ಕಾಬುಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟದ ಮರುದಿನ ಅಫ್ಘಾನಿಸ್ತಾನ ಸ್ಥಳಾಂತರ ಕಾರ್ಯಾಚರಣೆ ಪುನಾರಂಭ!

ಅಫ್ಘಾನಿಸ್ತಾನ ವಿಮಾನ ನಿಲ್ದಾಣದಲ್ಲಿ ಮುಂದೆಯೂ ಉಗ್ರರು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವುದಾಗಿ ಅಮೆರಿಕಾಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಅಫ್ಘಾನಿಸ್ತಾನದಿಂದ ಅಲ್ಲಿನ ನಾಗರಿಕರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಗುರುವಾರ ನಡೆದ ಕಾಬೂಲ್ ಬಾಂಬ್ ಬ್ಲಾಸ್ಟ್ ನಿಂದಾಗಿ ವೇಗ ದೊರೆತಿದೆ. ದೇಶ ತೊರೆಯಲು ಪ್ರಯತ್ನಿಸುತ್ತಿರುವ ಸಾವಿರಾರು ಮಂದಿ ಆಫ್ಘನ್ನರನ್ನು ಗುರಿಯಾಗಿಸಿ ಎರಡು ಸ್ಫೋಟಗಳನ್ನು ನಡೆಸಲಾಗಿತ್ತು. 

ಘಟನೆಯಲ್ಲಿ ಕನಿಷ್ಟ 60 ಮಂದಿ ಆಫ್ಘನ್ನರು ಮೃತಪಟ್ಟಿದ್ದಾರೆಂದು ತಿಳಿದುಬಂದಿತ್ತು. ಸ್ಥಳಾಂತರ ಕಾರ್ಯಾಚರಣೆಗೆ ಆಗಸ್ಟ್ 31 ಕೊನೆಯ ದಿನಾಂಕ ಎಂದು ತಾಲಿಬಾನ್ ಘೋಷಿಸಿತ್ತು. 

ಘಟನೆಗೆ ಐಸಿಸ್ ಕಾರಣ ಎಂದು ಅಮೆರಿಕ ದೂಷಿಸಿದ ಬೆನ್ನಲ್ಲೇ ಐಸಿಸ್ ಸಂಘಟನೆ ದಾಳಿ ಹೊಣೆಯನ್ನು ಹೊತ್ತುಕೊಂಡಿತ್ತು. ಅಫ್ಘಾನಿಸ್ತಾನ ವಿಮಾನ ನಿಲ್ದಾಣದಲ್ಲಿ ಮುಂದೆಯೂ ಉಗ್ರರು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವುದಾಗಿ ಅಮೆರಿಕಾಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. 

ಆ ನಿಟ್ಟಿನಲ್ಲಿ ಆಗಸ್ಟ್ 31 ರ ಒಳಗಾಗಿ ತನ್ನ ಎಲ್ಲಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ  ಯೋಜನೆಗೆ ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿಂದೆ ಸ್ಥಳಾಂತರ ಕಾರ್ಯಾಚರಣೆ ಗಡುವನ್ನು ಆಗಸ್ಟ್ 31 ರ ನಂತರವೂ ವಿಸ್ತರಿಸುವಂತೆ ಒತ್ತಡ ಹೇರಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com