ಅಮೆರಿಕಾ: ಬಾಲಕನಿಂದ ಗುಂಡಿನ ದಾಳಿ ಮೂವರು ಸಾವು, 8 ಮಂದಿಗೆ ಗಾಯ

ಬಾಲಕನೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಕಾರಣ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್ ಡೆಟ್ರಾಯಿಟ್‌ ಬಳಿಯ ಹೈಸ್ಕೂಲ್‌ನಲ್ಲಿ ಮಂಗಳವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್‌: ಬಾಲಕನೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಕಾರಣ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್ ಡೆಟ್ರಾಯಿಟ್‌ ಬಳಿಯ ಹೈಸ್ಕೂಲ್‌ನಲ್ಲಿ ಮಂಗಳವಾರ ನಡೆದಿದೆ.

15 ವರ್ಷದ ಬಾಲಕ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ, ಶಿಕ್ಷಕ ಸೇರಿದಂತೆ 8 ಜನರು ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳು ಅಸುನೀಗಿದ್ದಾರೆ ಎಂದು ಓಕ್ಲ್ಯಾಂಡ್ ಕೌಂಟಿ ಅಂಡರ್‌ಶೆರಿಫ್ ಮೈಕೆಲ್ ಮೆಕ್‌ಕೇಬ್ ಹೇಳಿದ್ದಾರೆ.

ಮಧ್ಯಾಹ್ನ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕ, 14 ಹಾಗೂ 17 ವರ್ಷದ ಬಾಲಕಿಯರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 8 ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

ಶಂಕಿತನನ್ನು ಪ್ರತಿರೋಧವಿಲ್ಲದೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ ಎಂದು ಮೆಕ್‌ಕೇಬ್ ತಿಳಿಸಿದ್ದಾರೆ.

ಈ ಭಯಾನಕ ಘಟನೆಯ ನಂತರ ಶಾಲೆಗೆ ಬೀಗ ಹಾಕಲಾಗಿದೆ. ಅಧಿಕಾರಿಗಳು ಗುಂಡಿನ ದಾಳಿ ನಡೆದ ಬಾಲಕನಿಗಾಗಿ ಶೋಧ ಪ್ರಾರಂಭಿಸಿದಾಗ, ಉಳಿದ ವಿದ್ಯಾರ್ಥಿಗಳನ್ನು ಕೊಠಡಿ ಒಳಗೆ ಕೂಡಿ ಬೀಗ ಹಾಕಿ ರಕ್ಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com