ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಮೆರಿಕ, ನ್ಯಾಟೋಗೆ ಎಷ್ಟು ಅಪಾಯಕಾರಿ?

ಇಸಿಸ್ ಉಗ್ರ ಸಂಘಟನೆ ಇದೀಗ ಜಗತ್ತಿನ ಅತ್ಯಂತ ಪ್ರಬಲ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, ಉಗ್ರ ಸಂಘಟನೆಯ ಈ ಬೆಳವಣಿಗೆ ಜಗತ್ತಿಗೇ... ಪ್ರಮುಖವಾಗಿ ಆಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್:  ಆರು ವರ್ಷಗಳ ಹಿಂದೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟಿಸಿ ಆಫ್ಘಾನಿಸ್ತಾನದಲ್ಲಿ ಸುದ್ದಿಗೆ ಬಂದಿದ್ದ ಇಸಿಸ್ ಉಗ್ರ ಸಂಘಟನೆ ಇದೀಗ ಜಗತ್ತಿನ ಅತ್ಯಂತ ಪ್ರಬಲ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, ಉಗ್ರ ಸಂಘಟನೆಯ ಈ ಬೆಳವಣಿಗೆ ಜಗತ್ತಿಗೇ... ಪ್ರಮುಖವಾಗಿ ಆಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಆಫ್ಘಾನಿಸ್ತಾನದಲ್ಲಿ ದಶಕಗಳ ಕಾಲ ಮಿಲಿಟರಿ ಕಾರ್ಯಾಚರಣೆ ಹೊರತಾಗಿಯೂ ಅಮೆರಿಕ ಆಫ್ಘಾನಿಸ್ತಾನದಲ್ಲಿ ಉಗ್ರ ಬೆದರಿಕೆಗಳನ್ನು ತೊಡೆದುಹಾಕುವಲ್ಲಿ ಸಾಧ್ಯವಾಗಿಲ್ಲ. ಅಲ್ಲದೆ ತನ್ನ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ಮಾಡಿ ಆಡಳಿತಕ್ಕೇರಲು ಸಜ್ಜಾಗಿದೆ. ಅಂತೆಯೇ ಉಗ್ರ ಚಟುವಟಿಕೆಗಳು ಮತ್ತೆ ಭಾರಿ ಪ್ರಮಾಣದಲ್ಲಿ ಗರಿಗೆದರಿವೆ. ಇದಕ್ಕೆ ಇಂಬು ನೀಡುವಂತೆ ಬಾಂಬ್ ದಾಳಿಯ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಸ್ಟ್ 31ರೊಳಗೆ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ತಮ್ಮ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. 

ದಾಳಿ ಕುರಿತು ಮಾತನಾಡಿದ ಅಮೆರಿಕ ಜನರಲ್ ಫ್ರಾಂಕ್ ಮೆಕೆಂಜಿ ಅವರು, ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಪಾತ್ರವಿದೆ ಎಂದು ಬಲವಾಗಿ ಒತ್ತಿ ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇನಾದಾಳಿಗಳಲ್ಲಿ ಅತೀಹೆಚ್ಚು ನಷ್ಟ ಅನುಭವಿಸಿದರೂ ಮಾರಕ ದಾಳಿಗಳ ದಾಖಲೆಯನ್ನು ಹೊಂದಿದೆ. ಈ ದಾಳಿ ಮೂಲಕ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಏರ್ ಲಿಫ್ಟ್ ಕಾರ್ಯಾಚರಣೆ ಮತ್ತು ಅಮೆರಿಕ ಕಾರ್ಯಾಚರಣೆಗಳಿಗೆ ಅಡ್ಡಿ ಮಾಡುವುದು ಅದರ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. 

ಏನಿದು ಇಸ್ಲಾಮಿಕ್ ಸ್ಟೇಟ್ ಖೋರಸನ್?
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮಧ್ಯ ಏಷ್ಯಾ ಅಂಗಸಂಸ್ಥೆಯು 2014 ರ ಬೇಸಿಗೆ ಸಂದರ್ಭದಲ್ಲಿ ಗುಂಪಿನ ಪ್ರಮುಖ ಹೋರಾಟಗಾರರು ಸಿರಿಯಾ ಮತ್ತು ಇರಾಕ್ ಅನ್ನು ಸುತ್ತುವರಿದ ನಂತರ, ಸ್ವಯಂ-ಶೈಲಿ ಕ್ಯಾಲಿಫೇಟ್ ಅಥವಾ ಇಸ್ಲಾಮಿಕ್ ಸಾಮ್ರಾಜ್ಯ ರೂಪಿಸಿದ ನಂತರ ಈ  ಇಸ್ಲಾಮಿಕ್ ಸ್ಟೇಟ್ ಖೋರಸನ್ ಹುಟ್ಟಿಕೊಂಡಿತು.

ಸಿರಿಯಾ ಮತ್ತು ಇರಾಕ್‌ನಲ್ಲಿ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪಡೆಗಳು ಕ್ಯಾಲಿಫೇಟ್ ವಿನಾಶಕ್ಕೆ ಐದು ವರ್ಷಗಳ ಹೋರಾಟವನ್ನು ತೆಗೆದುಕೊಂಡವು.  ಅಫ್ಘಾನಿಸ್ತಾನದ ಇಸಿಸ್ ಅಂಗಸಂಸ್ಥೆಯು ಖೋರಾಸನ್ ಪ್ರಾಂತ್ಯದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ, ಇದು ಮಧ್ಯಪ್ರಾಚ್ಯದಲ್ಲಿ ಅಫ್ಘಾನಿಸ್ತಾನ, ಇರಾನ್ ಮತ್ತು ಮಧ್ಯ ಏಷ್ಯಾದ ಬಹುಭಾಗವನ್ನು ಆವರಿಸಿದೆ. ಈ ಗುಂಪನ್ನು ISK ಅಥವಾ ISIS K ಎಂದೂ ಕರೆಯುತ್ತಾರೆ.

ಇಸ್ಲಾಮಿಕ್ ರಾಜ್ಯ ಖೋರಸನ್ ಹೋರಾಟಗಾರರು ಯಾರು?
ಅಮೆರಿಕ ಮತ್ತು ನ್ಯಾಟೋ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಮೂಲಭೂತವಾದಿಗಳನ್ನು ತಮ್ಮ ತಾಯ್ನಾಡಿನಿಂದ ಓಡಿಸಿದ ನಂತರ ಅಫ್ಘಾನಿಸ್ತಾನದ ಗಡಿಯುದ್ದಕ್ಕೂ ಆಶ್ರಯ ಪಡೆದ ಅವರು, ಪಾಕಿಸ್ತಾನಿ ತಾಲಿಬಾನ್ ಹೋರಾಟಗಾರರಂತೆ ಗುಂಪು ಆರಂಭಿಸಿಕೊಡರು. ಇದೇ ಗುಂಪಿಗೆ ಇತರೆ ಸಮಾನ ಮನಸ್ಕ ಉಗ್ರರು ಸೇರಿಕೊಂಡರು.   ಈ ಉಗ್ರರು ತಾಲಿಬಾನ್ ನ ಅತಿಯಾದ ಮಧ್ಯಮ ಮತ್ತು ಶಾಂತಿಯುತ ಮಾರ್ಗಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ತಾಲಿಬಾನ್ ಅಮೆರಿಕದೊಂದಿಗೆ ಶಾಂತಿ ಮಾತುಕತೆಯನ್ನು ಮುಂದುವರಿಸುತ್ತಿದ್ದಂತೆ, ಅತೃಪ್ತ ತಾಲಿಬಾನ್ ಉಗ್ರರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯತ್ತ ವಾಲಲು ಆರಂಭಿಸಿದರು. ಕ್ರಮೇಣ ಈ ರೀತಿಯ ಬಂಡುಕೋರರ ಸಂಖ್ಯೆ ಹೆಚ್ಚಾಯಿತು. ಪ್ರಾಂತ್ಯದಲ್ಲಿ ತಾಲಿಬಾನಿಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ ಎನ್ನುವ ಹೊತ್ತಿನಲ್ಲಿ ತಾಲಿಬಾನ್ ಅಮೆರಿಕ ಜೊತೆ ಮಾತುಕತೆ ನಡೆಸುತ್ತಿರುವುದಕ್ಕೆ ಅಸಮಾಧಾನ ಮತ್ತು ನಿರಾಶೆಗೊಂಡರು. 

ಇದೇ ನೆರೆಯ ದೇಶ ಉಜ್ಬೇಕಿಸ್ತಾನ್ ನ ಇಸ್ಲಾಮಿಕ್ ಚಳುವಳಿಯಿಂದ ಗಮನಾರ್ಹವಾದ ಸಿಬ್ಬಂದಿಗಳನ್ನು ಆಕರ್ಷಿಸಿತು. ಇರಾನ್‌ನ ಏಕೈಕ ಸುನ್ನಿ ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯದ ಹೋರಾಟಗಾರರು,  ತುರ್ಕಿಸ್ತಾನ ಇಸ್ಲಾಮಿಕ್ ಪಕ್ಷದ ಸದಸ್ಯರು ಚೀನಾದ ಈಶಾನ್ಯದಿಂದ ಉಯಿಘರ್‌ ಮುಸ್ಲಿಮರೂ ಕೂಡ  ISIS K ಸಂಘಟನೆಯತ್ತ ಆಕರ್ಷಿತರಾಗಿ ಸಂಘಟನೆ ಸೇರಿಕೊಂಡರು. ಇವರಲ್ಲಿ ಬಹುತೇಕರು ಇಸ್ಲಾಮಿಕ್ ಸ್ಟೇಟ್‌ನ ಹಿಂಸಾತ್ಮಕ ಮತ್ತು ತೀವ್ರವಾದ ಸಿದ್ಧಾಂತದತ್ತ ಆಕರ್ಷಿತರಾಗಿದ್ದರು. ಇದರಲ್ಲಿ ಇಸ್ಲಾಮಿಕ್ ಜಗತ್ತನ್ನು ಒಂದುಗೂಡಿಸುವ ಕ್ಯಾಲಿಫೇಟ್‌ನ ಭರವಸೆಗಳನ್ನು ತಾಲಿಬಾನ್‌ಗಳು ಎಂದಿಗೂ ಸಾಧಿಸದ ಗುರಿಯಾಗಿದೆ ಎಂದು ಹಲವರು ನಂಬಿದ್ದರು. 

ಪ್ರಾಣಾಪಾಯವನ್ನೂ ಲೆಕ್ಕಿಸದೇ ಹೋರಾಟ
ತಾಲಿಬಾನ್‌ಗಳು ತಮ್ಮ ಹೋರಾಟವನ್ನು ಅಫ್ಘಾನಿಸ್ತಾನಕ್ಕೆ ಸೀಮಿತಗೊಳಿಸಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪು ಮುಸ್ಲಿಮೇತರರ ವಿರುದ್ಧ ವಿಶ್ವಾದ್ಯಂತ ಜಿಹಾದ್ ಮಾಡಬೇಕೆಂಬ ಇಸ್ಲಾಮಿಕ್ ಸ್ಟೇಟ್‌ನ ಕರೆಯನ್ನು ಸ್ವೀಕರಿಸಿದ್ದವು. ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ನಾಗರಿಕರ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು ಆರಂಭಿಸಿದ ಹತ್ತಾರು ದಾಳಿಗಳಲ್ಲಿಯೂ ಪಾಲ್ಗೊಂಡರು.  ಜನವರಿ 2017 ರಿಂದ ಅಫ್ಘಾನ್, ಪಾಕಿಸ್ತಾನ ಮತ್ತು ಅಮೆರಿಕ ನೇತೃತ್ವದ ಒಕ್ಕೂಟದ ಪಡೆಗಳೊಂದಿಗೆ ನೂರಾರು ಘರ್ಷಣೆಗಳಲ್ಲಿ ಇವರು ಪಾಲ್ಗೊಂಡರು. ಈ ಘರ್ಷಣೆಗಳಲ್ಲಿ ಅಲ್ಪಸಂಖ್ಯಾತ ಶಿಯಾ ಮುಸ್ಲಿಮರು ಸೇರಿದಂತೆ ಹಲವರು ದಾಳಿಗೊಳಗಾದರು.

ಅಮೆರಿಕ ನೆಲದಲ್ಲಿ ಉಗ್ರದಾಳಿ ನಡೆಸಲು ಈ ಸಂಘಟನೆ ಯೋಜಿಸುತ್ತಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಈ ಸಂಘಟನೆಗಳಿಂದ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ತೀವ್ರ ಬೆದರಿಕೆ ಇದೆ. ಮಿತ್ರರಾಷ್ಟ್ರಗಳ ಹಿತಾಸಕ್ತಿಗೆ ಇವು ತೀವ್ರ ಬೆದರಿಕೆಯನ್ನೊಡ್ಡಿವೆ ಎಂದು ಕಿಡಿಕಾರಿದೆ. 

ತಾಲಿಬಾನ್‌ನೊಂದಿಗಿನ ಅವರ ಪಾತ್ರ?
ಅಲ್-ಕೈದಾ ಹೋರಾಟಗಾರರು ತಾಲಿಬಾನ್ ನೊಂದಿಗೆ ಸಂಯೋಜಿತರಾಗಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ನಂಬಿದ್ದರೂ, ತಾಲಿಬಾನ್, ಇದಕ್ಕೆ ವಿರುದ್ಧವಾಗಿ, ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಪ್ರಮುಖ, ಸಂಘಟಿತ ದಾಳಿಗಳನ್ನು ನಡೆಸಿದೆ. ಅಫ್ಘಾನಿಸ್ತಾನದ ಈಶಾನ್ಯ ಭಾಗಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಹೊಡೆದುರುಳಿಸಲು ತಾಲಿಬಾನ್ ದಂಗೆಕೋರರು ಕೆಲವೊಮ್ಮೆ ಅಮೆರಿಕ ಮತ್ತು ಅದರ ಬೆಂಬಲಿತ ಅಫ್ಘಾನ್ ಸರ್ಕಾರಿ ಪಡೆಗಳೊಂದಿಗೆ ಸೇರಿಕೊಂಡಿದ್ದರು. ಅಮೆರಿಕ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ಈ ಬಗ್ಗೆ ಮಾತನಾಡಿದ್ದು, 'ಅವರು ರಹಸ್ಯವಾಗಿ ಅಮೆರಿಕ ಪರ ಕೆಲಸ ಮಾಡುತ್ತಿದ್ದರು, ಅಮೆರಿಕ ಆಡಳಿತ ಕೂಡ ತಾಲಿಬಾನ್ ಬದಲಿಗೆ ಇಸ್ಲಾಮಿಕ್ ಸ್ಟೇಟ್ ಅನ್ನು ನಿಜವಾದ ಬೆದರಿಕೆಯಾಗಿ ನೋಡುತ್ತಿದೆ. ಈ ಹಿಂದೆ ಟ್ರಂಪ್ ಆಡಳಿತವು 2020ರಲ್ಲಿ ಸೇನಾ ವಾಪಸಾತಿ ನಿರ್ಧಾರ ಕೈಗೊಂಡಾಗ ತಾಲಿಬಾನ್ ನಲ್ಲಿ ಮತ್ತೆ ಆಡಳಿತದ ಚಿಗುರೊಡೆದಿತ್ತು. ಇದೇ ಕಾರಣಕ್ಕೆ ತಾಲಿಬಾನ್ ಅಮೆರಿಕದೊಂದಿಗೆ  ಕೈಜೋಡಿಸಿರುವ ಸಾಧ್ಯತೆ ಕೂಡ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಈಗಿರುವ ಅಪಾಯವೇನು?
ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ತನ್ನ ಸೇನಾಪಡೆಯನ್ನು, ಸೇನಾ ಟ್ಯಾಂಕರ್ ಗಳು, ಡ್ರೋನ್ ಗಳು, ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದಾಗ ಮತ್ತು ಸೇನಾಪಡೆಗಳೊಂದಿಗಿನ ಸಂಘರ್ಷದಲ್ಲಿ ಅಪಾರ ಪ್ರಮಾಣದ ಸಾವುನೋವು ಎದುರಿದ್ದ ಸಂದರ್ಭದಲ್ಲೇ ಇಸ್ಲಾಮಿಕ್ ಸ್ಟೇಟ್ ಸಾಕಷ್ಟು ಉಗ್ರ ದಾಳಿಗಳನ್ನು ನಡೆಸುವಲ್ಲಿ ಯಶಸ್ವಿಯಾಗಿತ್ತು.  ಆದರೆ ಈಗ ಸ್ವತಃ ಅಮೆರಿಕ ಸೇನಾಪಡೆಗಳು ಆಫ್ಘಾನಿಸ್ತಾನ ದೇಶದಿಂದ ಹೊರಗೆ ಹೋಗುತ್ತಿವೆ. ಅಲ್ಲದೆ ಇಸ್ಲಾಮಿಕ್ ಸ್ಟೇಟ್ ನ ದಾಳಿ ಯೋಜನೆಗಳನ್ನು ಅರಿಯುವಲ್ಲಿ ಅಮೆರಿಕ ಗುಪ್ತಚರ ಇಲಾಖೆ ಕೂಡ ವಿಫಲವಾಗುತ್ತಿವೆ. 

ಆದರೆ ಈ ಬಗ್ಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, 'ಇಸ್ಲಾಮಿಕ್ ಸ್ಟೇಟ್ ಗುಂಪು ಜಗತ್ತು ಎದುರಿಸುತ್ತಿರುವ ಅನೇಕ ಭಯೋತ್ಪಾದನೆ ಬೆದರಿಕೆಗಳಲ್ಲಿ ಒಂದಾಗಿದೆ. ಗಲ್ಫ್ ರಾಜ್ಯಗಳಲ್ಲಿನ ವಿಮಾನವಾಹಕ ನೌಕೆಗಳು, ಗುಪ್ತಚರ ಮೂಲಗಳ ಮೂಲಕ ಅದನ್ನು ನಿರ್ವಹಣೆ ಮಾಡಬಲ್ಲೆವು ಎಂದು ಹೇಳಿದ್ದರು.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com