ಕೂಡಲೇ ಕಾಬೂಲ್ ತೊರೆಯಿರಿ: ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

ಇಸಿಸ್ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಆಫ್ಘನ್ ರಾಜಧಾನಿ ಕಾಬೂಲ್ ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಅಮೆರಿಕ ಸರ್ಕಾರ ಎಚ್ಚರಿಕೆ ನೀಡಿದ್ದು, ಕೂಡಲೇ ಕಾಬೂಲ್ ತೊರೆಯುವಂತೆ ಹೇಳಿದೆ.
ಕಾಬುಲ್ ವಿಮಾನ ನಿಲ್ಗಾಣದ ಬಳಿ ಸ್ಫೋಟ
ಕಾಬುಲ್ ವಿಮಾನ ನಿಲ್ಗಾಣದ ಬಳಿ ಸ್ಫೋಟ

ಕಾಬೂಲ್: ಇಸಿಸ್ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಆಫ್ಘನ್ ರಾಜಧಾನಿ ಕಾಬೂಲ್ ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಅಮೆರಿಕ ಸರ್ಕಾರ ಎಚ್ಚರಿಕೆ ನೀಡಿದ್ದು, ಕೂಡಲೇ ಕಾಬೂಲ್ ತೊರೆಯುವಂತೆ ಹೇಳಿದೆ.

ಕಾಬೂಲ್ ವಿಮಾನ ನಿಲ್ದಾಣದ ಸ್ಫೋಟದ ನಂತರ, ಗುರುವಾರ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ಎಚ್ಚರಿಕೆ ನೀಡಿತು.  ಪ್ರಮುಖವಾಗಿ ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್, ಈಸ್ಟ್ ಗೇಟ್ ಅಥವಾ ನಾರ್ತ್ ಗೇಟ್ ನಲ್ಲಿರುವ ಅಮೆರಿಕ ನಾಗರಿಕರು ಈಗಲೇ ತುರ್ತಾಗಿ ಹೊರಡಬೇಕು ಎಂದು ಹೇಳಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಅಮೆರಿಕದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು 'ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಇಸಿಸ್ ಕೆಯಿಂದ ವಿಮಾನ ನಿಲ್ದಾಣದಲ್ಲಿ "ನಿರ್ದಿಷ್ಟ" ಮತ್ತು "ನಂಬಲರ್ಹ" ಸಂಭಾವ್ಯ ದಾಳಿ ಸಂಚನ್ನು ಟ್ರ್ಯಾಕ್ ಮಾಡಲಾಗಿದೆ. ಉಗ್ರರು ಕನಿಷ್ಠ 12ಕ್ಕೂ ಹೆಚ್ಚು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ದಾಳಿಗಳಿಗೆ ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಇತರೆ ದೇಶಗಳ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ದೇಶ ತೊರೆಯುವ ಕುರಿತು ಆಗಸ್ಟ್ 31 ರ ತಾಲಿಬಾನ್ ಗಡುವಿನ ಮೊದಲು ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯತ್ನಿಸುತ್ತಿರುವ ಅಂದಾಜು 1,500 ಅಮೆರಿಕನ್ನರು ಮತ್ತು ಇನ್ನೂ ಅಫ್ಘಾನಿಸ್ಥಾನದಲ್ಲಿರುವ ಇತರೆ ವಿದೇಶಿಗರು ವಿಮಾನ ನಿಲ್ದಾಣಕ್ಕೆ ದೌಡಾಯಿಸುತ್ತಿದ್ದು, ಇದೇ ಸಂದರ್ಭದಲ್ಲೇ ಈ ಎಚ್ಚರಿಕೆ ರವಾನೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.  ವಿಮಾನ ನಿಲ್ದಾಣದಲ್ಲಿ ಸಂಭವನೀಯ ಭದ್ರತಾ ಬೆದರಿಕೆಗಳ ಬಗ್ಗೆ ಅಮೆರಿಕ ಸರ್ಕಾರವು ಎಚ್ಚರಿಕೆ ನೀಡುತ್ತಿದೆ ಮತ್ತು ವಿಮಾನ ನಿಲ್ದಾಣಕ್ಕೆ ಪ್ರವೇಶವನ್ನು ಸರಿಹೊಂದಿಸಲಾಗಿದೆ, ಕೆಲವು ಗೇಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.

ಮೊದಲು, ಬ್ರಿಟಿಷ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಇದೇ ರೀತಿಯ ಎಚ್ಚರಿಕೆಗಳನ್ನು ನೀಡಿದ್ದವು, ಆಸ್ಟ್ರೇಲಿಯಾದ ಅಧಿಕಾರಿಗಳು "ಭಯೋತ್ಪಾದಕ ದಾಳಿಯ ಮುಂದುವರಿದ ಮತ್ತು ಅತಿ ಹೆಚ್ಚಿನ ಬೆದರಿಕೆಯ ಕುರತು ಎಚ್ಚರಿಕೆ ನೀಡಿದ್ದರು.  ಈ ಬಗ್ಗೆ ಮಾತನಾಡಿದ್ದ ಆಸ್ಟ್ರೇಲಿಯಾದ ವಿದೇಶಾಂಗ ಮಂತ್ರಿ ಮಾರಿಸ್ ಪೇಯ್ನ್, 'ತಾಲಿಬಾನ್ ಆಸ್ಟ್ರೇಲಿಯಾದ ನಾಗರಿಕರು ಮತ್ತು ವೀಸಾ ಹೊಂದಿರುವವರನ್ನು ಸುರಕ್ಷಿತವಾಗಿ ಬಿಡಲು ಅವಕಾಶ ನೀಡುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಉಗ್ರರು ಹಮೀದ್ ಕರ್ಜೈ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಬಾರದಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಅದು ಸುರಕ್ಷಿತ ಕೂಡ ಅಲ್ಲ. ಕಾಬೂಲ್ ನಲ್ಲಿದ್ದರೆ ಸುರಕ್ಷಿತ ಸ್ಥಳಗಳಿಗೆ ತೆರಳಿ ಆಶ್ರಯ ಪಡೆಯಿರಿ. ಮುಂದಿನ ಸಲಹೆಗಾಗಿ ಕಾಯಿರಿ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com