1990ರ ಅಂತರ್ಯುದ್ಧದ ಶಿಯಾ ನಾಯಕನ ಪ್ರತಿಮೆ ಧ್ವಂಸಗೊಳಿಸಿದ ತಾಲಿಬಾನ್

1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಮಿಲಿಟಿಯ ನಾಯಕನ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿರುವ ಫೋಟೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ತಾಲಿಬಾನ್ ಬಂಡುಕೋರರು
ತಾಲಿಬಾನ್ ಬಂಡುಕೋರರು

ಕಾಬೂಲ್: 1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಮಿಲಿಟಿಯ ನಾಯಕನ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿರುವ ಫೋಟೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

1996 ರಲ್ಲಿ ತಾಲಿಬಾನ್ ನಿಂದ ಕೊಲ್ಲಲ್ಪಟ್ಟ ಮಿಲಿಟಿಯ ನಾಯಕ ಅಬ್ದುಲ್ ಅಲಿ ಮಜಾರಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಮಜಾರಿ ಅಫ್ಘಾನಿಸ್ತಾನದ ಜನಾಂಗೀಯ ಹಜಾರ ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದರು. ಸುನ್ನಿ ತಾಲಿಬಾನ್ ನ ಹಿಂದಿನ ಆಡಳಿತದಲ್ಲಿ ಶಿಯಾಗಳಿಗೆ ಕಿರುಕುಳ ನೀಡಲಾಗಿತ್ತು. 

ಈ ಪ್ರತಿಮೆ ಮಧ್ಯ ಬಾಮ್ಯಾನ್ ಪ್ರಾಂತ್ಯದಲ್ಲಿದ್ದು, ಇಲ್ಲಿ ಕುಖ್ಯಾತವಾಗಿದ್ದ ತಾಲಿಬಾನ್ 1,500 ವರ್ಷಗಳಷ್ಟು ಹಳೆಯದಾದ ಎರಡು ಬೃಹತ್ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದೆ. ಬುದ್ಧರು ಇಸ್ಲಾಂನ ವಿಗ್ರಹಾರಾಧನೆಯ ಮೇಲಿನ ನಿಷೇಧವನ್ನು ಉಲ್ಲಂಘಿಸಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದು, 20 ವರ್ಷಗಳ ನಂತರ  ವಿದೇಶಿ ಸೇನೆಯನ್ನು ಹಿಮ್ಮೆಟ್ಟಿಸಿದ್ದೇವೆ. ಆಂತರಿಕವಾಗಿ, ಬಾಹ್ಯವಾಗಿ ಯಾವುದೇ ಶತೃತ್ವವನ್ನು ನಾವು ಬಯಸುವುದಿಲ್ಲ. ಮಹಿಳೆಯರ ಹಕ್ಕುಗಳಿಗೆ ಯಾವುದೇ ಭಂಗ ತರುವುದಿಲ್ಲ ಎಂದು  ಹೇಳಿದ್ದಾರೆ.

ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ ಯಾರ ವಿರುದ್ಧವೂ ಪ್ರತೀಕಾರ ಕೈಗೊಳ್ಳುವುದಿಲ್ಲ. ನಾಗರೀಕರ ಮನೆಗಳ ಮೇಲೆ ಯಾವುದೇ ದಾಳಿ, ಶೋಧ  ನಡೆಸುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com