ಜೋ ಬೈಡನ್‌ ಅಸಮರ್ಥ; ಒಸಾಮಾ ಬಿನ್‌ ಲಾಡೆನ್‌ 2010ರಲ್ಲೇ ನುಡಿದಿದ್ದ ಭವಿಷ್ಯ ಈಗ ನಿಜವಾಯ್ತಾ?

ಒಸಾಮಾ ಬಿನ್ ಲಾಡೆನ್ ಈ ಹೆಸರನ್ನು ಬಹುಶಃ  ಜಗತ್ತು ಎಂದಿಗೂ ಮರೆಯುವುದಿಲ್ಲ. ಪ್ರಪಂಚದ ಉಳಿದ ದೇಶಗಳು ಅವನನ್ನು ಬದಿಗಿರಿಸಿದರೂ ಅಮೆರಿಕಾ ಮಾತ್ರ ಈ ಅಂತಾರಾಷ್ಟ್ರೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ನಾಯಕನ ಹೆಸರನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಇದಕ್ಕೆ ಕಾರಣ 9/11 ದಾಳಿ.
ಜೋ ಬೈಡನ್-ಬಿನ್ ಲಾಡೆನ್
ಜೋ ಬೈಡನ್-ಬಿನ್ ಲಾಡೆನ್

ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಈ ಹೆಸರನ್ನು ಬಹುಶಃ  ಜಗತ್ತು ಎಂದಿಗೂ ಮರೆಯುವುದಿಲ್ಲ. ಪ್ರಪಂಚದ ಉಳಿದ ದೇಶಗಳು ಅವನನ್ನು ಬದಿಗಿರಿಸಿದರೂ ಅಮೆರಿಕಾ ಮಾತ್ರ ಈ ಅಂತಾರಾಷ್ಟ್ರೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ನಾಯಕನ ಹೆಸರನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಇದಕ್ಕೆ ಕಾರಣ 9/11 ದಾಳಿ.

ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯಿಂದ ಜಗತ್ತಿನ ದೊಡ್ಡಣ್ಣ ಒಮ್ಮೆಲೇ ಕುಸಿದಿತ್ತು. ಈ ದಾಳಿಯಲ್ಲಿ 3,000 ಮಂದಿ  ಸಾವನ್ನಪ್ಪಿದ್ದು 6,000ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ, ಅಮೆರಿಕಾ ಸೇನೆ 2011ರ ಮೇ 2ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಲಾಡೆನ್ ನನ್ನು ಹತ್ಯೆ ಮಾಡಿತ್ತು.

ಆದರೆ ಹತ್ತು ವರ್ಷಗಳ ಹಿಂದೆ ಹತನಾದ ಬಿನ್ ಲಾಡೆನ್ ಹೆಸರು ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ಜೋ ಬೈಡನ್‌ ವಿರುದ್ದ ಬಿನ್ ಲಾಡೆನ್ ಆಗ ವ್ಯಕ್ತಪಡಿಸಿದ್ದ ಅಭಿಪ್ರಾಯಗಳೇ ಇದಕ್ಕೆ ಕಾರಣ. ಆ ಸಮಯದಲ್ಲಿ ಜೋ ಬೈಡನ್‌ ಅಮೆರಿಕಾದ ಅಧ್ಯಕ್ಷನಾಗಬೇಕು. ನಂತರ ಅಮೆರಿಕಾ ಪತನವನ್ನು ನಾನು ಕಣ್ಣಾರೆ ನೋಡಬೇಕು ಎಂದು ಬಿನ್ ಲಾಡೆನ್ ಬಯಸಿದ್ದನಂತೆ. ಲಾಡೆನ್‌ ಆಸೆ ಪಟ್ಟಿದ್ದ ಈ ವಿಷಯ ಪ್ರಸ್ತುತ ಅಮೆರಿಕಾದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ.

ಅಮೆರಿಕಾ ಪಡೆಗಳು ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿದ ನಂತರ ಅಮೆರಿಕಾ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅವುಗಳಲ್ಲಿ ಲಾಡೆನ್‌ ತನ್ನ ಸಹಚರನಾದ ಅತಿಯಾ ಅಬ್ದ್ ಅಲ್-ರೆಹಮಾನ್ ಎಂಬ ವ್ಯಕ್ತಿಗೆ 2010ರಲ್ಲಿ ಬರೆದಿದ್ದ 48 ಪುಟಗಳ ಪತ್ರವೂ ಒಂದಾಗಿದೆ. ಈ ಪತ್ರದಲ್ಲಿ ಜೋ ಬೈಡನ್‌ ಬಗ್ಗೆ ಬಿನ್‌ ಲಾಡೆನ್‌ ಸಂಚಲನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಪ್ರಸ್ತುತ ತೀವ್ರ ಚರ್ಚೆಯ ವಿಷಯವಾಗಿದೆ. ಪತ್ರದಲ್ಲಿನ ಮಾಹಿತಿ ಪ್ರಕಾರ, ಅಲ್ ಖೈದಾ ಮುಖ್ಯನಾಯಕ ಒಸಾಮಾ ಬಿನ್ ಲಾಡೆನ್ ಬದುಕ್ಕಿದ್ದಾಗ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹತ್ಯೆ ಮಾಡಲು ತೀವ್ರ ರೀತಿಯ ಪ್ರಯತ್ನ ನಡೆಸಿದ್ದ, ಒಬಾಮ ಜೊತೆಗೆ ಅಮೆರಿಕದ ಗುಪ್ತಚರ ಸಂಸ್ಥೆಯ ಅಂದಿನ ನಿರ್ದೇಶಕ ಡೇವಿಡ್ ಪೆಟ್ರಾಯಸ್ ಅವರನ್ನು ಹತ್ಯೆ ಮಾಡಲು ಬಿನ್‌ ಲಾಡೆನ್‌ ತನ್ನ ಸಹಚರರೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದ ಎಂಬುದು ಪತ್ರದಲ್ಲಿ ಉಲ್ಲೇಖವಾಗಿದೆ.

ಒಬಾಮಾ, ಡೇವಿಡ್ ಪೀಟರ್ಸ್ ಸಾವುಗಳನ್ನು ಕಣ್ಣಾರೆ ನೋಡಬೇಕೆಂದು ಬಿನ್ ಲಾಡೆನ್ ಬಯಸಿದ್ದ.. .. ಆಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಬೈಡೆನ್ ಅವರನ್ನು ಹತ್ಯೆ ಮಾಡಲು ಯಾವುದೇ ಆಸಕ್ತಿ ತೋರಿರಲಿಲ್ಲ. ಮೇಲಾಗಿ, ಬೈಡೆನ್ ಅವರನ್ನು ಯಾವುದೇ ಪರಿಸ್ಥಿತಿಯಲ್ಲೂ ಗುರಿಯಾಗಿಸದಂತೆ ಬಿನ್ ಲಾಡೆನ್ ತನ್ನ ಅನುಯಾಯಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದ. ಒಬಾಮಾ ಹತ್ಯೆ ಮಾಡಿದರೆ ಅಮೆರಿಕಾ ಕಾಯ್ದೆಗಳ ಪ್ರಕಾರ ಜೋ ಬಿಡೆನ್ ಅಧ್ಯಕ್ಷರಾಗುತ್ತಾರೆ ಎಂದು ತನ್ನ ಅನುಚರರಿಗೆ ತಿಳಿಸಿದ್ದನಂತೆ. ಅದು ನಡೆದರೆ ಬೈಡನ್‌ ತನ್ನ ಅಸಮರ್ಥ ಆಡಳಿತದಿಂದಾಗಿ ಅಮೆರಿಕಾ ಬಿಕ್ಕಟ್ಟಿಗೆ ಒಳಗಾಗಲಿದೆ.. ಆ ಮೂಲಕ ಅಮೆರಿಕಾ ಪತನ ಆರಂಭಗೊಳ್ಳಲಿದೆ ಎಂದು ಬಿನ್‌ ಲಾಡೆನ್‌ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾನೆ.

ಆದಾಗ್ಯೂ, ಅಫ್ಘಾನಿಸ್ತಾನದಿಂದ ಸೇನಾ ಪಡೆಗಳನ್ನು ಹಿಂಪಡೆದುಕೊಳ್ಳಲು ಅಮೆರಿಕಾ ಸರ್ಕಾರ ಕೆಲ ಸಮಯದ ಹಿಂದೆ ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಜುಲೈ 8 ರಂದು, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡಿ .. ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುವ ಸಾಧ್ಯತೆಯಿಲ್ಲ, ಕಾಬೂಲ್‌ನಲ್ಲಿ ಯಾವುದೇ ಗೊಂದಲದ ಪರಿಸ್ಥಿತಿ ಸೃಷ್ಟಿಯಾಗುವ ಲಕ್ಷಣಗಳಿಲ್ಲ ಎಂದು ಹೇಳಿದ್ದರು. ಆದರೆ, ಸ್ಥಳೀಯ ಮಟ್ಟದಲ್ಲಿ, ಪರಿಸ್ಥಿತಿ ವಿವಿಭಿನ್ನವಾಗಿದ್ದವು ಅಮೆರಿಕಾ ಪಡೆಗಳು ಕಾಲ್ತೆಗೆಯುತ್ತಿದ್ದಂತೆಯೇ , ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಅಶಾಂತಿಯನ್ನು ಸೃಷ್ಟಿಸಿತು. ಈ ಕ್ರಮವಾಗಿ ಅಮೆರಿಕಾ ವಿಶ್ವದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದೇ ಸಮಯದಲ್ಲಿ, ಜೋ ಬಿಡೆನ್ ಅಸಮರ್ಥನೆಂದು ಬಿನ್‌ ಲಾಡೆನ್‌ ಬಣ್ಣಿಸಿರುವ ಪತ್ರ ಅಮೆರಿಕಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com