ತಾಲಿಬಾನ್ ಮುಖಂಡರ ಜೊತೆ ಆಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಭೇಟಿ, ಹಕ್ಕಾನಿ ನೆಟ್ ವರ್ಕ್ ಕುರಿತು ಚರ್ಚೆ

ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಪ್ರಬಲ ತಾಲಿಬಾನ್ ಹಿರಿಯ ನಾಯಕರನ್ನು ಭೇಟಿಯಾಗಿದ್ದು, ಸರ್ಕಾರದಲ್ಲಿ ಹಕ್ಕಾನಿ ನೆಟ್ ವರ್ಕ್ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ನಡೆಸಿದ್ದಾರೆ.
ಹಮೀದ್ ಕರ್ಜೈ
ಹಮೀದ್ ಕರ್ಜೈ

ಕಾಬೂಲ್: ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಪ್ರಬಲ ತಾಲಿಬಾನ್ ಹಿರಿಯ ನಾಯಕರನ್ನು ಭೇಟಿಯಾಗಿದ್ದು, ಸರ್ಕಾರದಲ್ಲಿ ಹಕ್ಕಾನಿ ನೆಟ್ ವರ್ಕ್ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ನಡೆಸಿದ್ದಾರೆ.

ಹಕ್ಕಾನಿ ನೆಟ್ ವರ್ಕ್ ಅನ್ನು ಅಮೆರಿಕ ಸರ್ಕಾರ ಉಗ್ರಗಾಮಿ ಸಮೂಹ ಎಂದು 2012ರಲ್ಲಿ ಘೋಷಣೆ ಮಾಡಿತ್ತು. ಅಲ್ಲದೆ ಅದರ ನಾಯಕರನ್ನು ಬಂಧಿಸಿ ಜೈಲಿಗಟ್ಟಿತ್ತು. ಇದೀಗ ಇದೇ ಗುಂಪಿನ ಮುಖಂಡರು ತಾಲಿಬಾನ್ ಸರ್ಕಾರದ ಭಾಗವಾಗುವ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಇದೇ ವಿಚಾರವಾಗಿ ಹಮೀದ್  ಕರ್ಜೈ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಪದಚ್ಯುತ ಸರ್ಕಾರದ ಹಿರಿಯ ಅಧಿಕಾರಿಯಾದ ಅಬ್ದುಲ್ಲಾ ಅಬ್ದುಲ್ಲಾ, ಪ್ರಾಥಮಿಕ ಸಭೆಗಳ ಭಾಗವಾಗಿ ಅನಸ್ ಹಕ್ಕಾನಿಯನ್ನು ಭೇಟಿಯಾದರು, ಕರ್ಜೈ ಅವರ ವಕ್ತಾರರು ತಾಲಿಬಾನ್‌ನ ಉನ್ನತ ರಾಜಕೀಯ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರೊಂದಿಗೆ  ಅಂತಿಮವಾಗಿ ಮಾತುಕತೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಮೂಲಗಳ ಪ್ರಕಾರ 2012ರಲ್ಲೇ ಅಮೆರಿಕ ಸರ್ಕಾರ ಹಕ್ಕಾನಿ ನೆಟ್ವರ್ಕ್ ಅನ್ನು ಭಯೋತ್ಪಾದಕ ಗುಂಪಿಗೆ ಸೇರ್ಪಡೆ ಮಾಡಿದ್ದು, ಭವಿಷ್ಯದ ಸರ್ಕಾರದಲ್ಲಿ ಅದರ ಪಾಲ್ಗೊಳ್ಳುವಿಕೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೇರಲು ದಾರಿ ಮಾಡಿಕೊಡಬಹುದು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. 

ತಾಲಿಬಾನ್‌ಗಳು "ಅಂತರ್ಗತ, ಇಸ್ಲಾಮಿಕ್ ಸರ್ಕಾರ" ವನ್ನು ಸ್ಥಾಪಿಸಲು ಪ್ರತಿಜ್ಞೆ ಮಾಡಿವೆಯಾದರೂ ಇಸ್ಲಾಂ ಧರ್ಮದ ಅತ್ಯಂತ ತೀವ್ರವಾದ ವ್ಯಾಖ್ಯಾನಗಳನ್ನು ಅನುಸರಿಸದವರಿಗೆ ಈ ಹಿಂದಿನ ತಾಲಿಬಾನ್ ಸರ್ಕಾರದ ನಿಯಮಗಳೇ ಅನುಸರಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com