ರಾಜಕೀಯ ಚರ್ಚೆಗಳಾಗುತ್ತಿದ್ದ 'ಕ್ಲಬ್ ಹೌಸ್' ಆ್ಯಪ್‌ ಗೆ ಚೀನಾ ನಿಷೇಧ

ಚೀನಾದಲ್ಲಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಚರ್ಚೆಗಳನ್ನು ಮಾಡಲು ಬಳಕೆ ಮಾಡಲಾಗುತ್ತಿದ್ದ ಕ್ಲಬ್ ಹೌಸ್ ಆ್ಯಪ್‌ ನ್ನು  ಚೀನಾದ ಅಧಿಕಾರಿಗಳು ನಿಷೇಧಿಸಿದ್ದಾರೆ.

Published: 09th February 2021 04:32 PM  |   Last Updated: 09th February 2021 05:16 PM   |  A+A-


Now, China blocks social media app Clubhouse used for political discussion

ರಾಜಕೀಯ ಚರ್ಚೆಗಳಾಗುತ್ತಿದ್ದ 'ಕ್ಲಬ್ ಹೌಸ್' ಆ್ಯಪ್‌ ಗೆ ಚೀನಾ ನಿಷೇಧ

Posted By : Srinivas Rao BV
Source : The New Indian Express

ಬೀಜಿಂಗ್: ಚೀನಾದಲ್ಲಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಚರ್ಚೆಗಳನ್ನು ಮಾಡಲು ಬಳಕೆ ಮಾಡಲಾಗುತ್ತಿದ್ದ ಕ್ಲಬ್ ಹೌಸ್ ಆ್ಯಪ್‌ ನ್ನು ಚೀನಾದ ಅಧಿಕಾರಿಗಳು ನಿಷೇಧಿಸಿದ್ದಾರೆ. 

ತೈವಾನ್, ದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿ ಸೇರಿದಂತೆ ದೇಶದ ಹಲವು ಬೆಳವಣಿಗೆಗಳ ವಿಷಯದ ಬಗ್ಗೆ ಸೇರಿದಂತೆ ವಿದೇಶಗಳಲ್ಲಿರುವವರೊಂದಿಗೆ ಚೀನಾದಲ್ಲಿರುವವರು ಚರ್ಚೆ ಮಾಡುವುದಕ್ಕೆ ಕ್ಲಬ್ ಹೌಸ್ ಆ್ಯಪ್‌ ಅನ್ನು ಬಳಕೆ ಮಾಡಲಾಗುತ್ತಿತ್ತು. 

ಚೀನಾಗೆ ಸಂಬಂಧಿಸಿದ ಯಾವ ಮಾಹಿತಿಗಳನ್ನು ಅಲ್ಲಿನ ಸಾರ್ವಜನಿಕರು ಹಾಗೂ ಜಾಗತಿಕ ಮಟ್ಟದಲ್ಲಿರುವವರು ಓದಬೇಕು ಅಥವಾ ಯಾವುದನ್ನು ಓದಬಾರದೆಂಬುದನ್ನು ನಿಯಂತ್ರಿಸುವ ಸರ್ಕಾರದ ನೀತಿಯ ಭಾಗವಾಗಿ ಕ್ಲಬ್ ಹೌಸ್ ಸಾಮಾಜಿಕ ಜಾಲತಾಣದ ಆ್ಯಪ್‌ ನ್ನು ನಿಷೇಧಿಸಲಾಗಿದೆ. ಕ್ಲಬ್ ಹೌಸ್ ಅಷ್ಟೇ ಅಲ್ಲದೇ ಇಂತಹ ಸಾವಿರಾರು ವೆಬ್ ಸೈಟ್ ಗಳು ಹಾಗೂ ಆ್ಯಪ್‌ ಗಳಿಗೆ ಚೀನಾ ನಿಷೇಧ ವಿಧಿಸಿದೆ. 

ಫೆ.08 ರಂದು ಸಂಜೆ 7 ರಿಂದ ಆ್ಯಪ್‌ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಗ್ರೇಟ್ ಫೈರ್.ಆರ್ಗ್ ಎಂಬ ಅಮೆರಿಕ ಮೂಲದ ಎನ್ ಜಿಒ ಮಾಹಿತಿ ನೀಡಿದೆ. 

ಚೀನಾದ ಕ್ಸಿ ಜಿನ್ಪಿಂಗ್ ನೇತೃತ್ವದ ಸರ್ಕಾರ ಇಂಟರ್ ನೆಟ್ ಫಿಲ್ಟರ್ ಗಳು ಇರುವುದನ್ನು ಒಪ್ಪಿಕೊಳ್ಳುವುದಕ್ಕೆ ನಿರಾಕರಿಸುತ್ತಿದೆ. ಆದರೆ ಜಾಗತಿಕ ಸಂಶೋಧಕರು ಸರ್ಕಾರಿ ಸ್ವಾಮ್ಯದ ಚೀನಾ ಟೆಲಿಕಾಮ್ ಲಿಮಿಟೆಡ್ ನಲ್ಲಿನ ಸರ್ವರ್ ಗಳಲ್ಲಿ  ತಡೆಗಳನ್ನು ಪತ್ತೆ ಮಾಡಿದ್ದು, ಚೀನಾ ಹಾಗೂ ಬೇರೆಡೆಗಳಿಂದ ವೆಬ್ ಸೈಟ್ ಗಳನ್ನು ಬಳಕೆ ಮಾಡುವವರು ಈ ಸರ್ವರ್ ಗಳ ಮೂಲಕವೇ ಅವುಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಲಿದೆ. ಚೀನಾದಲ್ಲಿ ಫೇಸ್ ಬುಕ್, ಟ್ವಿಟರ್ ಗಳಿಗೂ ನಿಷೇಧವಿದ್ದು, ಟಿಬೆಟ್, ಪ್ರಜಾಪ್ರಭುತ್ವದ ಪರವಾಗಿರುವ ವೆಬ್ ಸೈಟ್ ಗಳಿಗೂ ನಿಷೇಧವಿದೆ.


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp