'ಜಗತ್ತು ನಿಮ್ಮ ಕಾರ್ಯಗಳನ್ನು ಪರಿಶೀಲಿಸುತ್ತದೆ': 'ಭರವಸೆ' ಉಳಿಸಿಕೊಳ್ಳುವಂತೆ ತಾಲಿಬಾನ್ ಗೆ ವಿಶ್ವಸಂಸ್ಥೆ ಆಗ್ರಹ
ಅಫ್ಘಾನಿಸ್ತಾನದ ಮಾಜಿ ಸರ್ಕಾರಿ ನೌಕರರಿಗೆ ಕ್ಷಮಾದಾನ ನೀಡುವ ವಾಗ್ದಾನಗಳು ಸೇರಿದಂತೆ, ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಬಾಲಕಿಯರು ಶಾಲೆಯಲ್ಲಿ ಉಳಿಯಲು ಅನುವು ಮಾಡಿಕೊಡುವ ತನ್ನ "ಭರವಸೆಗಳನ್ನು" ಈಡೇರಿಸುವಂತೆ ವಿಶ್ವಸಂಸ್ಥೆ ತಾಲಿಬಾನ್ ಗೆ ಒತ್ತಾಯಿಸಿದೆ.
Published: 17th August 2021 05:22 PM | Last Updated: 17th August 2021 05:29 PM | A+A A-

ಸಾಂದರ್ಭಿಕ ಚಿತ್ರ
ಜಿನೀವಾ: ಅಫ್ಘಾನಿಸ್ತಾನದ ಮಾಜಿ ಸರ್ಕಾರಿ ನೌಕರರಿಗೆ ಕ್ಷಮಾದಾನ ನೀಡುವ ವಾಗ್ದಾನಗಳು ಸೇರಿದಂತೆ, ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಬಾಲಕಿಯರು ಶಾಲೆಯಲ್ಲಿ ಉಳಿಯಲು ಅನುವು ಮಾಡಿಕೊಡುವ ತನ್ನ "ಭರವಸೆಗಳನ್ನು" ಈಡೇರಿಸುವಂತೆ ವಿಶ್ವಸಂಸ್ಥೆ ತಾಲಿಬಾನ್ ಗೆ ಒತ್ತಾಯಿಸಿದೆ.
"ತಾಲಿಬಾನ್‌ಗಳು ಮೇಲ್ನೋಟಕ್ಕೆ ಧೈರ್ಯ ತುಂಬುವಂತಹ ಹಲವಾರು ಹೇಳಿಕೆಗಳನ್ನು ನೀಡಿವೆ. ಆದರೆ ಅವರ ಕಾರ್ಯಗಳು ಪದಗಳಿಗಿಂತ ಆಳವಾಗಿ ಮಾತನಾಡುತ್ತವೆ ಮತ್ತು ಇದು ತುಂಬಾ ಮುಂಚೆಯೇ ಇದೆ" ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ವಕ್ತಾರ ರೂಪರ್ಟ್ ಕೋಲ್ವಿಲ್ಲೆ ಅವರು ಮಂಗಳವಾರ ಜಿನೀವಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾಲಿಬಾನ್‌ನ ಭರವಸೆಗಳನ್ನು ಗೌರವಿಸಬೇಕಾಗಿದೆ ಎಂದು ಹೇಳಿದ ಅವರು, "ಅವರ ಹಿಂದಿನ ಇತಿಹಾಸವನ್ನು ಗಮನಿಸಿದರೆ ಎಲ್ಲವೂ ಅರ್ಥವಾಗುತ್ತೆ. ಅವರ ಈ ಘೋಷಣೆಗಳನ್ನು ಕೆಲವು ಸಂದೇಹಗಳಿಂದ ಸ್ವಾಗತಿಸಲಾಗಿದೆ. ಅದೇನೇ ಇದ್ದರೂ, ಭರವಸೆಗಳನ್ನು ನೀಡಲಾಗಿದೆ, ಮತ್ತು ಅವುಗಳನ್ನು ಗೌರವಿಸಲಾಗುತ್ತದೆಯೇ ಅಥವಾ ಮುರಿಯಲಾಗುತ್ತದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು" ಎಂದು ಕೋಲ್ವಿಲ್ಲೆ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹಕ್ಕುಗಳ ಮೇಲಿನ ನಿರ್ಬಂಧಗಳ ಬಗ್ಗೆ "ಬೆಚ್ಚಿ ಬೀಳಿಸುವ ವರದಿಗಳು" ಮತ್ತು ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಬಾಲಕಿಯರ ನಿರ್ಬಂಧಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಹೇಳಿಕೆ ಬಗ್ಗೆ ಕೋಲ್ವಿಲ್ಲೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾಗರಿಕರ ಜೀವಗಳನ್ನು ರಕ್ಷಿಸಲು ತಾಲಿಬಾನ್‌ನೊಂದಿಗೆ "ತಮ್ಮ ಪ್ರಭಾವವನ್ನು" ಬಳಸಬೇಕೆಂದು ಅವರು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.