ಮ್ಯಾನ್ಮಾರ್ ನಿಂದ ಈಜಿಪ್ಟ್ ವರೆಗೆ... ಈ ದಶಕದಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಸೇನಾ ದಂಗೆಗಳು!

ಹಠಾತ್ ಬೆಳವಣಿಗೆಯಲ್ಲಿ ಮ್ಯಾನ್ಮಾರ್ ನ ಸರ್ಕಾರದ ವಿರುದ್ಧ ಅಲ್ಲಿನ ಸೇನೆ ದಂಗೆ ಎದ್ದಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಇತ್ತೀಚಿನ ಘಟನೆ. 

Published: 02nd February 2021 03:13 PM  |   Last Updated: 02nd February 2021 04:08 PM   |  A+A-


Myanmarese residents living in Japan holding portraits of Myanmar's de facto government leader Aung San Suu Kyi stage a protest rally in front of the United Nations University in Tokyo. (Photo | AP)

ಮ್ಯಾನ್ಮಾರ್ ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರ ಭಾವಚಿತ್ರವನ್ನು ಹಿಡಿದು ಟೋಕಿಯೋದ ಯುನೈಟೆಡ್ ನೇಷನ್ಸ್ ವಿವಿ ಎದುರು ಪ್ರತಿಭಟನೆ

The New Indian Express

ಹಠಾತ್ ಬೆಳವಣಿಗೆಯಲ್ಲಿ ಮ್ಯಾನ್ಮಾರ್ ನ ಸರ್ಕಾರದ ವಿರುದ್ಧ ಅಲ್ಲಿನ ಸೇನೆ ದಂಗೆ ಎದ್ದಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಇತ್ತೀಚಿನ ಘಟನೆ. 

ಇದೇ ಮಾದರಿಯಲ್ಲಿ ಈ ಹಿಂದೆಯೂ ಬೇರೆ ಬೇರೆ ದೇಶಗಳಲ್ಲಿ ಹಲವು ಸೇನಾ ದಂಗೆಗಳು ನಡೆದಿವೆ. ಕಳೆದ 10 ವರ್ಷಗಳಲ್ಲಿ ನಡೆದಿರುವ ಸೇನಾ ದಂಗೆಗಳ ಬಗ್ಗೆ ಮಾಹಿತಿ ಹೀಗಿದೆ. 

  1. ಮಾಲಿ: ಮಾಲಿಯ ಸೇನಾ ದಂಗೆ ಮ್ಯಾನ್ಮಾರ್ ಸೇನಾ ದಂಗೆಗೂ ಮೊದಲ, ಇತ್ತೀಚಿನದ್ದು. ಪಶ್ಚಿಮ ಆಫ್ರಿಕಾದ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಹಾಗೂ ಹಲವಾರು ತಿಂಗಳುಗಳ ಕಾಲ ಜನರು ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರ ಪರಿಣಾಮ ಕಳೆದ ಆಗಸ್ಟ್ ತಿಂಗಳಲ್ಲಿ ಅಲ್ಲಿನ ಅಧ್ಯಕ್ಷ ಇಬ್ರಾಹಿಮ್ ಬೌಬಾಕರ್ ಅವರನ್ನು ಪದಚ್ಯುತಗೊಳಿಸಲು ಸೇನಾ ದಂಗೆ ನಡೆದು ಸೇನೆ ಆಡಳಿತ ವಹಿಸಿಕೊಂಡಿತ್ತು. ಈ ರೀತಿಯ ಸೇನ ಕ್ಷಿಪ್ರಕ್ರಾಂತಿ ಅಂತಾರಾಷ್ಟ್ರೀಯ ಸಮುದಾಯ ಖಂಡಿಸಿತ್ತು. ಆದರೆ ಮಾಜಿ ವಾಯುಪಡೆ ಅಧಿಕಾರಿ ಹಾಗೂ ರಾಜಕೀಯ ನಾಯಕ ಬಹ್ ಎನ್ಡಾವ್ ತಾತ್ಕಾಲಿಕ ಸರ್ಕಾರ ರಚನೆ ಮಾಡಿ 18 ತಿಂಗಳ ನಂತರ ಅಧಿಕಾರ ಹಸ್ತಾಂತರಿಸುವುದಾಗಿ ಭರವಸೆ ನೀಡಿದ ಬಳಿಕ ಅ.05 ರಂದು ನಿರ್ಬಂಧಗಳನ್ನು ತೆರವುಗೊಳಿಸಲಾಯಿತು. ಆಗಸ್ಟ್ 18 ರಲ್ಲಿ ನಡೆದ ಸೇನಾ ದಂಗೆ ಮಾಲಿಯಲ್ಲಿ 8 ವರ್ಷಗಳ ಅವಧಿಯಲ್ಲಿ ನಡೆದ 2 ನೇ ದಂಗೆಯಾಗಿತ್ತು. 2012 ರಲ್ಲಿ ಸೈನಿಕರು ಕ್ಯಾಪ್ಟನ್ ಅಮಾಡೌ ಸನೋಗೊ ನೇತೃತ್ವದಲ್ಲಿ ಅಂದಿನ ಅಧ್ಯಕ್ಷ ಅಮಾಡೌ ಟೌಮಾನಿ ಟೌರೆ ಅವರನ್ನು ಪದಚ್ಯುತಗೊಳಿಸಿ ಬಂಧಿಸಿಟ್ಟಿತ್ತು. 
  2. ಸುಡಾನ್: ಸತತ ನಾಲ್ಕು ತಿಂಗಳ ಕಾಲ ಬೀದಿ ಬೀದಿಗಳಲ್ಲಿ ನಡೆದ ದಂಗೆಗಳ ಪರಿಣಾಮ ಆಗಸ್ಟ್ 2019 ರಲ್ಲಿ ಸುಡಾನ್ ನ ಸರ್ವಾಧಿಕಾರಿ ಒಮರ್ ಅಲ್-ಬಶೀರ್ ನ 30 ವರ್ಷಗಳ ಅಧಿಕಾರ ಸೇನೆಯಿಂದ ಕೊನೆಗೊಂಡಿತ್ತು. ಬ್ರೆಡ್ ಟ್ರಿಪ್ಲಿಂಗ್ (ಬೆಲೆ)ಗೆ ಸಂಬಂಧಿಸಿದಂತೆ ಈ ದಂಗೆಗಳು ಉಂಟಾಗಿತ್ತು. 2019 ರ ಸೆಪ್ಟೆಂಬರ್ ನಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡಲಾಗಿತ್ತು.
  3. ಜಿಂಬಾಂಬ್ವೆ: ಅಮಾನುಷವಾಗಿ ದೇಶವನ್ನು 37 ವರ್ಷಗಳ ಕಾಲ ಮುನ್ನಡೆಸಿದ್ದ ರಾಬರ್ಟ್ ಮುಗಾಬೆ ಅವರ ಸರ್ವಾಧಿಕಾರಿ ಆಡಳಿತ ಕೊನೆಗೊಂಡಿದ್ದು 2017 ರಲ್ಲಿ, ಅವರದ್ದೇ ಸೇನಾ ಹಾಗೂ ಪಕ್ಷದ ಸದಸ್ಯರ ದಂಗೆಯ ಮೂಲಕ. ಈ ದಂಗೆಯ ಬಳಿಕ ಮಾಜಿ ಉಪಾಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಅವರನ್ನು ದೇಶದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಾದ ಒಂದು ವರ್ಷದ ಬಳಿಕ ಮ್ಮುಗಾಬೆ ಸಿಂಗಪೂರ್ ನಲ್ಲಿ ನಿಧನರಾದರು.
  4. ಬುರ್ಕಿನಾ ಫಾಸೊ: ಅಧ್ಯಕ್ಷರಾಗಿದ್ದ ಬ್ಲೇಸ್ ಕಾಂಪೋರ್ ನ ವಿರುದ್ಧ ದಂಗೆ ಉಂಟಾಗಿ ಪದಚ್ಯುತಗೊಂಡ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮತ್ತೊಂದು ದಂಗೆ ಉಂಟಾಗಿ ಹೊಸ ಅಧ್ಯಕ್ಷ ಸ್ಥಾನನಿಂದ ಮೈಕೆಲ್ ಕಾಫಂಡೋ ತಮ್ಮದೇ ಅಂಗರಕ್ಷಕರಿಂದ ಪದಚ್ಯುತಗೊಂಡು ಒಂದೇ ವಾರದಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದು ಇಂದಿಗೆ ಇತಿಹಾಸ ಇದು ನಡೆದಿದ್ದು 2015 ರಲ್ಲಿ. ಸೇನಾ ದಂಗೆಗೆ ಯತ್ನಿಸಿದ್ದ ನಾಯಕರಿಗೆ ಬೆಂಬಲ ಸಿಗದೇ ಆ ದಂಗೆ ವಿಫಲವಾಗಿತ್ತು. 
  5. ಥೈಲ್ಯಾಂಡ್: ಥೈಲ್ಯಾಂಡ್ ಎಂದಾಕ್ಷಣ ನಮಗೆ ನೆನಪಾಗುವುದು ಮೋಜು, ಮಸ್ತಿ, ರಜೆಯ ದಿನಗಳನ್ನು ಕಳೆಯುವುದಕ್ಕೆ ಉತ್ತಮವಾಗಿರುವ ಪ್ರದೇಶ ಎಂದು. ಆದರೆ 2014 ರಲ್ಲಿ ಚುನಾಯಿತ ಸರ್ಕಾರದ ವಿರುದ್ಧ ಪ್ರತಿಭಟನೆಗಳಾದ ಕೆಲವೇ ತಿಂಗಳುಗಳಲ್ಲಿ ಇಲ್ಲಿನ ಸೇನೆ, ಮಾಜಿ ಪ್ರಧಾನಿ ಥಾಕ್ಸಿನ್ ಶಿನವತ್ರ ಅವರ ಸಹೋದರಿ ಯಿಂಗ್ಲಕ್ ಶಿನವತ್ರ ಅವರನ್ನು ಪದಚ್ಯುತಗೊಳಿಸಿ ಅಧಿಕಾರ ಕಸಿದುಕೊಂಡಿತ್ತು. ಮಾಜಿ ಪ್ರಧಾನಿ ಥಾಕ್ಸಿನ್ ಶಿನವತ್ರ ಅವರೂ ಸಹ ಸೇನಾ ದಂಗೆಯಿಂದ 2006 ರಲ್ಲಿ ಅಧಿಕಾರ ಕಳೆದುಕೊಂಡವರೇ ಆಗಿದ್ದಾರೆ. 
  6. ಈಜಿಪ್ಟ್: ಈಜಿಪ್ಟ್ ನ ಮೊದಲ ಪ್ರಜಾಪ್ರಭುತ್ವ ಸರ್ಕಾರದ ನಾಯಕ ಇಸ್ಲಾಮಿಸ್ಟ್ ಮೊಹಮ್ಮದ್ ಮೊರ್ಸಿ ಯನ್ನು 2013 ರಲ್ಲಿ ಅಧಿಕಾರದಿಂದ ಹೊರಹಾಕಲಾಗಿತ್ತು. ಇದಕ್ಕೆ ಕಾರಣ ಅವರು ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿ ವ್ಯಕ್ತವಾದ ತೀವ್ರ ಪ್ರತಿಭಟನೆ. ಆಗ ನಡೆದ ದಂಗೆಯ ಬಳಿಕ ಅಧ್ಯಕ್ಷರಾದ ಅಬ್ದೆಲ್ ಫತ್ತಾಹ್ ಅಲ್-ಸಿಸಿ ತಮ್ಮ ವಿರೋಧಿಗಳನ್ನು ಮಟ್ಟ ಹಾಕುತ್ತಿದ್ದು ಈಗಲೂ ಇದು ಮುಂದುವರೆದಿದೆ. 
  7. ಗಿನಿಯಾ ಬಿಸ್ಸೌ: ಜನರಲ್  ಆಂಟೋನಿಯೊ ಇಂಜೈ ನೇತೃತ್ವದಲ್ಲಿ ನಡೆದ ಸೇನಾ ದಂಗೆಯಲ್ಲಿ ಹಂಗಾಮಿ ಅಧ್ಯಕ್ಷ ರೈಮುಂಡೋ ಪಿರೇರಾ ಅವರನ್ನುಪದಚ್ಯುತಗೊಳಿಸಲಾಗಿತ್ತು. 2012 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ 2 ಸುತ್ತಿನ ಚುನಾವಣೆಯ ನಡುವೆ ಈ ಘಟನೆ ನಡೆದಿತ್ತು. ಒಂದು ಕಾಲದಲ್ಲಿ ಪೋರ್ಚುಗೀಸರ ವಸಾಹತಾಗಿದ್ದ ಈ ದೇಶ 3 ವರ್ಷಗಳ ಅಂತರದಲ್ಲಿ 2 ಸೇನಾ ದಂಗೆಗಳನ್ನು ಕಂಡಿದೆ.
  8. ನೈಜರ್: 2010 ರಲ್ಲಿ ನಡೆದ ಸೇನಾ ದಂಗೆಯಲ್ಲಿ ಅಧ್ಯಕ್ಷ ಮಮಡೌ ತಾಂಡ್ಜಾ ಅವರನ್ನು ಪದಚ್ಯುತಗೊಳಿಸಲಾಗುತ್ತದೆ. ಇದಕ್ಕೂ ಕೆಲವೇ ತಿಂಗಳುಗಳ ಮುನ್ನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮಮಡೌ ತಾಂಡ್ಜಾ ಸಂಸತ್ ನ್ನು ವಿಸರ್ಜನೆ ಮಾಡಿದ್ದರು. ತಾಂಡ್ಜಾ ಅವರ ನಂತರ ಅಧಿಕಾರ ವಹಿಸಿಕೊಂಡಿದ್ದ ಮಹಾಮದೌ ಇಸೌಫೌ ಅಧಿಕಾರಾವಧಿ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp