ಆಗಸದಲ್ಲಿಯೇ ಜನಿಸಿದ ಅಪ್ಘನ್ ಕಂದಮ್ಮ 'ಹವಾ'

ಅಫ್ಘಾನಿಸ್ತಾನದಿಂದ ಶುಕ್ರವಾರ  ನಿರಾಶ್ರಿತರನ್ನು ಹೊತ್ತು ಹೊರಟಿದ್ದ  ವಿಮಾನ ಶನಿವಾರ  ರಾತ್ರಿ ಬ್ರಿಟನ್‌ ನಲ್ಲಿ  ಕೆಳಗಿಳಿಯಿತು. ಆದರೆ ಪ್ರಯಾಣಿಕರ  ಪಟ್ಟಿಯಲ್ಲಿ  ಹೆಚ್ಚುವರಿಯಾಗಿ ಮತ್ತೊಬ್ಬರು ಸೇರಿಕೊಂಡಿದ್ದರು.
ಮಗುವಿನೊಂದಿಗೆ ವಿಮಾನದಲ್ಲಿದ್ದ ಸಿಬ್ಬಂದಿ
ಮಗುವಿನೊಂದಿಗೆ ವಿಮಾನದಲ್ಲಿದ್ದ ಸಿಬ್ಬಂದಿ

ಇಸ್ತಾಂಬುಲ್: ಅಫ್ಘಾನಿಸ್ತಾನದಿಂದ ಶುಕ್ರವಾರ  ನಿರಾಶ್ರಿತರನ್ನು ಹೊತ್ತು ಹೊರಟಿದ್ದ  ವಿಮಾನ ಶನಿವಾರ  ರಾತ್ರಿ ಬ್ರಿಟನ್‌ ನಲ್ಲಿ  ಕೆಳಗಿಳಿಯಿತು. ಆದರೆ ಪ್ರಯಾಣಿಕರ  ಪಟ್ಟಿಯಲ್ಲಿ  ಹೆಚ್ಚುವರಿಯಾಗಿ ಮತ್ತೊಬ್ಬರು ಸೇರಿಕೊಂಡಿದ್ದರು.

ಮಾರ್ಗಮಧ್ಯೆ  ವಿಮಾನದಲ್ಲಿಯೇ ಒಂದು ಮಗು ಜನಿಸಿತು.  26 ವರ್ಷದ ಸೋಮನ್ ನೂರಿ, ತನ್ನ ಮೂರನೇ  ಮಗುವನ್ನು 30,000 ಅಡಿ ಎತ್ತರದಲ್ಲಿ ಜನ್ಮ ನೀಡಿದ್ದಾಳೆ.  ಪತಿಯೊಂದಿಗೆ ವಿಮಾನ ಹತ್ತಿದ  ಸೋಮನ್ ನೂರಿ, ಟೇಕ್ ಆಫ್  ಆದ ಸ್ವಲ್ಪ ಸಮಯದ ನಂತರ ಹೆರಿಗೆ  ನೋವು  ಕಾಣಿಸಿಕೊಂಡಿತು.

ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದಿರಾ ?" ಎಂದು  ಸಿಬ್ಬಂದಿ ಕೂಗಿದರು. ಆದರೆ ಅಲ್ಲಿ ಯಾರೂ ಇಲ್ಲ ಎಂದು ತಿಳಿದುಬಂದ ನಂತರ ವಿಮಾನ ಸಿಬ್ಬಂದಿ ಆಕೆಗೆ ಹೆರಿಗೆ  ಮಾಡಿಸಿ ಸುರಕ್ಷಿತವಾಗಿ ಬ್ರಿಟನ್‌ಗೆ  ತಲುಪಿಸಿದರು. ಆಗಸದಲ್ಲಿ  ಜನಿಸಿದ ಹೆಣ್ಣು ಮಗುವಿಗೆ 'ಹವಾ' ಎಂದು ಹೆಸರಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com