
ಜಾಹಿರಾತು ಪೋಸ್ಟರ್ ಗಳಲ್ಲಿ ಮಹಿಳೆಯರ ಭಾವಚಿತ್ರ ಕಾಣಿಸದಂತೆ ಬಣ್ಣ ಬಳಿಯುತ್ತಿರುವ ತಾಲೀಬಾನಿಗಳು
ಕಾಬೂಲ್: ತಾಲೀಬಾನ್ ಆಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬೆನ್ನಲ್ಲೇ ಅಂಧಾ ದರ್ಬಾರ್ ಪ್ರಾರಂಭವಾಗಿದೆ.
ಕಾಬೂಲ್ ನಲ್ಲಿ ಮಹಿಳೆಯರ ಫೋಟೋ ಇರುವ ಜಾಹಿರಾತಿನ ಪೋಸ್ಟರ್ ಗಳಿಗೆ ಬಣ್ಣ ಬಳಿದು ತಾಲಿಬಾನ್ ಆಡಳಿತ ವೈಟ್ ವಾಷ್ ಮಾಡುವ ಕೆಲಸಕ್ಕೆ ಚಾಲನೆ ನೀಡಿದೆ.
Thrown to the wolves, portraits in front of saloon white washed... #Kabul #Afghanistan pic.twitter.com/o5Ue9vnT28
— Malik Achakzai (@MalikAchkJourno) August 15, 2021
ಶೋರೂಮ್ ಗಳಲ್ಲಿ, ಬ್ಯೂಟಿ ಪಾರ್ಲರ್ ಗಳಲ್ಲಿ ಮಹಿಳೆಯರ ಫೋಟೊಗಳಿಗೆ ತಾಲಿಬಾನ್ ಆಡಳಿತ ಬಣ್ಣ ಬಳಿಯುತ್ತಿದ್ದು, ಈ ದೃಶ್ಯ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗತೊಡಗಿವೆ. ವೈರಲ್ ಆಗುತ್ತಿರುವ ಈ ಚಿತ್ರ ಮಹಿಳೆಯರು ತಾಲಿಬಾನಿಗಳ ಟಾರ್ಗೆಟ್ ಆಗಿದ್ದು ಈ ಹಿಂದೆ ಮಹಿಳೆಯರ ದುರ್ಬಲ ಸ್ಥಿತಿಯನ್ನು ನೆನಪಿಸುವಂತಿದ್ದು, ಈಗಲೂ ಅಲ್ಲಿನ ಮಹಿಳೆಯರಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
ಆದರೆ ತಾಲಿಬಾನ್ ನ ವಕ್ತಾರ ಸುಹೈಲ್ ಶಾಹೀನ್ "ಆಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೈಟ್ ನ ಭವಿಷ್ಯಕ್ಕೆ ಹೊಂದುವಂತಹ ನಿಯಮಗಳ ಅನುಸರಣೆಗೆ ತಕ್ಕಂತೆ ಮಹಿಳಾ ಹಕ್ಕುಗಳನ್ನು ಈ ಬಾರಿ ಗೌರವಿಸಲಾಗುವುದು ಎಂದು ಭರವಸೆ ನೀಡಿದ್ದರಾದರೂ ಈ ಬಗ್ಗೆ ಮಹಿಳೆಯರಿಗೆ ಭರವಸೆ ಮೂಡಿರಲಿಲ್ಲ.
ಫುಟ್ಬಾಲ್ ಕ್ರೀಡಾಪಟುಗಳಿಂದ ಹಿಡಿದು, ಪದವಿ ವಿದ್ಯಾರ್ಥಿಗಳವರೆಗೂ ದೇಶದಲ್ಲಿ ಅನಿವಾರ್ಯ ಅಸ್ಥಿರತೆ ಉಂಟಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.