ಇನ್ ಸ್ಟಾಗ್ರಾಂನಿಂದ ಹೊಸ ಸವಲತ್ತು: ತುಂಬಾ ಸಮಯ ಸ್ಕ್ರಾಲ್ ಮಾಡಿದರೆ 'ಟೇಕ್ ಎ ಬ್ರೇಕ್' ಎಚ್ಚರಿಕೆ ಸಂದೇಶ

ಸದ್ಯ ಈ ಸವಲತ್ತನ್ನು ಅಮೆರಿಕ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಲಾಂಚ್ ಮಾಡಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯ: ಛಾಯಾಚಿತ್ರ ಶೇರ್ ಮಾಡುವ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಇಂದು ಹೊಸದೊಂದು ಸವಲತ್ತನ್ನು ಲಾಂಚ್ ಮಾಡಿದೆ. 

ತುಂಬಾ ಹೊತ್ತು ಇನ್ ಸ್ಟಾಗ್ರಾಂ ಸ್ಕ್ರಾಲ್ ಮಾಡುತ್ತಾ ಕಾಲಹರಣ ಮಾಡುವ ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಈ ಸವಲತ್ತನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ತುಂಬಾ ಹೊತ್ತು ಇನ್ ಸ್ಟಾಗ್ರಾಂನಲ್ಲಿ ಸ್ಕ್ರಾಲ್ ಮಾಡಿದರೆ ತಾನಾಗಿಯೇ 'ಟೇಕ್ ಎ ಬ್ರೇಕ್' ಎನ್ನುವ ಸಂದೇಶ ಪರದೆ ಮೇಲೆ ಮೂಡುತ್ತದೆ. 

ಸದ್ಯ ಈ ಸವಲತ್ತನ್ನು ಅಮೆರಿಕ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಈ ಸವಲತ್ತನ್ನು ಲಾಂಚ್ ಮಾಡಲಾಗಿದೆ. ಮಿಕ್ಕೆಡೆ ಮುಂದಿನ ವರ್ಷ ಲಾಂಚ್ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com