ಪಾಕಿಸ್ತಾನದಲ್ಲಿ 8 ವರ್ಷ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ: ವಾಘಾ ಗಡಿ ಮೂಲಕ ಹಸ್ತಾಂತರ

ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಾಹೋರ್: ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

2013ರಲ್ಲಿ ಶರ್ಮಾ ರಜಪೂತ್ ಹಾಗೂ ರಾಮ್ ಬುಹದಾರ್ ಎಂಬುವವರು ಕಾಶ್ಮೀರದ ಮೂಲಕ ಪಾಕಿಸ್ತಾನ ಗಡಿ ದಾಟಿ ಹೋಗಿದ್ದಾರೆ. ಈ ವೇಳೆ ಪಾಕಿಸ್ತಾನದ ಪಡೆಗಳು ಇಬ್ಬರನ್ನೂ ಬಂಧನಕ್ಕೊಳಪಡಿಸಿದ್ದರು. ಈ ವೇಳೆ ಇಬ್ಬರೂ ಮಾನಸಿಕ ಅಸ್ವಸ್ಥರೆಂದು ತಿಳಿದುಬಂದಿತ್ತು. ವ್ಯಕ್ತಿಗಳ ಭಾವಚಿತ್ರ ಹಾಗೂ ಇತರೆ ಮಾಹಿತಿಗಳನ್ನು ಪಾಕಿಸ್ತಾನ ಹಂಚಿಕೊಂಡಿತ್ತು.

ಈ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇಬ್ಬರೂ ಭಾರತೀಯರೆಂಬುದು ಸಾಬೀತಾಗಿತ್ತು. ಇದರಂತೆ ಪಾಕಿಸ್ತಾನ ಇಬ್ಬರನ್ನೂ ಸೋಮವಾರ ಬಿಎಸ್ಎಫ್'ಗೆ ಹಸ್ತಾಂತರ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಕ್ರಮ ಗಡಿ ದಾಟಿದ ಹಿನ್ನೆಲೆಯಲ್ಲಿ ಈ ವರೆಗೂ ಪಾಕಿಸ್ತಾನದ ಪಡೆಹು 19 ಮಂದಿ ಭಾರತೀಯರನ್ನು ವಿವಿಧ ಭಾಗಗಳಲ್ಲಿ ಬಂಧನಕ್ಕೊಳಪಡಿಸಿದ್ದಾರೆ. ಎಲ್ಲರೂ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸಂಪೂರ್ಣ ತನಿಖಾ ವರದಿ ಬಳಿಕ ಪ್ರಕರಣ ಕುರಿತು ಫೆಡರಲ್ ರಿವ್ಯೂ ಬೋರ್ಡ್ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com