ಅಫ್ಘಾನಿಸ್ತಾನ: ಮಾಧ್ಯಮ ಸಂಬಂಧಿ ವಿಚಾರಗಳ ನಿರ್ವಹಣೆಗೆ ಸಮಿತಿ ರಚಿಸಿದ ತಾಲಿಬಾನ್ 

ಮಾಧ್ಯಮಗಳಿಗೆ ಸಂಬಂಧಿಸಿದ ವಿಚಾರಗಣ ನಿರ್ವಹಣೆಗಾಗಿ ತಾಲಿಬಾನ್ ಉಗ್ರರು ಶನಿವಾರ ಸಮಿತಿಯೊಂದರನ್ನು ರಚನೆ ಮಾಡಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಮಾಧ್ಯಮಗಳಿಗೆ ಸಂಬಂಧಿಸಿದ ವಿಚಾರಗಣ ನಿರ್ವಹಣೆಗಾಗಿ ತಾಲಿಬಾನ್ ಉಗ್ರರು ಶನಿವಾರ ಸಮಿತಿಯೊಂದರನ್ನು ರಚನೆ ಮಾಡಿದ್ದಾರೆಂದು ತಿಳಿದುಬಂದಿದೆ. 

ಸಂಸ್ಕೃತಿ ಆಯೋಗದ ತಾಲಿಬಾನ್ ಪ್ರತಿನಿಧಿ, ಮಾಧ್ಯಮ ರಕ್ಷಣೆಯ ಸಂಘದ ಉಪ ಮುಖ್ಯಸ್ಥ ಮತ್ತು ಕಾಬೂಲ್ ಪೊಲೀಸ್ ಅಧಿಕಾರಿಯನ್ನೊಳಗೊಂಡ ತ್ರಿಪಕ್ಷೀಯ ಸಮಿತಿಯನ್ನು ತಾಲಿಬಾನಿಗಳು ರಚನೆ ಮಾಡಿದ್ದಾರೆಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಈ ನಡುವೆ ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಉಪ ಪ್ರಧಾನ ಕಾರ್ಯದರ್ಶಿ ಜೆರೆಮಿ ಡಿಯರ್ ಅವರು ಪ್ರತಿಕ್ರಿಯೆ ನೀಡಿ, ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳು, ಸಾಕಷ್ಟು ಸವಾಲಿನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ.

ಪತ್ರಕರ್ತರಿಗೆ ಜೀವ ಬೆದರಿಕೆಗಳು ಬರುತ್ತಿವೆ ಮತ್ತು ಮಹಿಳಾ ವರದಿಗಾರರಿಗೆ ಕೆಲಸ ಮಾಡದಂತೆ ತಡೆಹಿಡಿಯಲಾಗುತ್ತಿದೆ. ಈಗಾಗಲೇ ಹಲವು ಮಾಧ್ಯಮ ಸಂಸ್ಥೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com