ಬಾಂಗ್ಲಾದೇಶ: ನದಿಯಲ್ಲಿ ದೋಣಿ ಬೆಂಕಿಗಾಹುತಿ; 36 ಮಂದಿ ಸಾವು

ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಬೆಂಕಿಗಾಹುತಿಯಾಗಿದ್ದು ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಢಾಕಾ: ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಬೆಂಕಿಗಾಹುತಿಯಾಗಿದ್ದು ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮೂರು ಅಂತಸ್ತಿನ ಬೋಟ್​​ಗೆ ನದಿಯ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಾವು 36 ಮೃತದೇಹಗಳನ್ನು ಹೊರತೆಗೆದಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನವರು ಬೆಂಕಿಯಿಂದ ಸಾವನ್ನಪ್ಪಿದರು ಮತ್ತು ಕೆಲವರು ನದಿಗೆ ಹಾರಿದ ನಂತರ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ  ತಿಳಿಸಿದರು.

ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ದಕ್ಷಿಣದ ಗ್ರಾಮೀಣ ಪಟ್ಟಣವಾದ ಜಕಾಕತಿ ಬಳಿ ಈ ಘಟನೆ ಮುಂಜಾನೆ ಸಂಭವಿಸಿದೆ. ಈ ಅಪಘಾತವು ನದಿಗಳಿಂದ ದಾಟಿದ ತಗ್ಗು ಪ್ರದೇಶದ ಡೆಲ್ಟಾ ದೇಶದಲ್ಲಿ ಇದೇ ರೀತಿಯ ಘಟನೆಗಳ ಸರಣಿಯಲ್ಲಿ ಇತ್ತೀಚಿನದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com