ ಹೆಮ್ಮೆ ಪಡುತ್ತೇವೆ ಆದರೆ, ತಾಲಿಬಾನ್ ನಮ್ಮ ಶತ್ರು ಎಂದು ರಾಷ್ಟ್ರೀಯ ಟಿವಿಯೊಂದರಲ್ಲಿ ಹೇಳಿದ್ದರಿಂದ  ಅನೇಕ ಜೀವ ಬೆದರಿಕೆ ಕರೆಗಳು ಹಾಗೂ ಸವಾಲುಗಳನ್ನು ಎದುರಿಸಬೇಕಾಗಿತ್ತು ಎಂದು ಫೋಪಲ್ ತಿಳಿಸಿದರು.

ಫೋಪಲ್ ಅಫ್ಘಾನಿಸ್ತಾನ ಫುಟ್ ಬಾಲ್ ಅಸೋಸಿಯೇಷನ್ ನಿರ್ದೇಶಕರಾಗಿ ತಂಡದ ಸಮನ್ವಯತೆಗೆ ಕಡೆಗೆ ಗಮನ ಹರಿಸಬೇಕಾಗಿದ್ದರಿಂದ 2011ರಲ್ಲಿ ಫುಟ್ ಬಾಲ್ ಆಟ ಆಡುವುದನ್ನು ನಿಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com