ಟೀಕೆಗಳ ಹೊರತಾಗಿಯೂ ಪ್ರತಿಭಟನಾ ನಿರತ ರೈತರಿಗೆ ಮಿಯಾ ಖಲೀಫಾ ಬೆಂಬಲ, ಟೀಕಾಕಾರರಿಗೆ ಹೇಳಿದ್ದೇನು?

ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಟೀಕೆಗಳ ಹೊರತಾಗಿಯೂ ರೈತರ ಪರವಾಗಿಯೇ ನಿಲ್ಲುತ್ತೇನೆ ಎಂದು ಪುನರುಚ್ಛರಿಸಿದ್ದಾರೆ.

Published: 05th February 2021 03:58 PM  |   Last Updated: 05th February 2021 04:28 PM   |  A+A-


Mia Khalifa

ಮಿಯಾ ಖಲಿಫಾ

PTI

ನವದೆಹಲಿ: ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಟೀಕೆಗಳ ಹೊರತಾಗಿಯೂ ರೈತರ ಪರವಾಗಿಯೇ ನಿಲ್ಲುತ್ತೇನೆ ಎಂದು ಪುನರುಚ್ಛರಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಮಿಯಾ ಖಲೀಫಾ, ಇವರು ಪೇಯ್ಡ್ ನಟರಾ? ಕಾಸ್ಟಿಂಗ್ ಡೈರೆಕ್ಟರ್ ಚೆನ್ನಾಗಿದ್ದಾರೆ. ಪ್ರಶಸ್ತಿ ವೇಳೆ ಅವರನ್ನು ಕಡೆಗಣಿಸುವುದಿಲ್ಲ ಎಂದು ಅಂದುಕೊಳ್ಳುವೆ. ನಾನು ರೈತರಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ– ವಿರೋಧ ಚರ್ಚೆಗಳಾಗಿದ್ದು ಹಲವು ನೆಟ್ಟಿಗರು ಮಿಯಾಳನ್ನು ಲೇವಡಿ ಮಾಡಿದ್ದರು. ನೀಲಿ ಚಿತ್ರ ತಾರೆಯೂ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹುಬ್ಬೇರಿಸಿದ ನೆಟ್ಟಿಗರು ಟ್ವಿಟರ್​ನಲ್ಲಿ ಸನ್ನಿ ಲಿಯೋನ್, ಜಾನಿ ಸಿನ್ಸ್ ಹೆಸರು ಟ್ರೆಂಡ್ ಮಾಡಿದ್ದರು. ಅಷ್ಟೇ ಅಲ್ಲದೆ ಮಿಯಾ ಖಲೀಫಾ ಬಗ್ಗೆ ಹಲವಾರು ಟ್ರೋಲ್, ಮೀಮ್​ಗಳನ್ನು ಹರಿಯಬಿಟ್ಟಿದ್ದರು.

ರೈತರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ಟ್ರೋಲ್​ಗೆ ಗುರಿಯಾಗಿದ್ದ ಮಿಯಾ ಅವರಲ್ಲಿ ಟ್ವೀಟಿಗರು ಕೆಲವು ಪ್ರಶ್ನೆಗಳನ್ನು ಕೇಳಿ ಕೆದಕಿದಾಗ ಈಕೆ ತಕ್ಕ ಉತ್ತರ ನೀಡಿ ಟ್ರೋಲಿಗರ ಬಾಯ್ಮುಚ್ಚಿಸಿದ್ದಾರೆ. ಬುಧವಾರ ಶುಭಂ ಸಿಂಗ್ ಎಂಬ ಟ್ವೀಟಿಗರೊಬ್ಬರು ನಿಮ್ಮ ಬಗ್ಗೆ ನಿಮ್ಮ ಹಿರೀಕರು ಎಷ್ಟು ಹೆಮ್ಮೆ ಪಡುತ್ತಿರಬಹುದು ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಉತ್ತರಿಸಿದ ಮೀಯಾ,  ತನ್ನ ತಾಯ್ನಾಡಾದ ಲೆಬನಾನ್​ನ ರೆಡ್ ಕ್ರಾಸ್ ಸಂಸ್ಥೆಗೆ 5,000 ಡಾಲರ್ ಹಣ ದೇಣಿಗೆ ನೀಡಿರುವ ಸ್ಕ್ರೀನ್ ಶಾಟ್ ಲಗತ್ತಿಸಿ ಉತ್ತರ ನೀಡಿದ್ದಾರೆ. ನಾನು ನನ್ನ ತಾಯ್ನಾಡಿನ ರೆಡ್ ಕ್ರಾಸ್ ಸಂಸ್ಥೆಗೆ ಮತ್ತಷ್ಟು ಹಣ ದೇಣಿಗೆ ನೀಡಲಿದ್ದೇನೆ. ನನ್ನ ಹಿರೀಕರು ಇನ್ನು ಸ್ವಲ್ಪ ಆರಾಮವಾಗಿರಲಿ ಎಂದು ಹೇಳಿದ್ದಾರೆ.

ಅಲ್ಲದೆ  ಭಾರತದಲ್ಲಿ ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್ ರ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಫೋಟೋ ಟ್ವೀಟ್ ಮಾಡಿರುವ ಮಿಯಾ, 'ನಾನು ಪ್ರಜ್ಞೆಯನ್ನು ಮರಳಿ ಪಡೆದುಕೊಂಡಿದ್ದೇನೆ ಮತ್ತು ಅನಗತ್ಯವಾಗಿದ್ದರೂ ನಿಮ್ಮ ಕಾಳಜಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆದರೂ ರೈತರ ಪರವಾಗಿಯೇ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಮೆರಿಕದ ಪಾಪ್ ತಾರೆ ರಿಹಾನ್ನಾ, ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಮತ್ತು ಮಾಜಿ ಪೋರ್ನ್ ತಾರೆ ಮಿಯಾ ಖಲೀಫಾ, ಅಮೆರಿಕದ ವಕೀಲೆ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ, ನಟಿ ಅಮಾಂಡಾ ಸೆರ್ನಿ, ಗಾಯಕರಾದ ಜೇ ಸೀನ್ ಮತ್ತು ಡಾ ಜೀಯಸ್ ಮತ್ತು ಹಾಲಿವುಡ್ ತಾರೆ ಜಾನ್ ಕುಸಾಕ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  


Stay up to date on all the latest ಅಂತಾರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp