ಕಾಬೂಲ್ ನ ಅಮೆರಿಕ ರಾಯಭಾರ ಕಚೇರಿ ಕಾರ್ಯನಿರ್ವಹಣೆ ಸ್ಥಗಿತ

ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ.
ಕಾಬುಲ್ ವಿಮಾನ ನಿಲ್ದಾಣ
ಕಾಬುಲ್ ವಿಮಾನ ನಿಲ್ದಾಣ

ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ. ಆದರೆ ರಾಯಭಾರ ಕಚೇರಿಯು ದೋಹಾದಿಂದ ಅಮೆರಿಕದ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಹೇಳಿದೆ.

ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಮತ್ತು ಅವರ ಕುಟುಂಬಗಳಿಗೆ ದೋಹಾದಿಂದ ಸಹಾಯ ಮಾಡುವುದನ್ನು ಮುಂದುವರಿಸಲಾಗುವುದು. ಅಮೆರಿಕ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಗಳನ್ನು ದೋಹಾಕ್ಕೆ ವರ್ಗಾಯಿಸಿದೆ ಎಂದು ತಿಳಿಸಿದೆ.

"ರಾಯಭಾರ ಕಚೇರಿಯು ಸ್ಮಾರ್ಟ್ ಟ್ರಾವೆಲರ್ ದಾಖಲಾತಿ ಕಾರ್ಯಕ್ರಮ STEP, ರಾಯಭಾರ ವೆಬ್ ಪುಟ, Travel.State.Gov ಮತ್ತು Facebook ಮತ್ತು Twitter ಮೂಲಕ ಮಾಹಿತಿ ನೀಡುವುದನ್ನು ಮುಂದುವರಿಸುತ್ತದೆ. ಅಫ್ಘಾನಿಸ್ತಾನದ ಹೊರಗೆ ಕಾನ್ಸುಲರ್ ಸೇವೆಗಳು ಲಭ್ಯವಿವೆ ಎಂದು ಹೇಳಿದೆ.

ತಾಲಿಬಾನ್ ನಾಯಕರು ಮಂಗಳವಾರ ಕಾಬೂಲ್ ವಿಮಾನ ನಿಲ್ದಾಣದ ನಿಯಂತ್ರಣವನ್ನು ವಹಿಸಿಕೊಂಡಿದ್ದು, ವಿಮಾನ ನಿಲ್ದಾಣದ ಏಕೈಕ ರನ್ ವೇ ಮೂಲಕ ಸಾಂಕೇತಿಕ ವಾಕ್ ಮೂಲಕ ದೇಶದಿಂದ ಕೊನೆಯ ಅಮೆರಿಕ ವಿಮಾನ ನಿರ್ಗಮಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com