ಜೋ ಬೈಡೆನ್
ಜೋ ಬೈಡೆನ್

ನಿಮ್ಮನ್ನು ಬೇಟೆಯಾಡಿ ಬುದ್ಧಿ ಕಲಿಸುತ್ತೇವೆ: ಕಾಬೂಲ್ ವಿಮಾನ ನಿಲ್ದಾಣ ದಾಳಿಕೋರರಿಗೆ ಬೈಡನ್ ಎಚ್ಚರಿಕೆ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರನ್ನು ಮತ್ತು ಇತರರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಮೆರಿಕ...

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರನ್ನು ಮತ್ತು ಇತರರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರತಿಜ್ಞೆ ಮಾಡಿದ್ದಾರೆ.

ಇದೇ ವೇಳೆ ಅಮೆರಿಕ ಸೈನಿಕರನ್ನು ಹತ್ಯೆ ಮಾಡಿದವರನ್ನು ನಾವೆಂದೆಂದೂ ಕ್ಷಮಿಸುವುದಿಲ್ಲ ಎಂದಿರುವ ಬೈಡನ್ 13 ಅಮೆರಿಕ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವ ಭರವಸೆ ನೀಡಿದ್ದಾರೆ.

ಬಾಂಬ್ ದಾಳಿಯನ್ನು ಮರೆಯುವುದೂ ಇಲ್ಲ. ಸೈನಿಕರ ಹತ್ಯೆಗೆ ಪ್ರತೀಕಾರವಾಗಿ ನಿಮ್ಮನ್ನು ಬೇಟೆಯಾಡಿ ಬುದ್ಧಿ ಕಲಿಸುತ್ತೇವೆ ಎಂದು ಜೋ ಬೈಡನ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಬೂಲ್‌ನಲ್ಲಿ ನಿನ್ನೆ ನಡೆದ ಬಾಂಬ್ ಸ್ಫೋಟದಲ್ಲಿ ಅಮೆರಿಕಾದ ೧೩ ಸೈನಿಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೈಡನ್ ಹೇಳಿದ್ದಾರೆ.

ಈ ಭಯೋತ್ಪಾದಕ ಕೃತ್ಯಕ್ಕೆ ಅಮೆರಿಕಾ ಭಯಪಡುವುದಿಲ್ಲ. ಉಗ್ರರಿಗೆ ತಕ್ಕ ಶಾಸ್ತಿ ಮಾಡುವವರೆಗೂ ನಾವು ವಿರಮಿಸುವುದಿಲ್ಲ. ಆಫ್ಘಾನ್‌ನಲ್ಲಿ ನೆಲಸಿರುವ ಅಮೆರಿಕನ್ನರನ್ನು ತೆರವುಗೊಳಿಸಿ ಸುರಕ್ಷಿತವಾಗಿ ಕರೆ ತರಲಾಗುವುದು ಎಂದು ಬೈಡನ್ ಹೇಳಿದ್ದಾರೆ.

ಅಮೆರಿಕಾದ ಶ್ವೇತಭವನದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಅವರು ಹತ್ಯೆಯಾದ ಅಮೆರಿಕಾದ ಸೈನಿಕರು ನಿಜವಾದ ಹೀರೋಗಳು ಎಂದು ಶ್ಲಾಘಿಸಿ, ಕಾಬೂಲ್‌ನಲ್ಲಿ ಸಿಲುಕಿರುವ ಅಮೆರಿಕನ್ನರನ್ನು ಸ್ಥಳಾಂತರಿಸುವ ಕಾರ್ಯ ಆ. 31 ರವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com