ಹಿಮದಲ್ಲಿ ನೃತ್ಯ: ಮೈನಸ್ 20 ಡಿಗ್ರಿಯಲ್ಲಿ ಭಾಂಗ್ರಾ ಡ್ಯಾನ್ಸ್, ವಿಡಿಯೋ ವೈರಲ್
ಡ್ಯಾನ್ಸ್ ಮಾಸ್ಟರ್ ಗುರ್ದೀಪ್ ಪಾಂಧೆರ್ ಹಾಗೂ ತಂಡ ಮೈನಸ್ 20 ಡಿಗ್ರಿಯಲ್ಲಿ 'ಭಾಂಗ್ರಾ' ನೃತ್ಯ ಮಾಡುವ ಮೂಲಕ ಪ್ರಪಂಚದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದ್ದಾರೆ.
Published: 05th February 2021 09:53 PM | Last Updated: 05th February 2021 09:53 PM | A+A A-

ಯುಕಾನ್: ಡ್ಯಾನ್ಸ್ ಮಾಸ್ಟರ್ ಗುರ್ದೀಪ್ ಪಾಂಧೆರ್ ಹಾಗೂ ತಂಡ ಮೈನಸ್ 20 ಡಿಗ್ರಿಯಲ್ಲಿ 'ಭಾಂಗ್ರಾ' ನೃತ್ಯ ಮಾಡುವ ಮೂಲಕ ಪ್ರಪಂಚದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದ್ದಾರೆ.
ಕೆನಡಾದ ಹಿಮದಿಂದ ಆವೃತವಾದ ಯುಕಾನ್ನಲ್ಲಿ ಗುರ್ದೀಪ್ ಪಾಂಧೆರ್ ಹಾಗೂ ತಂಡದ ಭಂಗ್ರಾ ನೃತ್ಯ ಈಗ ಟ್ವಿಟರ್ನಲ್ಲಿ ವೈರಲ್ ಆಗಿದೆ.
ತಮ್ಮ ನೃತ್ಯ ತರಗತಿಯ ವೀಡಿಯೊವನ್ನು ಶೇರ್ ಮಾಡಿರುವ ಪಾಂಧೆರ್ ಅವರು, "ಯುಕಾನ್ನಲ್ಲಿ ಹೊರಾಂಗಣ ಚಳಿಗಾಲದ ಭಂಗ್ರಾ ಕ್ಲಾಸ್ ಇದು. ಅದು ಮೈನಸ್ 20 ಡಿಗ್ರಿ ಸೆಲ್ಸಿಯಸ್ ಇದ್ದಾಗ ಹಿಮದ ಮೇಲೆ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಯಲು ಸಾಮಾಜಿಕ ಅಂತ ಕಾಯ್ದುಕೊಂಡು ಮಾಡಿದ ನೃತ್ಯ ಮಾಡಲಾಗಿದೆ. ಯುಕಾನ್ನ ಫ್ರೆಂಚ್ ಸಮುದಾಯದ ಈ ಸ್ನೇಹಿತರು ನನ್ನೊಂದಿಗೆ ಸೇರಿಕೊಂಡಿದ್ದು ಸಂತೋಷ ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ, ಪಾಂಧೆರ್ ತನ್ನ ವಿದ್ಯಾರ್ಥಿಗಳೊಂದಿಗೆ ಯುಕಾನ್ ನಲ್ಲಿರುವ ಫ್ರೆಂಚ್ ಸಮುದಾಯದ ಟೋಪಿಗಳು ಮತ್ತು ಕೈಗವಸುಗಳು ಸೇರಿದಂತೆ ಚಳಿಗಾಲದ ಬಟ್ಟೆ ಧರಿಸಿರುವುದನ್ನು ಕಾಣಬಹುದು.
Outdoor winter Bhangra class in the Yukon. When it was -20ºC (feeling like -30ºC with windchill) & the pandemic on top of that, these friends from the Yukon's French community joined me for a "physically-distanced and pandemic-safe" bhangra class for joy, exercise and positivity. pic.twitter.com/wkWK3WxZoq
— Gurdeep Pandher of Yukon (@GurdeepPandher) February 3, 2021