ನಾವು ಕ್ರಿಕೆಟ್ ಪ್ರೀತಿಸುತ್ತೇವೆ: ಗನ್ ಹಿಡಿದು ಆಪ್ಘನ್ ಕ್ರಿಕೆಟ್ ಕಚೇರಿಗೆ ನುಗ್ಗಿದ ತಾಲಿಬಾನಿಗಳು!

ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಬಂಡುಕೋರರು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ.
ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಯಲ್ಲಿ ತಾಲಿಬಾನಿಗರು
ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಯಲ್ಲಿ ತಾಲಿಬಾನಿಗರು

ಕಾಬುಲ್: ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಬಂಡುಕೋರರು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ.

ಹೌದು.. ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸ ಎಲೆ ಮೀರುತ್ತಿದ್ದು, ಆಫ್ಘಾನಿಸ್ತಾನದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ದೇಶದ ಸಂಪೂರ್ಣ ಆಡಳಿತವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ರಾಜಧಾನಿ ಕಾಬುಲ್ ಪ್ರಮುಖ ಕಟ್ಟಡಗಳಗಿ  ನುಗ್ಗಿರುವ ತಾಲಿಬಾನಿಗಳು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ. ಅಚ್ಚರಿ ಎಂದರೆ ತಾಲಿಬಾನಿಗಳೊಂದಿಗೆ ಆಫ್ಘಾನಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ಮಜಾರಿ ಕೂಡ ಸಾಥ್ ನೀಡಿದ್ದರು.

ಈ ವೇಳೆ ಮಾತನಾಡಿದ ತಾಲಿಬಾನಿ ನಾಯಕರು, 'ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಎಂದಿನಂತೆ ಕ್ರಿಕೆಟ್ ಚಟುವಟಿಕೆ ಸಾಗಲಿವೆ. ದೇಶದಲ್ಲಿ ಕ್ರಿಕೆಟ್ ಬಂದ್ ಮಾಡುವ ಸಂಬಂಧ ಇದುವರೆಗೂ ಯಾವುದೇ ಸೂಚನೆ ಅಥವಾ ಆದೇಶ ಬಂದಿಲ್ಲ. ಹೀಗಾಗಿ ಆಫ್ಘನ್ ಕ್ರಿಕೆಟ್  ತಂಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನ ತಂಡ ಲಾಜಿಸ್ಟಿಕ್ಸ್ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿದು ಬಂದಿದ್ದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದಾಗಿ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೂ ಕ್ರಿಕೆಟ್ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು  ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಸಿಇಒ ಹಮೀದ್ ಶಿನ್ವರಿ ಈ ಮೊದಲೇ ಹೇಳಿದ್ದರು. ತಾಲಿಬಾನ್‌ಗಳು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ, ಬೆಂಬಲಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಆಫ್ಗನ್ ಆಡಳಿತವನ್ನು ತಾಲಿಬಾನ್ ವಶಪಡಿಸಿಕೊಂಡರೂ ಕ್ರಿಕೆಟಿಗರು ಹಾಗೂ ಅವರ ಕುಟುಂಬಸ್ಥರು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com