ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿ ಉಟ್ಟ ಬಟ್ಟೆಯಲ್ಲಿಯೇ ದೇಶ ಬಿಟ್ಟು ಹೋಗಿದ್ದರು: ಮಾಜಿ ಹಿರಿಯ ಅಧಿಕಾರಿ 

ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿಯವರು ತಾಲಿಬಾನಿಗಳು ರಾಜಧಾನಿ ಸೇರಿದಂತೆ ದೇಶವನ್ನು ವಶಪಡಿಸಿಕೊಳ್ಳುವಾಗ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ, ಉಟ್ಟ ಬಟ್ಟೆಯಲ್ಲಿಯೇ ಕಳೆದ ಭಾನುವಾರ ದೇಶ ಬಿಟ್ಟು ಹೋಗಿದ್ದರು ಎಂದು ಪದಚ್ಯುತ ಸರ್ಕಾರದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಅಶ್ರಫ್ ಘನಿ
ಅಶ್ರಫ್ ಘನಿ

ಕಾಬುಲ್: ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿಯವರು ತಾಲಿಬಾನಿಗಳು ರಾಜಧಾನಿ ಸೇರಿದಂತೆ ದೇಶವನ್ನು ವಶಪಡಿಸಿಕೊಳ್ಳುವಾಗ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ, ಉಟ್ಟ ಬಟ್ಟೆಯಲ್ಲಿಯೇ ಕಳೆದ ಭಾನುವಾರ ದೇಶ ಬಿಟ್ಟು ಹೋಗಿದ್ದರು ಎಂದು ಪದಚ್ಯುತ ಸರ್ಕಾರದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಳೆದ ವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಳ್ಳುವ ವೇಳೆ ಮತ್ತು ನಂತರ ಆದ ಬೆಳವಣಿಗೆಗಳನ್ನು ಸವಿವರವಾಗಿ ತಿಳಿಸಿದ ಅವರು, ರಾಜಧಾನಿ ಕಾಬುಲ್ ನ್ನು ಅಷ್ಟೊಂದು ಕ್ಷಿಪ್ರವಾಗಿ ವಶಪಡಿಸಿಕೊಂಡ ಬಗ್ಗೆ ಸಲಹೆಗಾರರು ಕೂಡ ಚಕಿತರಾಗಿದ್ದಾರೆ ಎಂದು ಮಾಜಿ ಅಧಿಕಾರಿ ಹೇಳಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.

ಕಾಬುಲ್ ನಲ್ಲಿ ತಾಲಿಬಾನ್ ಮತ್ತು ಅಲ್ ಖೈದಾ ಗುಂಪುಗಳಿಗೆ ಸೇರಿದ ಪ್ರಮುಖ ಸದಸ್ಯರನ್ನು ಭೇಟಿ ಮಾಡಿ ಸರ್ಕಾರ ವಿಧಿಯಿಲ್ಲದೆ ಶರಣಾಗಬೇಕು ಎಂದು ಹೇಳಿತು ಎಂದು ಘನಿ ಆಡಳಿತದ ಹಿರಿಯ ಸದಸ್ಯರೊಬ್ಬರು ಹೇಳಿದರು ಎಂದು ಮಾಧ್ಯಮ ವರದಿ ತಿಳಿಸಿದೆ.

ತಾಲಿಬಾನೀಯರು ಕಾಬೂಲ್ ಹತ್ತಿರ ಬರುತ್ತಿದ್ದಂತೆ ಆಂತರಿಕ ಸರ್ಕಾರವನ್ನು ಬಯಸಿ ಶಾಂತಿಯುತವಾಗಿ ಸರ್ಕಾರವನ್ನು ಹಸ್ತಾಂತರಿಸುವ ಬಗ್ಗೆ ಅಮೆರಿಕ ಜೊತೆ ಅಫ್ಘಾನಿಸ್ತಾನ ಮಾತುಕತೆ ನಡೆಸಿತ್ತು ಆ ಮೂಲಕ ಅಧ್ಯಕ್ಷ ಘನಿ ರಾಜೀನಾಮೆಗೆ ಸಿದ್ದರಾಗಿದ್ದರು.

ತಾಲಿಬಾನ್ ನಗರಕ್ಕೆ ಬಂದಾಗ ಈ ಮಾತುಕತೆಗಳು ನಡೆಯುತ್ತಿದ್ದವು. ತಾಲಿಬಾನ್ ಅನೇಕ ಅಂಶಗಳಿಂದ ಕಾಬೂಲ್ ನಗರವನ್ನು ಪ್ರವೇಶಿಸುತ್ತಿರುವುದನ್ನು ಗುಪ್ತಚರ ಇಲಾಖೆ ಪ್ರತಿಕೂಲವಾದ ಪ್ರಗತಿ ಎಂದು ಅರ್ಥೈಸಿಕೊಂಡಿದೆ ಎಂದಿದ್ದಾರೆ ಹಿರಿಯ ಅಧಿಕಾರಿ.

ಕಾಬುಲ್ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ತಾಲಿಬಾನಿಯರು ಅಧ್ಯಕ್ಷರನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾರೆ ಎಂದು ಕೂಡ ಗುಪ್ತಚರ ಮಾಹಿತಿ ಸಿಕ್ಕಿತ್ತು. ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಭಾನುವಾರ ಬೆಳಿಗ್ಗೆ ಪಂಜಶೀರ್ ಕಣಿವೆಗೆ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ಏನಾಯ್ತು?: ಕಾಬೂಲ್ ಹತ್ತಿರ ತಾಲಿಬಾನಿಯರು ಬರುತ್ತಿದ್ದಂತೆ. ಅರಮನೆಯ ಹೊರಗೆ ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ. ನಗರದ ಜನರು ಗಾಬರಿಗೊಂಡರು ಮತ್ತು ಅನೇಕ ಭದ್ರತಾ ಸಿಬ್ಬಂದಿ ತಮ್ಮ ಹುದ್ದೆಗಳನ್ನು ತ್ಯಜಿಸಿದರು ಆ ಸಮಯದಲ್ಲಿ, ಕಾಬೂಲ್ ನಾಗರಿಕರನ್ನು ಬೀದಿಗಳಲ್ಲಿ ಉಗ್ರರು ಹೊಡೆದುರುಳಿಸದೆ ರಕ್ಷಿಸುವುದು ಗುರಿಯಾಗಿತ್ತು. ಅದರಲ್ಲಿ ಸಫಲವಾಗಿದ್ದು, ಇಂದಿಗೂ ಶಾಂತಿ ಮಾತುಕತೆ, ಒಪ್ಪಂದ ಅಫ್ಘಾನ್ ಮಾಜಿ  ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಲಾ ಅಬ್ದುಲ್ಲಾ ಮತ್ತು ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ನೇತೃತ್ವದಲ್ಲಿ ನಡೆಯುತ್ತಿದೆ.

ಘನಿಯವರು ಭಾನುವಾರ ತರಾತುರಿಯಲ್ಲಿ ದೇಶ ಬಿಟ್ಟು ಹೋದರು. ಅವರು ಉಜ್ಬೇಕಿಸ್ತಾನ್ ನ ಟೆರ್ಮೆಜ್ ಗೆ ಹೋಗಿ ಅಲ್ಲಿ ಒಂದು ರಾತ್ರಿ ಕಳೆದರು. ನಂತರ ಅಲ್ಲಿಂದ ಯುಎಇಗೆ (ಯುನೈಟೆಡ್ ಅರಬ್ ಎಮಿರೇಟ್ಸ್) ಹೋದರು. ಅವರು ಹೋಗುವಾಗ ಹಣವನ್ನೇನೂ ತೆಗೆದುಕೊಂಡು ಹೋಗಿರಲಿಲ್ಲ, ಅಕ್ಷರಶಃ ಉಟ್ಟ ಬಟ್ಟೆಯಲ್ಲಿಯೇ ಹೋಗಿದ್ದರು.

 ಘನಿಯವರು ಕಾಬೂಲ್‌ನಿಂದ ಹೋಗುವಾಗ ಲಕ್ಷಾಂತರ ಡಾಲರ್‌ಗಳನ್ನು ತೆಗೆದುಕೊಂಡು ಹೋಗಿದ್ದರು ಎಂಬ ಆರೋಪಕ್ಕೆ ಈ ಮಾಜಿ ಅಧಿಕಾರಿಯ ಹೇಳಿಕೆ ತದ್ವಿರುದ್ಧವಾಗಿದೆ. ಸ್ವತಃ ಪದಚ್ಯುತ ಅಧ್ಯಕ್ಷ ಘನಿಯವರು ಕೂಡ, ತಾವು ದೇಶದಲ್ಲಿ ರಕ್ತಪಾತ ಆಗುವುದನ್ನು ತಡೆಯಲು, ಧರಿಸಿದ್ದ ಶೂವನ್ನು ಸಹ ಬದಲಾಯಿಸದೇ ಹಾಗೇ ಹೋಗಿದ್ದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com