16 ವರ್ಷಗಳ ಅಂಜೆಲಾ ಮರ್ಕೆಲ್ ಆಡಳಿತ ಯುಗ ಅಂತ್ಯ: ಜರ್ಮನಿಗೆ ನೂತನ ಚಾನ್ಸೆಲರ್

ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.
ಆಂಜೆಲಾ ಮರ್ಕೆಲ್
ಆಂಜೆಲಾ ಮರ್ಕೆಲ್

ಬರ್ಲಿನ್: ಜರ್ಮನಿಯ ಮೊದಲ ಮಹಿಳಾ ಚಾನ್ಸೆಲರ್ ಎನ್ನುವ ಹೆಸರಿಗೆ ಪಾತ್ರರಾಗಿದ್ದ ಆಂಜೆಲಾ ಮರ್ಕೆಲ್ ಆಡಳಿತ ಅವಧಿ ಇಂದು ಮುಕ್ತಾಯಗೊಂಡಿದೆ. ಅವರು 2005ರಲ್ಲಿ ಸರ್ಕಾರದ ಮುಖ್ಯಸ್ಥ ಹುದ್ದೆಯಾದ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ಜರ್ಮನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ angela merkel ನೆರವಾಗಿದ್ದರು. 67 ವರ್ಷದ ಮರ್ಕೆಲ್ ಅವರು ನಿರ್ವಹಿಸಿದ ಕಾರ್ಯಕ್ಕೆ ಅವರಿಗೆ ಅಂತಾರಾಷ್ಟ್ರೀಯ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. 

ಕಳೆದ 16 ವರ್ಷಗಳಲ್ಲಿ ಮರ್ಕೆಲ್ ಅವರು 4 ಅಮೆರಿಕನ್ ಅಧ್ಯಕ್ಷರು, 4 ಫ್ರೆಂಚ್ ಅಧ್ಯಕ್ಷರು ಹಾಗೂ 5 ಬ್ರಿಟಿಷ್ ಪ್ರಧಾನಮಂತ್ರಿಗಳೊಡನೆ ಕಾರ್ಯ ನಿರ್ವಹಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com