ಆಫ್ಘಾನಿಸ್ತಾನದಲ್ಲಿ ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್

ಆಫ್ಘಾನಿಸ್ತಾನದಲ್ಲಿ ಹಾಲಿ ಪರಿಸ್ಥಿತಿ ಕುರಿತಂತೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಜೋ ಬೈಡನ್
ಜೋ ಬೈಡನ್

ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ಹಾಲಿ ಪರಿಸ್ಥಿತಿ ಕುರಿತಂತೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಮುಕ್ತವಾಗಿರುವ ಏಕೈಕ ಸ್ಥಳ ಎಂದರೆ ಅದು ಕಾಬೂಲ್ ವಿಮಾನ ನಿಲ್ದಾಣ. ಇಲ್ಲಿ ಅಮೆರಿಕ ಸೇನೆ ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿ ನಾವು  ಸುಮಾರು 6 ಸಾವಿರ ಸೈನಿಕರನ್ನು ನಿಯೋಜಿಸಿದ್ದೇವೆ. ಆ ಮೂಲಕ ವಿಮಾನ ನಿಲ್ದಾಣವನ್ನು ಸಂಪೂರ್ಣ ಸುರಕ್ಷಿತಗೊಳಿಸಿದ್ದೇವೆ. ಇಲ್ಲಿಗೆ ಬರುವ ಮತ್ತು ಹೊರಡುವ ವಿಮಾನಗಳು ಕೇವಲ ಮಿಲಿಟರಿ ವಿಮಾನಗಳು ಮಾತ್ರವಲ್ಲದೆ ಇತರ ದೇಶಗಳ ನಾಗರಿಕ ಚಾರ್ಟರ್‌ಗಳಿಗೆ ಅವಕಾಶ ನೀಡಿದ್ದು, ಎನ್‌ಜಿಒಗಳು  ನಾಗರಿಕರನ್ನು ಮತ್ತು ದುರ್ಬಲ ಅಫ್ಘಾನಿಗಳನ್ನು ಹೊರ ಕಳುಹಿಸಲು ಅನುವು ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.

ಅಂತೆಯೇ ಇದೊಂದು ಅತ್ಯಂತ ಕಷ್ಟದ ಮತ್ತು ಅಪಾಯದ ಕಾರ್ಯಾಚರಣೆಯಾಗಿದ್ದು, ಸೈನಿಕರ ಪ್ರಾಣವನ್ನು ಪಣಕ್ಕಿಟ್ಟು ಈ ಅಪಾಯಕಾರಿ ಕಾರ್ಯಾಚರಣೆಗೆ ಕೈ ಹಾಕಿದ್ದೇವೆ. ಅಂತಿಮ ಫಲಿತಾಂಶ ಏನಾಗಬಹುದು ಎಂದು ನಾನು ಭರವಸೆ ನೀಡಲು ಸಾಧ್ಯವಿಲ್ಲ, ಅದು ನಷ್ಟದ ಅಪಾಯವಿಲ್ಲದೆ ಇರುತ್ತದೆ. ನಾವು  ಈಗಾಗಲೇ ಜುಲೈನಿಂದ 18,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ್ದೇವೆ ಮತ್ತು ಆಗಸ್ಟ್ 14 ರಂದು ನಮ್ಮ ಮಿಲಿಟರಿ ಏರ್‌ಲಿಫ್ಟ್ ಆರಂಭವಾದಾಗಿನಿಂದ ಸುಮಾರು 13,000 ಜನರನ್ನು (ಕಾಬೂಲ್‌ನಿಂದ) ಸ್ಥಳಾಂತರಿಸಿದ್ದೇವೆ ಎಂದು ಬೈಡನ್ ಹೇಳಿದರು. 

ಅಫ್ಘನ್ ಮಿಷನ್ ಕೊನೆಗೊಳಿಸುವ ಸಮಯ ಬಂದಿದೆ
ಇದೇ ವೇಳೆ ಸುಮಾರು 21 ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಿಯೋಜಿಸಿ ನಡೆಸಿದ್ದ ಸೇನಾ ಕಾರ್ಯಾಚರಣೆಯನ್ನು ಅಧಿಕೃತವಾಗಿ ಅಂತ್ಯಗೊಳಿಸುವ ಸಮಯ ಬಂದಿದೆ ಎಂದು ಹೇಳಿದ ಬೈಡನ್, ಶೀಘ್ರದಲ್ಲೇ ಬಾಕಿ ಉಳಿದಿರುವ ಅಲ್ಪ ಸೇನೆಯನ್ನೂ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಮುನ್ಸೂಚನೆ ನೀಡಿದರು. ಅಲ್ಲದೆ ಈ ಹಂತದಲ್ಲಿ ಯಾವುದೇ ಒಬ್ಬ ಸೈನಿಕನಿಗೆ ಹಾನಿಯಾದರೂ ಖಂಡಿತಾ ಅದಕ್ಕೆ ದುಬಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಅಫ್ಘನ್ ಮಹಿಳಾ, ಮಕ್ಕಳ ರಕ್ಷಣೆಗೆ ಜಾಗತಿಕ ಸಮುದಾಯದ ಒತ್ತಡಬೇಕು
ಇನ್ನು ಆಫ್ಘನಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕು ರಕ್ಷಣೆ ಕುರಿತು ಮಾತನಾಡಿದ ಬೈಡನ್ ಈ ವಿಚಾರದಲ್ಲಿ ಜಾಗತಿಕ ಸಮುದಾಯದ ಒತ್ತಡಬೇಕು. ಈ ನಿಟ್ಟಿನಲ್ಲಿ ತಾಲಿಬಾನ್ ಮೇಲೆ ಒತ್ತಡ ತರಬೇಕು ಎಂದು ಹೇಳಿದರು. ಇದೇ ವೇಳೆ ಆಫ್ಘಾನಿಸ್ತಾನಕ್ಕೆ ಆಹಾರ ನೆರವು, ಆಶ್ರಯ ಮತ್ತು ಆರೋಗ್ಯ ಮಿಷನ್ ಒದಗಿಸುವಂತೆ ಬೈಡೆನ್ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com