ಭಾರತದ ರಾಫೆಲ್ ಗೆ ಪ್ರತಿಸ್ಪರ್ಧಿಯಾಗಿ ಚೀನಾ ಜೆ-10 ಸಿ ಜೆಟ್ ಖರೀದಿಸಿದ ಪಾಕಿಸ್ತಾನ!

ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ  ಪರಮಾಪ್ತ ಗೆಳೆಯ ಚೀನಾದಿಂದ ಜೆ-10 ಜೆಟ್ ನ್ನು ಖರೀದಿಸಿದೆ. 
ಚೀನಾದ ಜೆ-10 ಸಿ ಫೈಟರ್ ಜೆಟ್
ಚೀನಾದ ಜೆ-10 ಸಿ ಫೈಟರ್ ಜೆಟ್

ಇಸ್ಲಾಮಾಬಾದ್: ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ ಪರಮಾಪ್ತ ಗೆಳೆಯ ಚೀನಾದಿಂದ 25 ಜೆ-10 ಜೆಟ್ ಖರೀದಿಸಿದೆ. 

ಈ ಮಾಹಿತಿಯನ್ನು ಪಾಕ್ ನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಬಹಿರಂಗಪಡಿಸಿದ್ದು, ಎಲ್ಲಾ ಋತುಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಜೆ-10 ಸಿ ಜೆಟ್ ಗಳ ಒಂದು ಪೂರ್ಣ ಸ್ಕ್ವಾಡ್ರನ್ ನ್ನು ಪಾಕಿಸ್ತಾನ ಚೀನಾದಿಂದ ಖರೀದಿಸಿದೆ, ಇದು 2022 ರ ಮಾ.23 ರಂದು ನಡೆಯಲಿರುವ ಪಾಕಿಸ್ತಾನ ದಿನಾಚರಣೆಯಲ್ಲಿ ಭಾಗಿಯಾಗಲಿವೆ ಎಂದು ತಿಳಿಸಿದ್ದಾರೆ. 

ಚೀನಾ ತನ್ನ ಪರಮಾಪ್ತ ಮಿತ್ರನ ರಕ್ಷಣೆಗಾಗಿ 25 ಜೆ-10 ಸಿ ಜೆಟ್ ಗಳನ್ನು ನೀಡಿದ್ದು, ಇವು ಚೀನಾದ ಅತ್ಯಾಧುನಿಕ ಜೆಟ್ ಗಳಾಗಿವೆ. 

ವಿಐಪಿ ಗಣ್ಯರು ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಆಗಮಿಸುತ್ತಿದ್ದಾರೆ. ಪಾಕಿಸ್ತಾನ ವಾಯುಪಡೆಯಿಂದ ಜೆ-10 ಸಿ ಪ್ರದರ್ಶನ ನಡೆಯಲಿದ್ದು ರಾಫೆಲ್ ಜೆಟ್ ಗಳಿಗೆ ಪ್ರತಿಸ್ಪರ್ಧಿಯಾಗಿ ಇವುಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ರಶೀದ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com